ಮನೆ ರಾಜ್ಯ ಕಡ್ಡಾಯ ಕನ್ನಡ ನಾಮಫಲಕ ಅಳವಡಿಸದಿದ್ರೆ ಕರ್ನಾಟಕ ಬಂದ್: ವಾಟಾಳ್ ನಾಗರಾಜ್

ಕಡ್ಡಾಯ ಕನ್ನಡ ನಾಮಫಲಕ ಅಳವಡಿಸದಿದ್ರೆ ಕರ್ನಾಟಕ ಬಂದ್: ವಾಟಾಳ್ ನಾಗರಾಜ್

0

ಬೆಂಗಳೂರು: ಕನ್ನಡ ಕಡ್ಡಾಯ ನಾಮಫಲಕ ಅಳವಡಿಕೆಗೆ ನೀಡಿದ್ದ ಡೆಡ್ ಲೈನ್ ಮುಗಿಯುತ್ತ ಬಂದ್ರೂ ಬೆಂಗಳೂರಿನ ಅಂಗಡಿ-ಮುಂಗಟ್ಟುಗಳ ನಾಮಫಲಕ ಬದಲಾಗದಿರೋದು ಕನ್ನಡ ಹೋರಾಟಗಾರರನ್ನ ಕೆರಳಿಸಿದೆ. ಡೆಡ್ ಲೈನ್ ಮುಗಿಯೋಕೆ ಎರಡೇ ದಿನ ಬಾಕಿ ಇದ್ದು, ನಾಮಫಲಕ ಕಡ್ಡಾಯವಾಗದಿದ್ರೆ ಕರ್ನಾಟಕ ಬಂದ್  ಮಾಡೋದಾಗಿ ಕನ್ನಡದ ಕಟ್ಟಾಳು ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.

ಸರ್ಕಾರ ಫೆಬ್ರವರಿ 28 ರೊಳಗೆ ಕಡ್ಡಾಯ ಕನ್ನಡ ನಾಮಫಲಕ ಅಳವಡಿಕೆಗೆ ಗಡುವು ನೀಡಿತ್ತು. ಆದರೆ ಡೆಡ್ ಲೈನ್ ಮುಗೀತಾ ಬಂದ್ರೂ ಒಂದಷ್ಟು ರಸ್ತೆಗಳ ಅಂಗಡಿ ಮುಂಗಟ್ಟುಗಳ ನಾಮಫಲಕ ಬದಲಾಗಿಲ್ಲ.

ಸದ್ಯ ಬೆಂಗಳೂರಿನ ಪ್ರಮುಖ ರಸ್ತೆಗಳಾದ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಯ ಕೆಲ ಅಂಗಡಿಗಳು ಇನ್ನೂ ನಾಮಫಲಕ ಬದಲಾಯಿಸಿಲ್ಲ. ಅತ್ತ ಅಧಿವೇಶನದಲ್ಲೂ ಕನ್ನಡ ನಾಮಫಲಕ ಪ್ರತಿಧ್ವನಿಸಿದ್ರೂ ಸರ್ಕಾರ ಕೂಡ ಸೈಲೆಂಟ್ ಆಗಿರೋದಕ್ಕೆ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಗುಡುಗಿದ್ದಾರೆ. ಫೆಬ್ರವರಿ 28 ರೊಳಗೆ ಕಡ್ಡಾಯ ಕನ್ನಡ ನಾಮಫಲಕ ಹಾಕದಿದ್ರೆ ಕರ್ನಾಟಕ ಬಂದ್ ಮಾಡೋ ಎಚ್ಚರಿಕೆ ನೀಡಿದ್ದಾರೆ.

ಇನ್ನು ಮತ್ತೊಂದೆಡೆ ಕರವೇ ಅಧ್ಯಕ್ಷ ನಾರಾಯಣಗೌಡ ಅವರು ಈ ಬಗ್ಗೆ ಮಾತನಾಡಿದ್ದು, ಫೆ.28ರ ಒಳಗೆ ಕನ್ನಡಮಯವಾಗುತ್ತದೆ ಅಂತಾ ಸರಕಾರ ಹೇಳಿ ಸಮಯ ತೆಗೆದುಕೊಂಡಿದೆ. ಸರಕಾರ ಮಾತು ತಪ್ಪಿದರೆ 32 ಜಿಲ್ಲೆಯವರು ಗುಡುಗಬೇಕಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.