ಬೆಂಗಳೂರು (Bengaluru): ರಾಜ್ಯದ ಇಂದಿನ (ಜೂ.5) ಹವಾಮಾನ ವರದಿ ಇಂತಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 31 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಬೀದರ್ 38-27ಸಿ, ದಕ್ಷಿಣ ಕನ್ನಡ 31-26ಸಿ, ರಾಯಚೂರು 39-27ಸಿ, ಉಡುಪಿ 32-27ಸಿ ಬಿಸಿಲು, ಮೋಡ ಕವಿದ ವಾತಾವರಣ, ಕಲ್ಬುರ್ಗಿ 39-28ಸಿ, ಯಾದಗಿರಿ 39-28ಸಿ ಬಿಸಿಲು ಇರಲಿದೆ. ಕಲ್ಬುರ್ಗಿ ಅತ್ಯಧಿಕ 39 ಡಿಗ್ರಿ ಸೆಲ್ಸಿಯಸ್ ಹೊಂದಿದೆ.
ಬಾಗಲಕೋಟೆ 36-24ಸಿ, ಬಳ್ಳಾರಿ 37-26ಸಿ, ವಿಜಯಪುರ 38-25ಸಿ, ಚಿತ್ರದುರ್ಗ 33-22ಸಿ, ಗದಗ 34-23ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.50, ಕೊಪ್ಪಳ 35-24ಸಿ, ವಿಜಯನಗರ 36-26ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ. 40, ಬೆಂಗಳೂರು ಗ್ರಾಮಾಂತರ ಹಾಗೂ ನಗರ 31-21ಸಿ, ಬೆಳಗಾವಿ 32-22ಸಿ, ಹಾಸನ 29-20ಸಿ, ಮಂಡ್ಯ 32-22ಸಿ, ಮೈಸೂರು 32-21ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.70, ಚಾಮರಾಜನಗರ 32-22ಸಿ, ಚಿಕ್ಕಬಳ್ಳಾಪುರ 31-21ಸಿ, ಕೋಲಾರ 33-22ಸಿ, ರಾಮನಗರ 32-22ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ. 80, ಚಿಕ್ಕಮಗಳೂರು 27-18ಸಿ, ಕೊಡಗು 26-18ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ. 90 ರಷ್ಟು ಮಳೆಯಾಗುವ ಸಾಧ್ಯತೆ ಇದೆ ಹವಾಮಾನ ಇಲಾಖೆ ತಿಳಿಸಿದೆ.