ಬೆಂಗಳೂರು: ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ ಮತ್ತು ಬೆಂಗಳೂರು ಹೋಟೆಲ್ ಅಸೋಸಿಯೇಷನ್ ವತಿಯಿಂದ ಜೂನ್ 15 ರಂದು ಉದ್ಯೋಗ ಮೇಳವನ್ನು ಆಯೋಜನೆ ಮಾಡಿದೆ. ಈ ಕುರಿತಾಗಿ ಪ್ರಕಟಣೆ ಹೊರಡಿಸಲಾಗಿದೆ.
ಕೆಎಸ್ ಡಿಸಿ ಕಛೇರಿಯ ಕಲ್ಯಾಣ ಸುರಕ್ಷಾ ಭವನ, 4ನೇ ಮಹಡಿ, ಡೈರಿ ಸರ್ಕಲ್, ಬನ್ನೇರುಘಟ್ಟ ರಸ್ತೆ, ಬೆಂಗಳೂರು-29 ಬೆಳಗ್ಗೆ 09.30 ರಿಂದ ಉದ್ಯೋಗ ಮೇಳ ಆಯೋಜಿಸಲಾಗಿದೆ.
ಹುದ್ದೆಯ ವಿವರ:
ಸ್ಟೀವರ್ಡ್, ಕ್ಯಾಪ್ಟನ್, ಅಡುಗೆ ಸಹಾಯಕ, ಮಾಣಿ, ಮೇಲ್ವಿಚಾರಕ, ಬಾಣಸಿಗ ಸೇರಿದಂತೆ ಇತರೆ ವಿಭಾಗಗಳಲ್ಲಿ ಕೆಲಸ ನಿರ್ವಹಿಸಲು ಉದ್ಯೋಗಾವಕಾಶವಿದೆ.
ಅರ್ಹತಾ ವಿವರಗಳು ಹೀಗಿದೆ:
10ನೇ ತರಗತಿ, ಪಿಯುಸಿ, ಡಿಪ್ಲೊಮಾದಲ್ಲಿ ಪಾಸ್ ಅಥವಾ ಅನುತ್ತೀರ್ಣ ಮತ್ತು ಆಸಕ್ತರು ಯಾರೂಬೇಕಾದರು ಭಾಗವಹಿಸಬಹುದಾಗಿದೆ.
ಸಂಬಳ:
ಬೆಂಗಳೂರಿನಲ್ಲಿ ಕೆಲಸ ಮಾಡಲು ಸಿದ್ದರಿರುವ ವ್ಯಕ್ತಿಗಳನ್ನು ನೇಮಿಸಿಕೋಳ್ಳಲಾಗುತ್ತಿದ್ದು, ಇಎಸ್ಐ, ಪಿಎಫ್ಒದಗಿಸುವುದರೊಂದಿಗೆ 13000 ರೂ. ದಿಂದ 16000 ರೂ. ಸಂಬಳ ನೀಡಲಾಗುತ್ತಿದೆ.
ಅರ್ಜಿ ಸಲ್ಲಿಕೆ ಹೇಗೆ?
ಆಸಕ್ತರು ನಿಮಗದ ಜಾಲತಾಣಕ್ಕೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬಹುದು ಅಥವಾ ಜೂನ್ 15ರಂದು ಅಗತ್ಯ ದಾಖಲೆಗಳೊಂದಿಗೆ ನೇರವಾಗಿ ಮೇಳದಲ್ಲಿ ಭಾಗವಹಿಸುವಂತೆ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಯಾಗಿ 9019485688, 08182-255294ಗೆ ಸಂಪರ್ಕಿಸಬಹುದಾಗಿದೆ.