ಬೆಂಗಳೂರು: ಟಾಲಿವುಡ್ನಲ್ಲಿ ಉಪ್ಪೇನಾ ಸಿನಿಮಾ ಮೂಲಕ ಖ್ಯಾತಿಗೆ ಬಂದ ಕರ್ನಾಟಕ ಮೂಲದ ನಟಿ ಕೃತಿ ಶೆಟ್ಟಿಗೆ ಇದೀಗ ಸಾಲು ಸಾಲು ಅವಕಾಶಗಳು ಅರಸಿ ಬರುತ್ತಿದ್ದು, ಈಗ ಹೆಸರಾಂತ ನಟ ಸೂರ್ಯಗೆ ಜೋಡಿಯಾಗುತ್ತಿದ್ದಾರೆ.
ನಾಗಾರ್ಜುನ್ ಹಾಗೂ ನಾಗಚೈತನ್ಯ ಅವರ ಬಂಗಾರಾಜು ಸಿನಿಮಾದಲ್ಲಿ ಮಿಂಚಿದ ನಂತರ ಕೃತಿ ಶೆಟ್ಟಿ ಕಾಲಿವುಡ್ ಸೂಪರ್ ಸ್ಟಾರ್ ಸೂರ್ಯಾಗೆ ಜೋಡಿಯಾಗುತ್ತಿದ್ದಾರೆ.
ತಮಿಳಿನ ಖ್ಯಾತ ನಿರ್ದೇಶಕ ಬಾಲಾ ಅವರು ನಿರ್ದೇಶಿಸುತ್ತಿರುವ ಹೊಸ ಚಿತ್ರಕ್ಕೆ ಕೃತಿ ಶೆಟ್ಟಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸೂರ್ಯಾ ಒಡೆತನದ 2ಡಿ ಎಂಟರ್ಟೈನ್ಮೆಂಟ್ ಸಂಸ್ಥೆ ಈ ವಿಚಾರ ಹಂಚಿಕೊಂಡಿದೆ.
ಬಾಲಾ ಹಾಗೂ ನಟ ಸೂರ್ಯಾ ಅವರು ಸುಮಾರು 21 ವರ್ಷಗಳ ನಂತರ ಜೊತೆಯಾಗುತ್ತಿದ್ದಾರೆ. ಸದ್ಯಕ್ಕೆ ಚಿತ್ರಕ್ಕೆ ಹೆಸರು ಅಧಿಕೃತವಾಗಿಲ್ಲ. ಬದಲಿಗೆ ‘ಸೂರ್ಯಾ 41’ ಎಂದು ತಾತ್ಕಾಲಿಕವಾಗಿ ಶುರು ಮಾಡಲಾಗಿದೆ.ಸೂರ್ಯಾ ಅವರ ಹೊಸ ಚಿತ್ರದ ಜೊತೆ ಇನ್ನೂ ಮೂರ್ನಾಲ್ಕು ಚಿತ್ರಗಳು ಕೃತಿ ಶೆಟ್ಟಿ ಕೈಯಲ್ಲಿದೆ.