ಮನೆ ಅಪರಾಧ ಕಲಬುರಗಿ: ಸರ್ವೀಸ್ ಕೇಂದ್ರಕ್ಕೆ ಬೆಂಕಿ, ಹತ್ತು ಬೈಕ್ ಸುಟ್ಟು ಭಸ್ಮ

ಕಲಬುರಗಿ: ಸರ್ವೀಸ್ ಕೇಂದ್ರಕ್ಕೆ ಬೆಂಕಿ, ಹತ್ತು ಬೈಕ್ ಸುಟ್ಟು ಭಸ್ಮ

0

ಕಲಬುರಗಿ: ನಗರದ ಪಿಲ್ಟರ್ ಬೆಡ್ ನಲ್ಲಿರುವ ಸರ್ವೀಸ್ ಕೇಂದ್ರಕ್ಕೆ ಬೆಂಕಿ ತಗುಲಿ ಹತ್ತು ಬೈಕ್ ಗಳು ಸುಟ್ಟು ‌ಕರಕಲಾದ ಘಟನೆ ಸೋಮವಾರ ನಡೆದಿದೆ. ಘಟನೆಯಲ್ಲಿ ಯಾವುದೇ ಜೀವ ಹಾನಿಯಾಗಿಲ್ಲ.

ಮಲ್ಲೇಶ್ ಹಾಗೂ ನಾಗೇಶ ಲಾಡೆ ಎನ್ನುವವರಿಗೆ ಸೇರಿದ ಆಟೋಮೊಬೈಲ್ ಹಾಗೂ ಸರ್ವೀಸ್ ಸೆಂಟರ್ ಗೆ ಬೆಂಕಿ ತಗುಲಿದೆ.

ಅವಘಡದಲ್ಲಿ ಅಂದಾಜು 20 ಲಕ್ಷ ರೂ ಮೌಲ್ಯದ ಬೈಕ್ ಸುಟ್ಟಿವೆ ಎಂದು ಗೊತ್ತಾಗಿದೆ.

ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದ್ದಾರೆ. ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನಕಾಂಗ್ರೆಸ್ ಸರಕಾರ ಉದ್ಧಟತನ ಪ್ರದರ್ಶಿಸುತ್ತಿದೆ: ಹೆಚ್ ​ಡಿ ಕುಮಾರಸ್ವಾಮಿ
ಮುಂದಿನ ಲೇಖನರಾಷ್ಟ್ರಪತಿಗಳನ್ನು ವಿವೇಚನೆ ಇಲ್ಲದೆ ಏಕವಚನದಲ್ಲಿ ಸಂಬೋಧಿಸಿ, ಈಗ ವಿಷಾದ ವ್ಯಕ್ತಪಡಿಸಿದರೆ ಸಾಕೇ?: ಸಿಎಂ ಸಿದ್ದರಾಮಯ್ಯಗೆ ಹೆಚ್.ಡಿ.ಕುಮಾರಸ್ವಾಮಿ ತೀವ್ರ ತರಾಟೆ