ಮನೆ ಸುದ್ದಿ ಜಾಲ ವಿಶ್ವದಾದ್ಯಂತ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕಾಂತಾರ ಚಾಪ್ಟರ್ 1 ರಿಲೀಸ್..!

ವಿಶ್ವದಾದ್ಯಂತ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕಾಂತಾರ ಚಾಪ್ಟರ್ 1 ರಿಲೀಸ್..!

0

ಬಹುನಿರೀಕ್ಷಿತ ಕಾಂತಾರ ಚಾಪ್ಟರ್‌ 1 ಸಿನಿಮಾ ವಿಜಯದಶಮಿ ದಿನವಾದ ಇಂದು (ಅ.2) ವಿಶ್ವದಾದ್ಯಂತ ಗ್ರ್ಯಾಂಡ್‌ ರಿಲೀಸ್‌ ಆಗಿದೆ. ನಗರದ ಹಲವು ಚಿತ್ರಮಂದಿರಗಳಲ್ಲಿ ಬೆಳಗ್ಗೆ 6:30ಕ್ಕೆ ಮೊದಲ ಶೋ ಆರಂಭವಾಗಿದೆ. ವೀರೇಶ್, ಸಂತೋಷ್ ಚಿತ್ರಮಂದಿರ ಹಾಗೂ ಹಲವು ಮಲ್ಟಿಪ್ಲೆಕ್ಸ್‌ಗಳಲ್ಲಿ 6:30ಕ್ಕೆ ಮೊದಲ ಶೋ ಶುರುವಾಗಿದೆ.

ಕರ್ನಾಟಕದಾದ್ಯಂತ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕಾಂತಾರ 1 ಸಿನಿಮಾ ಬಿಡುಗಡೆಯಾಗಿದೆ. ಮೊದಲ ದಿನ ಎರಡು ಸಾವಿರಕ್ಕೂ ಹೆಚ್ಚು ಪ್ರದರ್ಶನ ಕಾಣಲಿದೆ. 7,000ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಕನ್ನಡ ಸೇರಿದಂತೆ ಸಪ್ತ ಭಾಷೆಗಳಲ್ಲಿ ಭಾರತ ಹಾಗೂ ಭಾರತದಾಚೆಗೂ ಸಿನಿಮಾ ಬಿಡುಗಡೆಯಾಗಲಿದೆ. ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್, ಗುಲ್ಶನ್​ ದೇವಯ್ಯ, ತಮಿಳು ನಟ ಜಯರಾಂ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.

ಕಾಂತಾರ 1 ಪ್ರೀಮಿಯರ್ ಶೋಗೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದೆ. ನಟ ರಿಷಬ್‌ ಶೆಟ್ಟಿ ನಿರ್ದೇಶನ ಮತ್ತು ಅಭಿನಯಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾ ಸ್ಟೋರಿ ಮತ್ತು ಮೇಕಿಂಗ್‌ನಲ್ಲಿ ರಿಷಬ್‌ ಶೆಟ್ಟಿ ಯಶಸ್ವಿಯಾಗಿದ್ದಾರೆಂಬ ಮಾತುಗಳು ಪ್ರೀಮಿಯರ್‌ ಶೋ ವೇಳೆ ಕೇಳಿಬಂದಿವೆ.