ಮನೆ ಕಾನೂನು ಕಲ್ಲಾಕುರಿಚಿ ಕಳ್ಳಭಟ್ಟಿ ದುರಂತ: ಪ್ರಕರಣ ಸಿಬಿಐಗೆ ನೀಡಿದ ಮದ್ರಾಸ್ ಹೈಕೋರ್ಟ್

ಕಲ್ಲಾಕುರಿಚಿ ಕಳ್ಳಭಟ್ಟಿ ದುರಂತ: ಪ್ರಕರಣ ಸಿಬಿಐಗೆ ನೀಡಿದ ಮದ್ರಾಸ್ ಹೈಕೋರ್ಟ್

0

ಚೆನ್ನೈ: 67 ಮಂದಿಯನ್ನು ಬಲಿ ಪಡೆದಿದ್ದ ಕಲ್ಲಾಕುರಿಚಿ ಕಳ್ಳಭಟ್ಟಿ ದುರಂತದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿ ಮದ್ರಾಸ್ ಹೈಕೋರ್ಟ್ ಬುಧವಾರ(ನ20) ಆದೇಶ ಹೊರಡಿಸಿದೆ.

Join Our Whatsapp Group

ಎಐಎಡಿಎಂಕೆ ಕಾನೂನು ವಿಭಾಗದ ಕಾರ್ಯದರ್ಶಿ ಐ ಎಸ್ ಇನ್ಬದುರೈ, ಸಾಮಾಜಿಕ ನ್ಯಾಯಕ್ಕಾಗಿ ವಕೀಲರ ವೇದಿಕೆ ಅಧ್ಯಕ್ಷ ಕೆ.ಬಾಲು ಮತ್ತು ಮತ್ತೊಬ್ಬ ವಕೀಲ ಕಳ್ಳಭಟ್ಟಿ ದುರಂತದ ಕುರಿತು ಸಿಬಿಐ ತನಿಖೆಗೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಡಿ.ಕೃಷ್ಣಕುಮಾರ್ ಮತ್ತು ಪಿ.ಬಿ.ಬಾಲಾಜಿ ಅವರನ್ನೊಳಗೊಂಡ ವಿಭಾಗೀಯ ಪೀಠ ಪುರಸ್ಕರಿಸಿ ಈ ಆದೇಶ ನೀಡಿದೆ.

ಈ ಸಂಬಂಧ ದಾಖಲಾಗಿರುವ ಮೂರೂ ಪ್ರಕರಣಗಳ ತನಿಖೆ ನಡೆಸುವಂತೆ ಸಿಬಿಐಗೆ ಪೀಠ ಸೂಚಿಸಿದೆ. 2 ವಾರಗಳಲ್ಲಿ ಪ್ರಕರಣಗಳಿಗೆ ಸಂಬಂಧಿಸಿದ ಎಲ್ಲಾ ಕಡತಗಳನ್ನು ಸಿಬಿಐಗೆ ಹಸ್ತಾಂತರಿಸುವಂತೆ ವಿಲ್ಲುಪುರಂನ ಸಿಬಿ-ಸಿಐಡಿಗೆ ಪೀಠ ಸೂಚಿಸಿದೆ. ರಾಜ್ಯ ಪೊಲೀಸರು ಕೇಂದ್ರ ಏಜೆನ್ಸಿಗೆ ತಮ್ಮ ಸಹಕಾರವನ್ನು ನೀಡಬೇಕು ಎಂದು ಪೀಠ ಒತ್ತಿ ಹೇಳಿದೆ.

ಜೂನ್ 19 ರಂದು ಕಲ್ಲಕುರಿಚಿಯಲ್ಲಿ ಅಕ್ರಮವಾಗಿ ಮಾರಾಟ ಮಾಡಿದ್ದ ಮದ್ಯ ಸೇವಿಸಿ 67 ಜನರು ಸಾವನ್ನಪ್ಪಿದ್ದರು.