ಕಲಬುರಗಿ: ಜಿಲ್ಲೆಯ ಚಿಂಚೋಳಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ(ಕೆಕೆಆರ್ಟಿಸಿ) ಸೇರಿದ್ದ ಬಸ್’ನ್ನು ಕಳ್ಳತನ ಮಾಡಿರುವ ಘಟನೆ ಸೋಮವಾರ ತಡರಾತ್ರಿ ನಡೆದಿದೆ.
ಬೀದರ್ ಬಸ್ ಡಿಪೋ- 2ಗೆ ಸೇರಿದ ಕೆಎ 38 ಎಫ್ 971 ಸಂಖ್ಯೆಯ ಬಸ್ ಕಳುವಾಗಿದೆ. ಬೆಳಿಗ್ಗೆ ಸುಮಾರು 3:30ರ ವೇಳೆಗೆ ಕಳ್ಳತನ ಮಾಡಿದ ಖದಿಮರು, ಮಿರಿಯಾಣ ಮಾರ್ಗವಾಗಿ ತಾಂಡೂರು ಮೂಲಕ ತೆಲಂಗಾಣದ ಕಡೆ ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗುತ್ತಿದೆ.
ಬಸ್ ಹುಡುಕಾಟಕ್ಕಾಗಿ ಎರಡು ಪೊಲೀಸ್ ತಂಡಗಳು ತೆಲಂಗಾಣಕ್ಕೆ ತೆರಳಿವೆ. ಸ್ಥಳಕ್ಕೆ ಚಿಂಚೋಳಿ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
Saval TV on YouTube