ಬೆಂಗಳೂರು : ಇರಾನ್ ಮತ್ತು ಇಸ್ರೇಲ್ ನಡುವೆ ಯುದ್ಧ ತೀವ್ರಗೊಂಡಿದ್ದು ಇಡೀ ಮಧ್ಯಪ್ರಾಚ್ಯವೇ ಕ್ಷೋಭೆಗೊಳಗಾಗಿದೆ. ಇದೇ ವೇಳೆ ಎರಡೂ ದೇಶಗಳಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಯ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಮಂಗಳವಾರ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅವರೊಡನೆ ರಾಜ್ಯ ಸರ್ಕಾರವು ನಿರಂತರವಾಗಿ ಸಂಪರ್ಕದಲ್ಲಿದೆ. ಎಲ್ಲರೂ ಕ್ಷೇಮವಾಗಿದ್ದಾರೆಂದು ಹೇಳಿದರು. ಯುದ್ಧದ ನಡುವೆ ಭಾರತಕ್ಕೆ ವಾಪಸಾಗಲು ಸಾಧ್ಯವಾಗದೇ ಹಲವು ಕನ್ನಡಿಗರು ಎರಡೂ ದೇಶಗಳಲ್ಲಿ ಸಿಲುಕಿದ್ದಾರೆ. ವಿಮಾನಗಳ ಹಾರಾಟದ ಅಭಾವದಿಂದ ಈ ಸಮಸ್ಯೆ ಉಂಟಾಗಿದೆ.
ಯುದ್ದಪೀಡಿದ ದೇಶಗಳಲ್ಲಿ ಸಿಲುಕಿರುವ ಕನ್ನಡಿಗರೊಡನೆ ನಾನು ಮಾತನಾಡಿದ್ದೇನೆ. ಅವರೆಲ್ಲರೂ ಸುರಕ್ಷಿತವಾಗಿದ್ದಾರೆ. ಎಲ್ಲರನ್ನೂ ಕ್ಷೇಮವಾಗಿ ಕರೆತರಲು ಸಿದ್ದತೆ ನಡೆದಿದೆ ಎಂದು ಸಿರಂ ಸಿದ್ದರಾಮಯ್ಯ ಹೇಳಿದ್ದಾರೆ.
ಎರಡು ದಿನಗಳ ಹಿಂದಷ್ಟೇ ಕೇಂದ್ರ ಸಚಿವ ಕುಮಾರಸ್ವಾಮಿ ಇಸ್ರೇಲಿನಲ್ಲಿ ಸಿಲುಕಿರುವ ಕನ್ನಡಿಗರೊಡನೆ ವಿಡಿಯೋ ಕಾಲ್ ಮೂಲಕ ಮಾತನಾಡಿ ಕ್ಷೇಮ ವಿಚಾರಿಸಿದ್ದರು. ಬಳಿಕ ಈ ಕುರಿತು ಕ್ರಮ ಕೈಗೊಳ್ಳುವಂತೆ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದರು.














