ಬೆಂಗಳೂರು(Bengaluru): ಕನ್ನಡ ನಾಡಿಗೆ ಭಾರತ ಭವಿಷ್ಯ ಬರೆಯುವ ಶಕ್ತಿ ಇದೆ. ವಿಶಾಲತೆ ಕನ್ನಡಿಗರ ಹುಟ್ಟುಗುಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕಂಠೀರವ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಇಂದು ಸಂಭ್ರಮದಿಂದ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುತ್ತಿದೆ. ಕನ್ನಡನಾಡು ಹೊನ್ನಿನ ಬೀಡು. ಈ ನಾಡಿನಲ್ಲಿ ಹುಟ್ಟಲು 7 ಜನ್ಮ ಪುಣ್ಯ ಬೇಕು ಎಂದರು.
ಕನ್ನಡಿಗರನ್ನು ಒಗ್ಗೂಡಿಸಿ ಏಕೀಕರಣ ಮಾಡಲಾಗಿದೆ. ಕನ್ನಡಕ್ಕೆ ನೈತಿಕ ಮೌಲ್ಯ ಕೊಟ್ಟವರು ಕುವೆಂಪು. ವಿಶ್ವದಲ್ಲೇ ಕನ್ನಡ ನಾಡು ಅತಿ ಶ್ರೇಷ್ಠವಾದದ್ದು, ರಾಷ್ಟ್ರದಲ್ಲಿ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದಿದ್ದು ಕನ್ನಡ. ಕನ್ನಡಿಗರು ಸಿಂಹಾವಲೋಕನ ಮಾಡಿಕೊಳ್ಳಬೇಕು. ಎಲ್ಲಾ ಕ್ಷೇತ್ರದಲ್ಲಿ ರಾಜ್ಯ ಮುಂದಿರಬೇಕು. ಕನ್ನಡಿಗರು ಹೆಚ್ಚು ಲಾಭ ಪಡೆಯಬೇಕು ಎಂದು ನುಡಿದರು.
ಕರ್ನಾಟಕದಲ್ಲಿ 10 ಕೃಷಿ ವಲಯಗಳಿವೆ. ವರ್ಷದ 365 ದಿನವೂ ಕೃಷಿ ನಡೆಯುತ್ತಿದೆ. ಈ ವರ್ಷ ರಾಜ್ಯದಲ್ಲೆಡೆ ಅಂತರ್ಜಲ ಮಟ್ಟ ಏರಿದೆ. ಪ್ರವಾಹದ ವೇಳೆ ಸರ್ಕಾರದಿಂದ 2 ಪಟ್ಟು ಪರಿಹಾರ ನೀಡಿದೆ. ಮನೆ ಕಟ್ಟಲು ಸರ್ಕಾರದಿಂದ 2 ಲಕ್ಷ ರೂ. ನೀಡಲಾಗಿದೆ. ಕೇಂದ್ರದ ಪರಿಹಾರದ ಜೊತೆ ರಾಜ್ಯ ಸರ್ಕಾರವೂ ಪರಿಹಾರ ನೀಡಿದೆ. ಶಾಲಾ ಕೋಠಡಿಗಳ ಕೊರತೆ ನೀಗಿಸಿಲು 8 ಸಾವಿರ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ. ವಿವೇಕ ಯೋಜನೆಯಡಿ ಕೊಠಡಿಗಳ ನಿರ್ಮಾಣ ಮಾಡಲಾಗಿದೆ. ಪ್ರತಿ ಗ್ರಾಮದ ವೃತ್ತಿಪರರಿಗೆ 50 ಸಾವಿರ ಹಣಕಾಸಿನ ನೆರವು ನೀಡಲಾಗುತ್ತಿದೆ. 5 ಲಕ್ಷ ಮಹಿಳೆಯರಿಗೆ ಸ್ವಯಂ ಉದ್ಯೋಗ ಭಾಗ್ಯ, ಮುಂದಿನ 2 ವರ್ಷ 2.5 ಲಕ್ಷ ಹುದ್ಧೆ ಭರ್ತಿಗೆ ಪ್ಲಾನ್ ರೂಪಿಸಲಾಗಿದೆ ಎಂದು ತಿಳಿಸಿದರು.















