ಮನೆ ಅಪರಾಧ ಕಣುಮಾ ಹತ್ಯೆ ಪ್ರಕರಣ : ಮತ್ತೆ 10 ಮಂದಿ ಅರೆಸ್ಟ್!

ಕಣುಮಾ ಹತ್ಯೆ ಪ್ರಕರಣ : ಮತ್ತೆ 10 ಮಂದಿ ಅರೆಸ್ಟ್!

0

ದಾವಣಗೆರೆ: ಕಳೆದ ವಾರದ ಭಾರೀ ಚರ್ಚೆಗೆ ಗ್ರಾಸವಾದ ರೌಡಿಶೀಟರ್ ಸಂತೋಷ್ ಕುಮಾರ್ ಅಲಿಯಾಸ್ ಕಣುಮಾ ಹತ್ಯೆ ಪ್ರಕರಣದಲ್ಲಿ ದಾವಣಗೆರೆ ಪೊಲೀಸರು ಮತ್ತೆ 10 ಮಂದಿಯನ್ನು ಬಂಧಿಸಿದ್ದು, ಇನ್ನು ಆರೋಪಿಗಳ ಬಂಧನ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.

ಮೇ 5ರಂದು ದಾವಣಗೆರೆ ನಗರದ ಹದಡಿ ರಸ್ತೆಯ ಸೋಮೇಶ್ವರ ಆಸ್ಪತ್ರೆಗೆ ಹೊಂದಿಕೊಂಡಿರುವ ಇಸ್ಪೀಟ್ ಕ್ಲಬ್‌ನಲ್ಲಿ ನಡೆದ ಈ ಸಂಚಲನಕಾರಿ ಕೊಲೆ ಪ್ರಕರಣದಲ್ಲಿ ಈಗಾಗಲೇ 10 ಮಂದಿ ಆರೋಪಿಗಳು ಹೊಳಲ್ಕೆರೆ ಠಾಣೆಗೆ ಶರಣಾಗಿದ್ದರು. ಇದೀಗ ಮತ್ತಷ್ಟು ತನಿಖೆಯ ನಂತರ 10 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮಾಹಿತಿ ಪ್ರಕಾರ, ಕಣುಮಾ ಅಲಿಯಾಸ್ ಸಂತೋಷ್ ಕುಮಾರ್ ಹದಡಿ ರಸ್ತೆಯ ಪವರ್ ಸ್ಪೋರ್ಟ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ಬಳಿ ಇದ್ದಾಗ, ಆರೋಪಿತರು ಖಾರದ ಪುಡಿ ಎಸೆದು ಅವನನ್ನು ಹರಿತವಾದ ಆಯುಧಗಳಿಂದ ಕೊಲೆ ಮಾಡಿದ್ದಾರೆ. ಈ ಗಂಭೀರ ಘಟನೆಯ ವಿಡಿಯೋವನ್ನು ಕೊಲೆಮಾಡಿದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವ ಮೂಲಕ ಆರೋಪಿ ಗ್ಯಾಂಗ್ ಮತ್ತಷ್ಟು ಕುಖ್ಯಾತಿ ಗಳಿಸಿತು.

ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ, ದಾವಣಗೆರೆ ನಗರ ಉಪ ವಿಭಾಗದ ಡಿವೈಎಸ್‌ಪಿ ಶರಣಬಸವೇಶ್ವರ ಬಿ. ಅವರ ನೇತೃತ್ವದಲ್ಲಿ 5 ಪ್ರತ್ಯೇಕ ತಂಡಗಳನ್ನು ರಚನೆ ಮಾಡಲಾಗಿತ್ತು. ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಹಾಗೂ ಹೆಚ್ಚುವರಿ ಎಸ್‌ಪಿ ವಿಜಯಕುಮಾರ್ ಮತ್ತು ಜಿ. ಮಂಜುನಾಥ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಸಲಾಯಿತು.

ಆರೋಪಿತರ ಪಟ್ಟಿ:
ಮೃತ ಸಂತೋಷ್ ಕುಮಾರ್ ಪತ್ನಿ ಶ್ರುತಿ ನೀಡಿದ ದೂರಿನ ಆಧಾರದಲ್ಲಿ ಇವರುಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ:

ಕಾರ್ತಿಕ್ (22), ಚವಳಿ ಸಂತು (30), ನವೀನ್ (26), ಗುಂಡಪ್ಪ (32), ಬಸವರಾಜ್ (22), ಹನುಮಂತಪ್ಪ (23), ಗಿಡ್ಡ ವಿಜಿ (27), ಚಿಕ್ಕಮ್ಮನಹಳ್ಳಿ ಶಿವು (30), ಕಡ್ಡಿ ರಾಘು (27), ಪ್ರಶಾಂತ್ (28), ನಿಟ್ಟುವಳ್ಳಿಯ ಗಣಿ ಸೇರಿದಂತೆ ಇತರರ ವಿರುದ್ಧ ಎಫ್​ಐಆರ್ ದಾಖಲಾಗಿದೆ.ಇದೀಗ ಮತ್ತೆ 10 ಆರೋಪಿಗಳನ್ನು ದಾವಣಗೆರೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.