ಮನೆ ರಾಜ್ಯ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಕಲಬುರಗಿ ಹೈಕೋರ್ಟ್‌ ಷರತ್ತುಬದ್ಧ ಅನುಮತಿ

ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಕಲಬುರಗಿ ಹೈಕೋರ್ಟ್‌ ಷರತ್ತುಬದ್ಧ ಅನುಮತಿ

0

ಕಲಬುರಗಿ : ಚಿತ್ತಾಪುರದಲ್ಲಿ ಪಥಸಂಚಲನ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತು ಆರ್‌ಎಸ್‌ಎಸ್‌ ನಡುವೆ ನಡೆಯುತ್ತಿದ್ದ ಹಗ್ಗಜಗ್ಗಾಟಕ್ಕೆ ತೆರೆ ಬಿದ್ದಿದೆ. ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ಕಲಬುರಗಿ ಹೈಕೋರ್ಟ್‌ ಪೀಠ ಷರತ್ತುಬದ್ಧ ಅನುಮತಿ ನೀಡಿದೆ.

ಇದೇ ನವೆಂಬರ್ 16ರಂದು ಮಧ್ಯಾಹ್ನ ಮಧ್ಯಾಹ್ನ 3:30 ರಿಂದ ಸಂಜೆ 5:45ರ ವರೆಗೆ ಪಥ ಸಂಚಲನಕ್ಕೆ ಅವಕಾಶ ಕಲ್ಪಿಸಿದ್ದು, 350 ಗಣವೇಷಧಾರಿಗಳು ಮಾತ್ರ ಪಾಲ್ಗೊಳ್ಳಲು ಕೋರ್ಟ್‌ ಅವಕಾಶ ಕಲ್ಪಿಸಿದೆ. ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ಅನುಮತಿ ನೀಡುವ ಕುರಿತ ಅರ್ಜಿ ವಿಚಾರಣೆ ಇಂದು ಕಲಬುರಗಿ ಹೈಕೋರ್ಟ್ ಪೀಠದ ಹಾಲ್ ನಂಬರ್ 04ರಲ್ಲಿ ನಡೆಯಿತು. ಪಥಸಂಚಲನದಲ್ಲಿ 600 ಗಣವೇಷಧಾರಿಗಳು ಪಾಲ್ಗೊಳ್ಳಲು ಆರ್‌ಎಸ್‌ಎಸ್‌ ಅನುಮತಿ ಕೋರಿತ್ತು. ಆದ್ರೆ ರಾಜ್ಯದ ಅಡ್ವೋಕೇಟ್ ಜನರಲ್ ಶಶಿಕಿರಣ ಶೆಟ್ಟಿ 300 ಜನರಿಗೆ ಮಾತ್ರ ಅವಕಾಶ ಮಾಡಿಕೊಡುವಂತೆ ವಾದ ಮಂಡಿಸಿದ್ರು.

ಇದಕ್ಕೆ ಆರ್‌ಎಸ್‌ಸ್‌ ಪರ ವಕೀಲ ಅರುಣ್ ಶ್ಯಾಂ ಆಕ್ಷೇಪ ವ್ಯಕ್ತಪಡಿಸಿದರು. ಇದು ರಾಷ್ಟ್ರೀಯ ಸ್ವಯಂ ಸೇವಾ ಸಂಘದ 100ನೇ ವರ್ಷದ ಆಚರಣೆ, ಸ್ಥಳೀಯರ ಭಾವನೆ ಇದರೊಂದಿಗೆ ಇದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಗಣವೇಷಧಾರಿಗಳು ಪಾಲ್ಗೊಳ್ಳಲು ಅವಕಾಶ ಮಾಡಿಕೊಂಡುವಂತೆ ಮನವಿ ಮಾಡಿದರು. ಬಳಿಕ ಕೋರ್ಟ್‌ 350 ಮಂದಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿತು. 300 ಜನ ಗಣವೇಷಧಾರಿಗಳಾಗಿ ಹಾಗೂ 50 ಜನ ಬ್ಯಾಂಡ್‌ ಸಮೇತ ಭಾಗವಹಿಸಬಹುದು ಎಂದು ಕೋರ್ಟ್‌ ಸೂಚಿಸಿತು. ಅಲ್ಲದೇ ಮಧ್ಯಾಹ್ನ 3:30 ರಿಂದ ಸಂಜೆ 5:45 ಗಂಟೆವರೆಗೆ ಪಥಸಂಚಲನಕ್ಕೆ ಅವಕಾಶ ಕಲ್ಪಿಸಿ ಆದೇಶಿಸಿತು.