ಮನೆ ರಾಜ್ಯ ಕಲ್ಬುರ್ಗಿ ಕಾಯಕ ಸಂಸ್ಕೃತಿಯ ನೆಲ. ಶರಣಬಸಪ್ಪ ಅಪ್ಪ, ಬಂದೇ ನವಾಜ್ ಈ ಸಂಸ್ಕೃತಿಯ ಎರಡು ಕಣ್ಣುಗಳು:...

ಕಲ್ಬುರ್ಗಿ ಕಾಯಕ ಸಂಸ್ಕೃತಿಯ ನೆಲ. ಶರಣಬಸಪ್ಪ ಅಪ್ಪ, ಬಂದೇ ನವಾಜ್ ಈ ಸಂಸ್ಕೃತಿಯ ಎರಡು ಕಣ್ಣುಗಳು: ಕೆ.ವಿ.ಪ್ರಭಾಕರ್

0

ಕಲ್ಬುರ್ಗಿ : ಕಲ್ಬುರ್ಗಿ ಕಾಯಕ ಸಂಸ್ಕೃತಿಯ ನೆಲ. ಶರಣಬಸಪ್ಪ ಅಪ್ಪ, ಬಂದೇ ನವಾಜ್ ಈ ಸಂಸ್ಕೃತಿಯ ಎರಡು ಕಣ್ಣುಗಳು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು.

Join Our Whatsapp Group

ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಪತ್ರಿಭಾ ಪುರಸ್ಕಾರ ವಿತರಿಸಿ ಮಾತನಾಡಿದರು.

ಕಾರ್ಮಿಕ ಮತ್ತು ರೈತ ಹಿನ್ನೆಲೆಯಿಂದ ಬರುವ ಪತ್ರಕರ್ತರು ತಮ್ಮ ಹಿನ್ನೆಲೆ ಮತ್ತು ಶ್ರಮಿಕ ಸಮುದಾಯಗಳ ಸಂಕಷ್ಟಗಳಿಗೆ ಬೆಳಕು ಚೆಲ್ಲುವುದನ್ನು ಮರೆತು ಕಾರ್ಪೋರೇಟ್ ಗಳ ಶ್ರೀಮಂತಿಕೆಯ ವಿಜ್ರಂಭಣೆಯನ್ನೇ ಪತ್ರಿಕೋದ್ಯಮ ಅಂದುಕೊಂಡಿದ್ದಾರೆ.‌

ಪತ್ರಕರ್ತರು ಪ್ರಶ್ನಾತೀತರಲ್ಲ. ಪತ್ರಕರ್ತರು ಸಮಾಜದ ಅಂಕು ಡೊಂಕುಗಳನ್ನು ಪ್ರಶ್ನಿಸುವ ರೀತಿಯಲ್ಲೇ ಸಮಾಜ ಕೂಡ ಪತ್ರಕರ್ತರ ಅಂಕು ಡೊಂಕು, ಕೊರತೆ ಮತ್ತು ದೌರ್ಬಲ್ಯಗಳನ್ನು ಸಮಾಜ ಪ್ರಶ್ನಿಸಬೇಕು ಎಂದು ಕರೆ ನೀಡಿದರು.

ಪತ್ರಕರ್ತರಿಗೆ ಸದ್ಯದಲ್ಲೇ ಉಚಿತ ಬಸ್ ಬಾಸ್ ವಿತರಿಸಲಾಗುವುದು. ಪತ್ರಕರ್ತರ ಆರೋಗ್ಯ ವಿಮೆ ಕುರಿತಾಗಿಯೂ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಅವರ ಜೊತೆ ಚರ್ಚಿಸಿದ್ದೇನೆ. ಇದಕ್ಕಾಗಿ 10 ಕೋಟಿ ರೂಪಾಯಿ ಇಡಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಪ್ರಕಾಶ್ ಪಾಟೀಲ್, ಸಂಸದರಾದ ರಾಧಾಕೃಷ್ಣ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು, ಬಾಲ ಭವನ ಅಧ್ಯಕ್ಷರಾದ ಬಿ.ಆರ್.ನಾಯ್ಡು ,  ವಿಧಾನ‌ಪರಿಷತ್ ಸದಸ್ಯ ಗುತ್ತೇದಾರ್ ಸೇರಿ ಜಿಲ್ಲಾ ಮತ್ತು ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.