ಮನೆ ಮನರಂಜನೆ ಕನ್ನಡದ ಬಗ್ಗೆ ಕಮಲ್ ಹಾಸನ್ ಹೇಳಿಕೆ: ಇದನ್ನು ದೊಡ್ಡ ವಿಷಯ ಮಾಡೋದು ಬೇಡ : ಶಿವರಾಜ್‌...

ಕನ್ನಡದ ಬಗ್ಗೆ ಕಮಲ್ ಹಾಸನ್ ಹೇಳಿಕೆ: ಇದನ್ನು ದೊಡ್ಡ ವಿಷಯ ಮಾಡೋದು ಬೇಡ : ಶಿವರಾಜ್‌ ಕುಮಾರ್

0

ಬೆಂಗಳೂರು: ಕಮಲ್ ಹಾಸನ್ ನೀಡಿದ “ಕನ್ನಡ ತಮಿಳಿನಿಂದ ಹುಟ್ಟಿದ ಭಾಷೆ” ಎಂಬ ವಿವಾದಾತ್ಮಕ ಹೇಳಿಕೆ ಕುರಿತು ಮಾಧ್ಯಮಗಳಲ್ಲಿ ಭಾರೀ ಚರ್ಚೆ ನಡೆಯುತ್ತಿರುವ ನಡುವೆ, ನಟ ಶಿವರಾಜ್‌ಕುಮಾರ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. “ಕನ್ನಡದ ಬಗ್ಗೆ ಕಮಲ್ ಹಾಸನ್‌ ಅವರಿಗೆ ಪ್ರೀತಿ ಇದೆ. ಈಗ ಅದನ್ನ ದೊಡ್ಡ ವಿಚಾರ ಮಾಡಬೇಕಾದ ಅಗತ್ಯ ಇಲ್ಲ” ಎಂದು ಅವರು ಹೇಳಿದರು.

ಶಿವಣ್ಣ ಮಾತನಾಡುತ್ತಾ, “ನಾನು ಕಮಲ್ ಹಾಸನ್ ಅವರ ಅಭಿಮಾನಿ ಅಲ್ಲ. ಆದರೆ ಅವರು ನನಗೆ ಸ್ಪೂರ್ತಿ. ನನ್ನ ತಂದೆ ಡಾ. ರಾಜ್‌ಕುಮಾರ್ ಅವರಿಗೂ ಕಮಲ್ ಹಾಸನ್‌ರಿಗೂ ವಿಶೇಷ ಸಂಬಂಧವಿತ್ತು. ಅದಕ್ಕೆ ನಾವು ಅವರಿಗೆ ಗೌರವ ನೀಡ್ತೀವಿ. ಕಮಲ್ ಹಾಸನ್ ಅವರಿಗೆ ಇದೆಲ್ಲ ಗೊತ್ತಾಗುತ್ತದೆ. ಅವರೇ ಅದನ್ನು ಸರಿ ಮಾಡಿಕೊಳ್ಳುತ್ತಾರೆ ಎಂದು ಹೇಳಿದರು.

“ಬರೀ ಬಾಯಿಯಲ್ಲಿ ‘ನಾನು ಕನ್ನಡಕ್ಕಾಗಿ ಮಡೀತೀನಿ’ ಅಂತ ಹೇಳೋದು ಬೇಡ. ನಿಜವಾಗಿಯೂ ಕನ್ನಡಕ್ಕಾಗಿ ಏನಾದರೂ ಮಾಡ್ಬೇಕು. ಹೊಸ ಪ್ರತಿಭೆಗಳಿಗೆ ಅವಕಾಶ ಕೊಡಬೇಕು. ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರಿಗೆ ಮಾತ್ರ ಬೆಂಬಲ ನೀಡುವುದು ಸರಿಯಲ್ಲ. ಹೊಸಬರನ್ನೂ ಬೆಳೆಸೋಣ” ಎಂಬ ಮಾತುಗಳು ಶಿವಣ್ಣನಿಂದ ಬದ್ಧತೆಗೂ, ಪ್ರಾಮಾಣಿಕತೆಗೊ ಸಹ ಚಿಂತನಾತ್ಮಕ ಇಂಗಿತವನ್ನೂ ಹೊಂದಿವೆ.

ಇದಕ್ಕೂ ಮೊದಲು ಕೇರಳದಲ್ಲಿ ನಡೆದ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಕಮಲ್ ಹಾಸನ್, “ಕನ್ನಡ ತಮಿಳಿನಿಂದ ಹುಟ್ಟಿದ ಭಾಷೆ. ನಾನು ಇದನ್ನು ಇತಿಹಾಸದ ಆಧಾರದಲ್ಲಿ ಹೇಳಿದ್ದೇನೆ. ನಾನು ಕ್ಷಮೆ ಕೇಳಲ್ಲ. ಭಾಷೆಗಳ ಬಗ್ಗೆ ರಾಜಕಾರಣಿಗಳಿಗೆ ಮಾತನಾಡುವ ಅರ್ಹತೆ ಇಲ್ಲ. ಇತಿಹಾಸಕಾರರು ಮತ್ತು ಭಾಷಾ ತಜ್ಞರು ಈ ಕುರಿತು ತೀರ್ಮಾನಿಸಬೇಕು” ಎಂದು ಹೇಳಿದ್ದಾರೆ.