ಮನೆ ಕಾನೂನು ಸುಪ್ರೀಂಕೋರ್ಟ್‌ ಬಾರ್ ಅಸೋಶಿಯೇಷನ್‌ ಅಧ್ಯಕ್ಷರಾಗಿ ಕಪಿಲ್ ಸಿಬಲ್ ಆಯ್ಕೆ

ಸುಪ್ರೀಂಕೋರ್ಟ್‌ ಬಾರ್ ಅಸೋಶಿಯೇಷನ್‌ ಅಧ್ಯಕ್ಷರಾಗಿ ಕಪಿಲ್ ಸಿಬಲ್ ಆಯ್ಕೆ

0

ನವದೆಹಲಿ: ಹಿರಿಯ ವಕೀಲ ಹಾಗೂ ಕೇಂದ್ರದ ಮಾಜಿ ಸಚಿವ ಕಪಿಲ್ ಸಿಬಲ್ ಅವರು ಸುಪ್ರೀಂಕೋರ್ಟ್‌ ಬಾರ್ ಅಸೋಶಿಯೇಷನ್‌ನ (SCBA) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

Join Our Whatsapp Group

ಅಸೋಶಿಯೇಷನ್‌ಗೆ ಗುರುವಾರ ಚುನಾವಣೆ ನಡೆಯಿತು. ಚುನಾವಣೆಯಲ್ಲಿ ಕಪಿಲ್ ಸಿಬಲ್ ಅವರು 1,000 ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ಪ್ರದೀಪ್ ಕುಮಾರ್ ರಾಯ್ ಅವರು 650 ಮತಗಳನ್ನು ಪಡೆದು ಸೋಲು ಕಂಡರು.

ಹಾರ್ವರ್ಡ್ ಲಾ ಸ್ಕೂಲ್‌ನ ಪದವೀಧರರಾಗಿರುವ ಸಿಬಲ್ ಅವರು, 1983ರಿಂದ ಸುಪ್ರೀಂಕೋರ್ಟ್‌ನ ಹಿರಿಯ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೇ ಅವರು ಈ ಮೊದಲು SCBAಗೆ ಮೂರು ಬಾರಿ ಅಧ್ಯಕ್ಷರಾಗಿದ್ದರು.

ಈ ಬಾರ್ ಅಸೋಶಿಯೇಷನ್‌ನ ಕಾರ್ಯಕಾರಿ ಮಂಡಳಿಯಲ್ಲಿ ಮಹಿಳೆಯರಿಗೂ ಸ್ಥಾನಗಳನ್ನು ಮೀಸಲಿಡಬೇಕು ಎಂದು ಸುಪ್ರೀಂಕೋರ್ಟ್‌ ಇತ್ತೀಚೆಗೆ ನಿರ್ದೇಶನ ನೀಡಿತ್ತು.

ಯುಪಿಎ ಸರ್ಕಾರದ ಅವಧಿಯಲ್ಲಿ ಕಪಿಲ್ ಸಿಬಲ್ ಅವರು ಕೇಂದ್ರದಲ್ಲಿ ಸಚಿವರಾಗಿದ್ದರು. ಪ್ರಕರಣಗಳಿಗೆ ದೇಶದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಹಿರಿಯ ವಕೀಲ ಎನಿಸಿಕೊಂಡಿದ್ದಾರೆ.

ಹಿಂದಿನ ಲೇಖನಸಂವಿಧಾನದ ಮೂಲಭೂತ ಅಂಶಗಳೊಂದಿಗೆ ಆಟವಾಡಲು ಯಾರಿಗೂ ಅವಕಾಶ ನೀಡುವುದಿಲ್ಲ: ಪ್ರಧಾನಿ ಮೋದಿ
ಮುಂದಿನ ಲೇಖನಕರ್ನಾಟಕದಲ್ಲಿ ನೀರಿನ ಅಭಾವ: ತಮಿಳುನಾಡಿನ ಬೇಡಿಕೆ ತಿರಸ್ಕರಿಸಿದ ಕಾವೇರಿ ನೀರು ನಿಯಂತ್ರಣ ಸಮಿತಿ