ಬೆಂಗಳೂರು: ಪ್ರತಿಷ್ಠಿತ ರಾಮನ್ ರಿಸರ್ಚ್ ಇನ್ಸ್ಟಿಟ್ಯೂಟ್ನಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗಿದ್ದು, ಆಸಕ್ತರು ತಕ್ಷಣ ಅರ್ಜಿ ಸಲ್ಲಿಸಬಹುದು. ಖಾಲಿ ಇರುವ ಗ್ರಂಥಪಾಲಕ, ವೈಯಕ್ತಿಕ ಸೆಕ್ರೆಟರಿ ಹುದ್ದೆಗಳಿಗೆ ನೇಮಕಗಳು ನಡೆಯಲಿವೆ, ಈ ಹುದ್ದೆಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಸಂಬಳವನ್ನು ರಾಮನ್ ರೀಸರ್ಚ್ ಇನ್‌ಸ್ಟಿಟ್ಯೂಟ್ ಸಂಸ್ಥೆಯ ನೇಮಕಾತಿ ಅಧಿಸೂಚನೆಯ ಪ್ರಕಾರ ನಿಗದಿಪಡಿಸಲಾಗುವುದು.
ರಾಮನ್ ರಿಸರ್ಚ್ ಇನ್‌ಸ್ಟಿಟ್ಯೂಟ್, ಬೆಂಗಳೂರು ಹುದ್ದೆಗಳ ಹೆಸರು : ಲೈಬ್ರರಿಯನ್, ಪರ್ಸನಲ್ ಸೆಕ್ರೆಟರಿ ಕೆಲಸದ ಸ್ಥಳ : ಬೆಂಗಳೂರು, ಕರ್ನಾಟಕ ಅರ್ಜಿ ಸಲ್ಲಿಸುವ ವಿಧಾನ : ಆಫ್ ಲೈನ್ ಸಂಬಳ: ರಾಮನ್ ರೀಸರ್ಚ್ ಇನ್‌ಸ್ಟಿಟ್ಯೂಟ್ ಸಂಸ್ಥೆಯ ನೇಮಕಾತಿ ಅಧಿಸೂಚನೆಯ ಪ್ರಕಾರ ನೀಡಲಾಗುವುದು. ಈ ಹುದ್ದೆಯ ಅಧಿಸೂಚನೆ, ಅರ್ಜಿ ನಮೂನೆಗಾಗಿ (PDF) ಇಲ್ಲಿ ಕ್ಲಿಕ್ ಮಾಡಿ
ಅಭ್ಯರ್ಥಿಗಳ ವಯೋಮಿತಿ: 18 ರಿಂದ 56 ವರ್ಷ ಅಭ್ಯರ್ಥಿಗಳ ವಿದ್ಯಾರ್ಹತೆ: ವಿಜ್ಞಾನದಲ್ಲಿ ಪದವಿ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ
ಅಭ್ಯರ್ಥಿಗಳ ಆಯ್ಕೆ ವಿಧಾನ: ವೈಯಕ್ತಿಕ ಸಂದರ್ಶನದ ಆಧಾರದ ಮೇಲೆ ಅರ್ಜಿ ಸಲ್ಲಿಸುವ ವಿಳಾಸ: ಆಡಳಿತಾಧಿಕಾರಿ, ರಾಮನ್ ಸಂಶೋಧನಾ ಸಂಸ್ಥೆ, ಸಿವಿ ರಾಮನ್ ಅವೆನ್ಯೂ, ಸದಾಶಿವನಗರ, ಬೆಂಗಳೂರು – 560080
ನೇಮಕಾತಿಗೆ ಸಂಬಂಧಪಟ್ಟಂತೆ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 10-08-2024 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14-10-2024