ಮನೆ ಅಪರಾಧ ಕಲಬುರಗಿ ಹನಿಟ್ರ್ಯಾಪ್ ಪ್ರಕರಣ; ದಲಿತ ಸೇನೆ ಅಧ್ಯಕ್ಷ ಸೇರಿ 6 ಜನರ ಬಂಧನ

ಕಲಬುರಗಿ ಹನಿಟ್ರ್ಯಾಪ್ ಪ್ರಕರಣ; ದಲಿತ ಸೇನೆ ಅಧ್ಯಕ್ಷ ಸೇರಿ 6 ಜನರ ಬಂಧನ

0

ಕಲಬುರಗಿ: ಇಡೀ ರಾಜ್ಯವನ್ನ ಅಕ್ಷರಶಃ ಬೆಚ್ಚಿಬಿಳಿಸಿರುವ ಕಲಬುರಗಿಯ ಹನಿಟ್ರ್ಯಾಪ್ ಪ್ರಕರಣದ ಎಲ್ಲಾ ಆರೋಪಿಗಳನ್ನ ಕೊನೆಗೂ ಖಾಕಿ ಹೆಡೆಮುರಿ ಕಟ್ಟಿದೆ.

Join Our Whatsapp Group

ಕೇಸ್​ ನಲ್ಲಿ ಎ1 ಆರೋಪಿ ಆಗಿರುವ ಪ್ರಭು ಹಿರೇಮಠ ಮತ್ತು ರಾಜು ಲೇಂಗಟಿಯನ್ನ ಮಾತ್ರ ಬಂಧಿಸಿ ಸೈಲೆಂಟ್ ಆಗಿತ್ತು. ಹೀಗಾಗಿ ಪೊಲೀಸರ ವಿರುದ್ದ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಉಳಿದ ಆರೋಪಿಗಳು ಪ್ರಭಾವಿಗಳಾದ ಹಿನ್ನಲೆ ಬಂಧಿಸುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿತ್ತು. ಆದ್ರೆ, ನಿನ್ನೆ(ಸೆ.09) ರಾತೋರಾತ್ರಿ ಪ್ರಕರಣದ ಉಳಿದೆಲ್ಲ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

ರಾತ್ರಿ ಸೈಬರ್ ಕ್ರೈಂ ಠಾಣೆ ಪೊಲೀಸರು ದಲಿತಸೇನೆ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ, ಮಂಜುನಾಥ ಭಂಡಾರಿ, ಶ್ರೀಕಾಂತ್ ರೆಡ್ಡಿ, ಉದಯಕುಮಾರ್ ಖಣಗೆ, ಅರವಿಂದ ಕಮಲಾಪುರ ಸೇರಿದಂತೆ ಆರು ಜನ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಎಲ್ಲಾ ಆರೋಪಿಗಳನ್ನ ಬಂಧಿಸಿ ಸೆನ್ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗಿದೆ. ಬಳಿಕ ಆರೋಪಿಗಳನ್ನ ವೈದ್ಯಕೀಯ ತಪಾಸಣೆ ನಡೆಸಿ ಸೆಪ್ಟೆಂಬರ್ 21 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆಯೆಂದು ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ ಶರಣಪ್ಪ ಎಸ್‌ಡಿ ಹೇಳಿದ್ದಾರೆ.

ಇನ್ನು ತನಿಖೆ ವೇಳೆ ಆರೋಪಿಗಳ ಮೊಬೈಲ್‌ ಜಪ್ತಿ ಮಾಡಿಕೊಳ್ಳಲಾಗಿದ್ದು, ಮೊಬೈಲ್‌‌ಗಳನ್ನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ತನಿಖೆ ಬಳಿಕವಷ್ಟೇ ಬಂಧಿತ ಆರೋಪಿಗಳ ಪಾತ್ರ ಏನು ಎನ್ನುವುದು ತಿಳಿಯಲಿದೆಯೆಂದು ಕಮಿಷನರ್ ಹೇಳಿದರು. ಹನಿಟ್ರ್ಯಾಪ್ ಗ್ಯಾಂಗ್‌ ನ ಕೃತ್ಯಕ್ಕೆ ಯಾರಾದರೂ ಅನ್ಯಾಯಕ್ಕೊಳಗಾದರೆ ಅಂತವರು ಧೈರ್ಯದಿಂದ ದೂರು ನೀಡಲಿ. ಅವರ ಹೆಸರು ಗೌಪ್ಯವಾಗಿಡುವುದರ ಜೊತೆಗೆ ಸಂತ್ರಸ್ತರಿಗೆ ಸೂಕ್ತ ರಕ್ಷಣೆ ನೀಡಲಾಗುವುದೆಂದು ಹೇಳಿದ್ದಾರೆ.

ಪೊಲೀಸ್ ವ್ಯಾನ್ ಹತ್ತುವ ಮುನ್ನ ಮಾತನಾಡಿದ ಆರೋಪಿ ಹಣಮಂತ ಯಳಸಂಗಿ, ‘ನಮ್ಮನ್ನ ಪೊಲೀಸರು ಅರೆಸ್ಟ್ ಮಾಡಿಲ್ಲ. ಸಚಿವ ಪ್ರಿಯಾಂಕ್ ಖರ್ಗೆಯವರ ಹೆಸರಿಗೆ ಕಳಂಕ ಬರಬಾರದೆಂದು ನಾವೇ ಖುದ್ದಾಗಿ ಪೊಲೀಸರಿಗೆ ಶರಣಾಗಿದೆವೆಂದು ಹೇಳಿದ್ದಾರೆ. ನಾವು ಸಂವಿಧಾನ ಮತ್ತು ಕಾನೂನು ಪಾಲನೆ ಮಾಡುವರಿದ್ದು, ಕುತಂತ್ರದಿಂದ ನಮ್ಮೆಲೆ ಸುಳ್ಳು ಕೆಸ್ ದಾಖಲಿಸಲಾಗಿದ್ದು, ಕುತಂತ್ರಿಗಳ ಹೊಟ್ಟೆ ತಣ್ಣಗಿರಲೆಂದು ಹಣಮಂತ ಯಳಸಂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹನಿಟ್ರ್ಯಾಪ್ ಪ್ರಕರಣವನ್ನ ತನಿಖೆ ನಡೆಸಲು ಸ್ಟೇಷನ್ ಬಜಾರ್ ಠಾಣೆಯಿಂದ ಸೆನ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದ್ದು, ತನಿಖೆ ನಡೆಸಲು ವಿಶೇಷ ತಂಡ ರಚಿಸಲಾಗಿದೆ. ಅಷ್ಟಕ್ಕೂ ಬಂಧಿತ ಎ1 ಆರೋಪಿ ಪ್ರಭು ಹಿರೇಮಠ್ ಹನಿಟ್ರ್ಯಾಪ್‌ನಿಂದ ಬಂದ ಹಣವನ್ನ ಹಣಮಂತ ಯಳಸಂಗಿಯವರಿಗೆ ನೀಡಿದ್ದಾಗಿ ಸ್ಫೋಟಕ ಹೇಳಿಕೆ ನೀಡಿರೋ ಬಗ್ಗೆ ಪೊಲೀಸರು ಇಂಚಿಂಚು ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ.