ಮನೆ ಉದ್ಯೋಗ ಬೆಂಗಳೂರು ಆಧಾರ್​ ಕೇಂದ್ರದಲ್ಲಿದೆ ಕೆಲಸ ಖಾಲಿ ಇದೆ

ಬೆಂಗಳೂರು ಆಧಾರ್​ ಕೇಂದ್ರದಲ್ಲಿದೆ ಕೆಲಸ ಖಾಲಿ ಇದೆ

0

ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ  ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಬೆಂಗಳೂರಿನ ಯುಐಡಿಎಐಯಲ್ಲಿ 14 ತಾಂತ್ರಿಕ ಅಧಿಕಾರಿ , ಉಪ ನಿರ್ದೇಶಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಸೂಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜುಲೈ 18 ಆಗಿದೆ.

ಡೆಪ್ಯೂಟೆಶನ್​ ಆಧಾರದ ಮೇಲೆ ಈ ಹುದ್ದೆ ಭರ್ತಿಗೆ ಮುಂದಾಗಲಾಗಿದೆ. ಈಗಾಗಲೇ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಭ್ಯರ್ಥಿಗಳು ಈ ಡೆಪ್ಯೂಟೆಶನ್​ ಆಧಾರದ ಮೇಲೆ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆ ಆಯ್ಕೆ, ನೇಮಕಾತಿ ಸೇರಿದಂತೆ ಇನ್ನಿತರ ಮಾಹಿತಿ ಇಲ್ಲಿದೆ.

ತಾಂತ್ರಿಕ ಅಧಿಕಾರಿ, ಉಪ ನಿರ್ದೇಶಕರ ಹುದ್ದೆಗೆ 14 ಹುದ್ದೆಗಳು ಖಾಲಿ ಇದ್ದು, ಬೆಂಗಳೂರಲ್ಲಿ ಕೆಲಸ ಮಾಡಲು ಇಚ್ಛಿಸುವವರು ಅರ್ಜಿ ಸಲ್ಲಿಸಬಹುದಾಗಿದೆ. ವೇತನ ಯುಐಡಿಎಐ ನಿಯಮಗಳ ಪ್ರಕಾರ ಇರಲಿದೆ.

ವಿದ್ಯಾರ್ಹತೆ: ಉಪ ನಿರ್ದೇಶಕರು (ತಂತ್ರಜ್ಞಾನ), ಸಹಾಯಕ ನಿರ್ದೇಶಕರು (ತಂತ್ರಜ್ಞಾನ), ತಾಂತ್ರಿಕ ಅಧಿಕಾರಿ: ಎಂಜಿನಿಯರಿಂಗ್/ತಂತ್ರಜ್ಞಾನದಲ್ಲಿ ಪದವಿ, ಕಂಪ್ಯೂಟರ್ ಅಪ್ಲಿಕೇಶನ್‌ಗಳಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು.

ಸೆಕ್ಷನ್ ಆಫೀಸರ್, ಅಸಿಸ್ಟೆಂಟ್ ಸೆಕ್ಷನ್ ಆಫೀಸರ್: ಯುಐಡಿಎಐ ನೇಮಕಾತಿ ನಿಯಮಗಳ ಪ್ರಕಾರ ಸಹಾಯಕ ತಾಂತ್ರಿಕ ಅಧಿಕಾರಿ: ಎಂಜಿನಿಯರಿಂಗ್ / ತಂತ್ರಜ್ಞಾನದಲ್ಲಿ ಪದವಿ, ಕಂಪ್ಯೂಟರ್ ಅಪ್ಲಿಕೇಶನ್‌ಗಳಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು.

ವಯಸ್ಸಿನ ಮಿತಿ: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 56 ವರ್ಷಗಳಿಗಿಂತ ಕಡಿಮೆಯಿರಬೇಕು.

ವಯಸ್ಸಿನ ಸಡಿಲಿಕೆ: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ ನಿಯಮಗಳ ಪ್ರಕಾರ

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮತ್ತು ಸಂದರ್ಶನ

ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 03 ಜೂನ್​ 2022

ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 18 ಜುಲೈ 2022

ಅಧಿಕೃತ ವೆಬ್‌ಸೈಟ್: uidai.gov.in

ಅರ್ಜಿ ಸಲ್ಲಿಕೆ ವಿಧಾನ

 ನೇಮಕಾತಿ ಅಧಿಸೂಚನೆಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.

ಅಧಿಕೃತ ಅಧಿಸೂಚನೆಯಿಂದ ಅರ್ಜಿಯನ್ನು ಡೌನ್‌ಲೋಡ್ ಮಾಡಿ ಮತ್ತು ನಿಗದಿತ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ.

ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಅರ್ಜಿ ಜೊತೆ ಲಗತ್ತಿಸಿ ಕೊನೆಯದಾಗಿ ಅರ್ಜಿ ನಮೂನೆಯನ್ನು `ನಿರ್ದೇಶಕರು (HR), ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI), ಆಧಾರ್ ಕಾಂಪ್ಲೆಕ್ಸ್, NTI ಲೇಔಟ್, ಟಾಟಾ ನಗರ, ಕೊಡಿಗೇಹಳ್ಳಿ, ತಂತ್ರಜ್ಞಾನ ಕೇಂದ್ರ, ಬೆಂಗಳೂರು-560092’ ವಿಳಾಸಕ್ಕೆ ನಿಗದಿತ ದಿನಾಂಕದೊಳಗೆ ಕಳುಹಿಸಬೇಕಿದೆ.

ಹಿಂದಿನ ಲೇಖನಭಾರಿ ಮಳೆ: ಶೃಂಗೇರಿ-ಆಗುಂಬೆ ಮಾರ್ಗದಲ್ಲಿ ರಸ್ತೆ ಕುಸಿತ
ಮುಂದಿನ ಲೇಖನಮುಂದುವರಿದ ಮಳೆ: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕಾವೇರಿ