ಮನೆ ಯೋಗಾಸನ ಕರ್ಣ ಪಿಂಡಾಸನ

ಕರ್ಣ ಪಿಂಡಾಸನ

0

ಕರ್ಣವೆಂದರೆ ಕಿವಿ, ಪೀಡಾ ಎಂದರೆ ತೊಂದರೆ, ನೋವು ಬಾಧೆ ಒತ್ತಡ.ಇದು ಹಲಾಸನದ ವ್ಯತ್ಯಸ್ತ ಭಂಗಿ. ಆದುದರಿಂದ ಈ ಆಸನವನ್ನೂ ಅದರ ಜೊತೆಯಲ್ಲಿಯೇ ಅಭ್ಯಾಸಿಸಬಹುದು.

Join Our Whatsapp Group

 ಅಭ್ಯಾಸ ಕ್ರಮ

1.ಮೊದಲು ಕಾಣಿಸಿರುವಂತೆ ಹಲಾಸನದ ಈ ಭಂಗಿಯಲ್ಲಿ ಗೊತ್ತಾದ ಕಾಲವಿದ್ದು, ಅದನ್ನು ಪೂರ್ಣಗೊಳಿಸಿ ಬಳಿಕ ಮಂಡಿಗಳನ್ನು ಬಾಗಿಸಿ, ಬಲಮಂಡಿಯನ್ನು ಬಲಕಿವಿಯ ಬಳಿಗೂ, ಎಡಮಂಡಿಯನ್ನು ಎಡ ಕಿವಿಯ ಬಳಿಗೂ ತಂದು ನಿಲ್ಲಿಸಬೇಕು.

2. ಆಮೇಲೆ, ಎರಡು ಮಂಡಿಗಳನ್ನು ನೆಲದಮೇಲೂರಿ ಅದನ್ನು ಕಿವಿಗಳಿಗೆ ಒತ್ತಿಡಬೇಕು.

3. ಆನಂತರ ಕಾಲ್ಬೆರಳುಗಳನ್ನು ನೀಲವಾಗಿ ಚಾಚಿ, ಹಿಮ್ಮಡಿಗಳೆರಡನ್ನೂ ಒತ್ತಿರಬೇಕು. ಆ ಬಳಿಕ ಕೈಗಳನ್ನು ಪಕ್ಕೆಲುಬುಗಳ ಹಿಂಬದಿಗಾಗಲೀ, ಇಲ್ಲವೇ ಕೈಬೆರಳುಗಳನ್ನು ಪರಸ್ಪರ ಹೆಣೆದಾಗಲೀ, ‘ಹಲಾಸನ’ದಲ್ಲಿದ್ದಂತೆ ತೋಳುಗಳನ್ನು ನೀಳವಾಗಿ ಚಾಚಿಡಬೇಕು.

4. ಈ ಸ್ಥಿತಿಯಲ್ಲಿ ಅರ್ಧ ಅಥವಾ ಒಂದು ನಿಮಿಷದ ಕಾಲ ಸಾಮಾನ್ಯ ಉಸಿರಾಟದಿಂದ ನಿಲ್ಲಿಸಬೇಕು.

 ಪರಿಣಾಮಗಳು

       ಈ ಆಸನವು ಮುಂಡ, ಹೃದಯ, ಕಾಲುಗಳಿಗೆ ವಿಶ್ರಾಂತಿಯನ್ನು ಕೊಡಲು ಸಹಕಾರಿಯಾಗಿದೆ. ಮಂಡಿಗಳನ್ನು ಬಾಗಿಸುವಾಗ ಬೆನ್ನೆಲುಬು ಹೆಚ್ಚಾಗಿ ಹಿಗ್ಗುತ್ತದೆ.ಇದರಿಂದ ಟೊಂಕಾದ ಸುತ್ತಲೂ ರಕ್ತಪರಿಚಲನೆ ಚೆನ್ನಾಗಿ ನಡೆಯುವುದಕ್ಕೆ ನೆರವಾಗುತ್ತದೆ.