ಮನೆ ರಾಜ್ಯ ಕೆ.ಎಸ್​. ಈ​ಶ್ವರಪ್ಪಗೆ ಭಾರೀ ಹಿನ್ನಡೆ: ಮೂರನೇ ಸ್ಥಾನಕ್ಕೆ ಕುಸಿತ

ಕೆ.ಎಸ್​. ಈ​ಶ್ವರಪ್ಪಗೆ ಭಾರೀ ಹಿನ್ನಡೆ: ಮೂರನೇ ಸ್ಥಾನಕ್ಕೆ ಕುಸಿತ

0

ಶಿವಮೊಗ್ಗ: ಬಿಜೆಪಿಯಿಂದ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಕೆ.ಎಸ್​. ಈ​ಶ್ವರಪ್ಪ ಬೆಳಗ್ಗೆ 11:58ರ ವೇಳೆಗೆ ಒಟ್ಟು 17411 ಮತಗಳಿಸಿದ್ದಾರೆ.

Join Our Whatsapp Group

ಬಿಜೆಪಿಯನ್ನು ಎದರು ಹಾಕಿಕೊಂಡು ಸ್ಪರ್ಧಿಸಿರುವ ಈಶ್ವರಪ್ಪ ಅವರಿಗೆ ಮತಗಳ ಹೊಡೆತ ಬಿದ್ದಿದೆ. ಗೆಲುವಿನ ನಿರೀಕ್ಷೆಯಲ್ಲಿದ್ದ ಕೆ.ಎಸ್​. ಈ​ಶ್ವರಪ್ಪ ಅವರನ್ನು ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಭರ್ಜರಿ ಮತಗಳ ಅಂತರದಿಂದ ಹಿಂದಿಕ್ಕಿದ್ದಾರೆ.

ಬೆಳಗ್ಗೆಯಿಂದಲೇ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತ ಫಲಿತಾಂಶದಲ್ಲಿ ಹಣಾಹಣಿ ಏರ್ಪಟ್ಟಿದೆ. ಕ್ಷೇತ್ರದಲ್ಲಿ ಬಿಜೆಪಿಯಿಂದ ಬಿ.ವೈ. ರಾಘವೇಂದ್ರ, ಕಾಂಗ್ರೆಸ್​ಯಿಂದ ಗೀತಾ ಶಿವರಾಜ್​ಕುಮಾರ್, ಹಾಗೇ ಪಕ್ಷೇತರ ಅಭ್ಯರ್ಥಿಯಾಗಿ ಕೆ.ಎಸ್​. ಈ​ಶ್ವರಪ್ಪ ಸ್ಪರ್ಧಿಸಿದ್ದಾರೆ.

ಪುತ್ರನಿಗೆ ಟಿಕೆಟ್ ಕೈತಪ್ಪಿದ ಕಾರಣಕ್ಕಾಗಿ ಬಿಜೆಪಿ ಕಟ್ಟಾಳಾಗಿದ್ದ ಕೆ.ಎಸ್. ಈಶ್ವರಪ್ಪ ಯಡಿಯೂರಪ್ಪ ಮತ್ತು ಕುಟುಂಬದ ವಿರುದ್ಧ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕೆ ಧುಮುಕಿದ್ದರು.

ಹಿಂದಿನ ಲೇಖನಪ್ರಜ್ವಲ್ ರೇವಣ್ಣಗೆ ಸೋಲು: ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಜಯ
ಮುಂದಿನ ಲೇಖನಕೋಲಾರ: ಜೆಡಿಎಸ್​-ಬಿಜೆಪಿ ಮೈತ್ರಿ ಅಭ್ಯರ್ಥಿ ಮಲ್ಲೇಶ್​ ಬಾಬು ಗೆಲುವು