ಮನೆ ರಾಜ್ಯ ಮಹಿಳಾ ಸಬಲೀಕರಣಕ್ಕೆ ಕರ್ನಾಟಕ ಆದರ್ಶ ರಾಜ್ಯವಾಗಿದೆ: ದ್ರೌಪದಿ ಮುರ್ಮು

ಮಹಿಳಾ ಸಬಲೀಕರಣಕ್ಕೆ ಕರ್ನಾಟಕ ಆದರ್ಶ ರಾಜ್ಯವಾಗಿದೆ: ದ್ರೌಪದಿ ಮುರ್ಮು

0

ಮೈಸೂರು(Mysuru): ಭಕ್ತಿ, ಸಮಾನತೆ, ಮಹಿಳಾ ಸಬಲೀಕರಣಕ್ಕೆ ಕರ್ನಾಟಕ ಆದರ್ಶ ರಾಜ್ಯವಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಎಂದು ಹೇಳಿದರು.

ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ದಸರಾಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಚಾಮುಂಡಿ ತಾಯಿಗೆ ನನ್ನ ಮನಸ್ಪೂರ್ವಕ ನಮಸ್ಕಾರಗಳು , ಎಲ್ಲರಿಗೂ ನನ್ನ ಹೃದಯ ಪೂರ್ವಕ ನಮಸ್ಕಾರಗಳು. ಈ ವರ್ಷದ ದಸರಾ ಮಹೋತ್ಸವ ಉದ್ಘಾಟಿಸಿದ್ದು ಬಹಳ ಸಂತೋಷವಾಗಿದೆ. ನಾಡದೇವತೆ ಚಾಮುಂಡೇಶ್ವರಿ ಇದೇ ಸ್ಥಳದಲ್ಲಿ ಮಹಿಷಾನನ್ನು ಸಂಹಾರ ಮಾಡಿದ್ದಾಳೆ. ಎಲ್ಲರಿಗೂ ಚಾಮುಂಡೇಶ್ವರಿ ಆಶೀರ್ವಾದ ಸಿಗಲಿ ಎಂದರು.

ಇವುಗಳ ಜೊತೆಗೆ, ಮಕ್ಕಳ ಶಾಲಾ ದಾಖಲಾತಿಯಲ್ಲೂ ಸರ್ಕಾರವು ನೂರಕ್ಕೆ ನೂರರಷ್ಟು ಸಾಧನೆ ಮಾಡಿರುವುದು ಶ್ಲಾಘನೀಯ ಎಂದರು.

12 ನೇ ಶತಮಾನದಲ್ಲಿ‌ ಬಸವಣ್ಣ, ಅಲ್ಲಮ ಪ್ರಭು, ಅಕ್ಕ ಮಹಾದೇವಿ ಅಧ್ಯಾತ್ಮಿಕ, ಸಾಮಾಜಿಕ ಪ್ರಗತಿಗಾಗಿ ದುಡಿದರು. ಬಸವಣ್ಣ ಸಮಾನತೆಯ ಸಮಾಜಕ್ಕಾಗಿ ಅನುಭವ ಮಂಟಪವನ್ನು ಸ್ಥಾಪಿಸಿದರು. ಅಧ್ಯಾತ್ಮ ಸಾಧನೆಗಾಗಿ ಶಂಕರಾಚಾರ್ಯರು ಶೃಂಗೇರಿ ಮಠ ಸ್ಥಾಪಿಸಿದರು. ರಾಜ್ಯದಲ್ಲಿ ರಾಣಿ‌ ಅಬ್ಬಕ್ಕ,‌ ಕಿತ್ತೂರು ಚೆನ್ನಮ್ಮ, ಒನಕೆ ಓಬವ್ವ ಮಹಿಳಾ ಮಾದರಿಗಳಾಗಿದ್ದಾರೆ ಎಂದರು.

ನಾಡಹಬ್ಬ ದಸರಾ ಭಾರತೀಯ ಸಂಸ್ಕೃತಿಯ ಪ್ರತೀಕ.  ಮಹಿಳೆ ಪ್ರಾಧಿನ್ಯತೆಯೇ ದಸರಾ ವಿಶೇಷ. ಈ ಪರಂಪರೆಯಲ್ಲಿ ಭಾಗಿಯಾಗಲು ಅವಕಾಶ ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ದ್ರೌಪದಿ ಮುರ್ಮು ಅವರು ಹೇಳಿದರು.

ವೇದಿಕೆಯಲ್ಲಿ ದೊರಕದ ಅವಕಾಶ

ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅಧ್ಯಕ್ಷತೆ ವಹಿಸಬೇಕಿತ್ತಾದರೂ‌ ಅವರಿಗೆ ವೇದಿಕೆಯಲ್ಲಿ‌ ಅವಕಾಶವಿರಲಿಲ್ಲ. ನಗರದ ಪ್ರಥಮ ಪ್ರಜೆ ಮೇಯರ್ ಶಿವಕುಮಾರ್‌ ಅವರಿಗೂ ವೇದಿಕೆ ಏರಲು ಅವಕಾಶ ಸಿಗಲಿಲ್ಲ. ರಾಷ್ಟ್ರಪತಿ ಕಚೇರಿಯ ಸೂಚನೆಯಂತೆ ವೇದಿಕೆಯಲ್ಲಿ 13 ಗಣ್ಯರು ಇರಲಿದ್ದಾರೆ ಎಂದು ಉಸ್ತುವಾರಿ‌ ಸಚಿವರು ತಿಳಿಸಿದ್ದರು. ಆದರೆ ಉದ್ಘಾಟನೆಗೂ ಮುನ್ನ ವೇದಿಕೆಯಲ್ಲಿ ಎಂಟು ಕುರ್ಚಿಗಳನ್ನು ಹಾಕಲಾಗಿತ್ತು. ಕಾರ್ಯಕ್ರಮ ಶುರುವಾಗುವಷ್ಟರಲ್ಲಿ ಆರು ಕುರ್ಚಿಗಳಷ್ಟೇ ಇದ್ದವು.

  • ಟ್ಯಾಗ್ಗಳು
  • dasara
ಹಿಂದಿನ ಲೇಖನಫ್ಲೆಕ್ಸ್:  ಅಪಹಾಸ್ಯಕ್ಕೀಡಾದ ಬಿಜೆಪಿ ನಾಯಕರು
ಮುಂದಿನ ಲೇಖನ4 ನಿಮಿಷ ತಡವಾಗಿ ದಸರಾ ಉದ್ಘಾಟನೆ