ಕ್ಷಿಪ್ರೇ ಮೈತ್ರೇ ವಿತ್ಸಿರ್ಕೇಜ್ಯವಾರೇ ಸೌಮ್ಯೇ ಲಗ್ನೇರ್ಕೇ ಕುಜೀ ವಾ ಖಲಾಭೇ| ಯೋನೇರ್ಮೖತ್ರ್ಯಾಂ
ರಾಶಿಪೋಶ್ಚಾಪಿ ಮೈತ್ರ್ಯಾಂ ಸೇವಾ ಕಾರ್ಯ ಸ್ವಾಮಿನಃ ಸೇವಕೇನ್||
ಕ್ಷಿಪಸಂಜ್ಞಕ, ಮೈತ್ರಸಂಜ್ಞಕ, ನಕ್ಷತ್ರದಲ್ಲಿ ಬುಧ, ಗುರು, ಶುಕ್ರ, ರವಿವಾರಗಳಲ್ಲಿ ಶುಭ ಗ್ರಹ ಲಗ್ನದಲ್ಲಿದ್ದರೆ,ರವಿ ಮತ್ತು ಮಂಗಳ ದಶಮ ಅಥವಾ ಏಕಾದಶ ಭಾವದಲ್ಲಿದ್ದರೆ ಸೇವ್ಯ ಯಜಮಾನ ಮತ್ತು ಸೇವಕ ಇಬ್ಬರ ಯೋನಿ ಮತ್ತು ರಾಶಿಗಳ ಮೈತ್ರಿಯಿದ್ದರೆ, ಇಂಥ ಮೂಹೂರ್ತದಲ್ಲಿ ಸೇವಕನು ಯಜಮಾನನ ಸೇವೆ ಮಾಡಬೇಕು.
ಸಾಲ ಕೊಡು ತೆಗೆದುಕೊಳ್ಳುವುದು :
ಸ್ವಾತ್ಯಾದಿತ್ಯ ಮೃದುದ್ವಿದೈವಗುರುಭೇ ಕರ್ಣ ತ್ರಯಾಶ್ಚೇ ಚರೇ,
ಲಗ್ನೆ ಧರ್ಮ್ಮ ಸುತಾಷ್ಟಶುದ್ಧಿಸಹೀತೇ ದೃವ್ಯಪ್ರಯೋಗಃ ಶುಭಃ|
ನಾರೇ ಗ್ರಾಹ್ಯಮೃಣಂತು ಸಂಕ್ರಮದಿನೇ ವೃಧ್ವೌಕರ್ಕೇಹ್ನಿಯತ್
ತದ್ವಂಶೇಷು ಭವೇದೃಣಂ ನ ಚ ಬುಧೇ ದೇಯಂ ಕದಾಚಿದ್ ಧನಮ್||
ಸ್ವಾತಿ,ಪುನರ್ವಸು, ಮೃದ ಸಂಜ್ಞಕ ವಿಶಾಖಾ, ಪುಷ್ಯ, ಶ್ರಾವಣ,ದನಿಷ್ಠಾ ಶತಭಿಷಾ ಅಶ್ವಿನಿ ನಕ್ಷತ್ರಗಳಲ್ಲಿ ಚರ ಲಗ್ನದಲ್ಲಿ ಒಂಬತ್ತು ಎಂಟು ಐದು ಭಾವ ಗ್ರಹರಹಿತವಾಗಿದ್ದರೆ ಧನವನ್ನು ಬಡ್ಡಿಗೆ ಬಿಡಬೇಕು. ಮಂಗಳವಾರ, ಸಂಕ್ರಾಂತಿ, ದಿನ ವೃದ್ಧಿಯೋಗ, ಹಸ್ತ ನಕ್ಷತ್ರ ಮತ್ತು ರವಿವಾರದಲ್ಲಿ ಸಾಲವನ್ನು ಪಡೆಯಬಾರದು. ಇವುಗಳಲ್ಲಿ ಸಾಲ ಪಡೆಯುವುದರಿಂದ ಆ ವಂಶ ಸದಾ ಸಾಲದ ಸುಳಿಯಲ್ಲಿಯೇ ಸಿಲಿಕಿರುತ್ತದೆ ಎಂದಿಗೂ ಬುಧವಾರದಂದು ಸಾಲವನ್ನು ನೀಡಬಾರದು.