ಮನೆ ಉದ್ಯೋಗ ಬಿಎಂಟಿಸಿಯಲ್ಲಿದೆ ಉದ್ಯೋಗ; ಬಿಇ ಆದವರಿಗೆ ಅವಕಾಶ

ಬಿಎಂಟಿಸಿಯಲ್ಲಿದೆ ಉದ್ಯೋಗ; ಬಿಇ ಆದವರಿಗೆ ಅವಕಾಶ

0

ಬೆಂಗಳೂರು ಮಹಾನಗರ ಸಾರಿಗೆ ನಿಗಮದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಸಾಫ್ಟ್‌ವೇರ್ ಇಂಜಿನಿಯರ್ , ಸಿಸ್ಟಮ್ ಅಡ್ಮಿನಿಸ್ಟ್ರೇಟರ್ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜುಲೈ 8 ಕಡೆಯ ದಿನಾಂಕವಾಗಿದೆ.

ಒಂದು ವರ್ಷದ ಗುತ್ತಿಗೆ ಆಧಾರದ ಮೇಲೆ ಈ ತಾಂತ್ರಿಕ ಹುದ್ದೆ ನೇಮಕಾತಿ ನಡೆಯಲಿದೆ. ಈ ಹುದ್ದೆ ನೇಮಕಾತಿ, ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿ ಸಲ್ಲಿಕೆ ಕುರಿತ ಇನ್ನಿತರ ಮಾಹಿತಿ ಈ ಕೆಳಗಿನಂತಿದೆ.

ಸಂಸ್ಥೆಯ ಹೆಸರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ

ಹುದ್ದೆಯ ಹೆಸರು: ಸಾಫ್ಟ್‌ವೇರ್ ಇಂಜಿನಿಯರ್, ಸಿಸ್ಟಮ್ ಅಡ್ಮಿನಿಸ್ಟ್ರೇಟರ್

ಹುದ್ದೆಗಳ ಸಂಖ್ಯೆ: ನಿರ್ದಿಷ್ಟಪಡಿಸಲಾಗಿಲ್ಲ

ಉದ್ಯೋಗ ಸ್ಥಳ: ಬೆಂಗಳೂರು

ಸಂಬಳ: ಬಿಎಂಟಿಸಿ ನಿಯಮಗಳ ಪ್ರಕಾರ

ಹುದ್ದೆ: ಸಾಫ್ಟ್​​ವೇರ್​ ಇಂಜಿನಿಯರ್, ಸಿಸ್ಟಮ್ ಅಡ್ಮಿನಿಸ್ಟ್ರೇಟರ್, ಸೀನಿಯರ್ ಸಾಫ್ಟ್‌ವೇರ್ ಇಂಜಿನಿಯರ್

ವಿದ್ಯಾರ್ಹತೆ : ಕಂಪ್ಯೂಟರ್​ ಸೈನ್ಸ್​ನಲ್ಲಿ ಬಿಎಸ್ಸಿ, ಬಿಇ, ಬಿಟೆಕ್​, ಎಂಸಿಎ, ಬಿಸಿಎ, ಬಿಇ, ಬಿಟೆಕ್​, ಎಂಸಿಎ, ಬಿಸಿಎ ಅಥವಾ ಡಿಪ್ಲೊಮಾ, ಬಿಇ, ಬಿಟೆಕ್​ ಎಂಸಿಎ

ಅನುಭವ: ಸಾಫ್ಟ್​​ವೇರ್​ ಇಂಜಿನಿಯರ್ ಮತ್ತು ಸಿಸ್ಟಮ್ ಅಡ್ಮಿನಿಸ್ಟ್ರೇಟರ್ ಹುದ್ದೆಗಳಿಗೆ ಫ್ರೆಶರ್​ಗಳು ಕೂಡ ಅರ್ಜಿ ಸಲ್ಲಿಸಬಹುದಾಗಿದೆ.

ಸೀನಿಯರ್ ಸಾಫ್ಟ್‌ವೇರ್ ಇಂಜಿನಿಯರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎರಡು ವರ್ಷ ಸಂಬಂಧಿತ ಕ್ಷೇತ್ರದಲ್ಲಿ ಸೇವಾ ಅನುಭವ ಹೊಂದಿರಬೇಕು.

ವಯಸ್ಸಿನ ಮಿತಿ: ಬೆಂಗಳೂರು ಮಹಾನಗರ ಸಾರಿಗೆ ನಿಗಮದ ನೇಮಕಾತಿ ಅಧಿಸೂಚನೆಯ ನೇಮಕಾತಿ ನಿಯಮಗಳ ಪ್ರಕಾರ ವಯಸ್ಸಿನ ಮಿತಿಯನ್ನು ಹೊಂದಿರಬೇಕು.

ವಯಸ್ಸಿನ ಸಡಿಲಿಕೆ:

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನಿಯಮಾವಳಿಗಳ ಪ್ರಕಾರ

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮತ್ತು ಸಂದರ್ಶನ

ಅರ್ಜಿ ಸಲ್ಲಿಕೆ: ಇ-ಮೇಲ್​​ ಮುಖಾಂತರ

ಅರ್ಜಿ ಸಲ್ಲಿಸುವ ಇಮೇಲ್ ವಿಳಾಸ: systemsupervisor@mybmtc.com

ಪ್ರಮುಖ ದಿನಾಂಕ

ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: ಜೂನ್​ 23, 2022

ಇ-ಮೇಲ್ ಕಳುಹಿಸಲು ಕೊನೆಯ ದಿನಾಂಕ: 08 ಜುಲೈ 2022

 ಪ್ರಮುಖ ಲಿಂಕ್‌ಗಳು

ಅಧಿಕೃತ ವೆಬ್‌ಸೈಟ್: mybmtc.karnataka.gov.in

ಅರ್ಜಿ ಸಲ್ಲಿಕೆ ವಿಧಾನ

ನೇಮಕಾತಿ ಅಧಿಸೂಚನೆಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.

ನಿಗದಿತ ಅರ್ಜಿ ನಮೂನೆಯಲ್ಲಿ ಸ್ವಯಂ ದೃಢೀಕರಿಸಿದ ಅರ್ಜಿಗಳನ್ನು ಮೇಲ್ಕಂಡ ಇಮೇಲ್​ ವಿಳಾಸಕ್ಕೆ ನಿಗದಿತ ದಿನಾಂಕದೊಳಗೆ ಕಳುಹಿಸಬೇಕು.

-ಅರ್ಜಿಜೊತೆಗೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ ಮೇಲೆ ತಿಳಿಸಿದ ಇ ಮೇಲ್​​ ​ ವಿಳಾಸಕ್ಕೆ ಕಳುಹಿಸಬೇಕು.

ಹಿಂದಿನ ಲೇಖನನಿರ್ಮಾಪಕ ಕಿಶೋರ್ ಪತ್ತಿಕೊಂಡ ಅವರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ
ಮುಂದಿನ ಲೇಖನಗೃಹ ಬಳಕೆ ಎಲ್ ಪಿಜಿ ಸಿಲಿಂಡರ್ ದರ ಏರಿಕೆ