ಮನೆ ಉದ್ಯೋಗ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

0

ಕರ್ನಾಟಕ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ 2 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಾಳೆಯೇ ಕೊನೆಯ ದಿನವಾಗಿದೆ. ರಾಜ್ಯ ಸರ್ಕಾರದ ನೌಕರಿ ಹುಡುಕುತ್ತಿರುವವರು ಈಗಲೇ ಅರ್ಜಿ ಹಾಕಿ. ಅಟಲ್ ಜೀ ಸ್ನೇಹಿ ನಿರ್ದೇಶನಾಲಯದಲ್ಲಿ ಖಾಲಿ ಇರುವ 1 ಸಾಫ್ಟ್’ವೇರ್ ಡೆವಲಪರ್ ಮತ್ತು 1 ಆ್ಯಂಡ್ರ್ಯಾಯ್ಡ್ ಅಪ್ಲಿಕೇಶನ್ ಡೆಪಲಪರ್  ಹುದ್ದೆಯನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಈಗಾಗಲೇ ಅರ್ಜಿ ಆಹ್ವಾನಿಸಿದೆ. ಡಿಸೆಂಬರ್ 23, 2022, ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಸರ್ಕಾರಿ ಕೆಲಸ ಹುಡುಕುತ್ತಿರುವ ಉದ್ಯೋಗಾಂಕ್ಷಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

ಎಷ್ಟೆಷ್ಟು ಹುದ್ದೆಗಳಿವೆ?

ಸಾಫ್ಟ್’ವೇರ್ ಡೆವಲಪರ್-1 ಹುದ್ದೆ

ಆಂಡ್ರ್ಯಾಯ್ಡ್ ಅಪ್ಲಿಕೇಶನ್ ಡೆಪಲಪರ್-1 ಹುದ್ದೆ

ವಿದ್ಯಾರ್ಹತೆ ಏನಿರಬೇಕು?

ಕರ್ನಾಟಕ ಕಂದಾಯ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಕಂಪ್ಯೂಟರ್ ಸೈನ್ಸ್/ECE/IT/ಇನ್ಫರ್ಮೇಶನ್ ಸೈನ್ಸ್ ವಿಭಾಗದಲ್ಲಿ ಬಿಇ/ಬಿ.ಟೆಕ್ ಪೂರ್ಣಗೊಳಿಸಿರಬೇಕು. ಅಥವಾ MCA ಉತ್ತೀರ್ಣರಾಗಿರಬೇಕು.

ಅನುಭವ ಎಷ್ಟು ವರ್ಷ?

ಸಾಫ್ಟ್’ವೇರ್ ಡೆವಲಪರ್ ಹುದ್ದೆಗಳಿಗೆ ಅರ್ಜಿ ಹಾಕುವ ಅಭ್ಯರ್ಥಿಗಳು NET ಡೆವಲಪ್ಮೆಂಟ್’ನಲ್ಲಿ ಕನಿಷ್ಠ 3-5 ವರ್ಷ ಕೆಲಸ ಮಾಡಿದ ಅನುಭವ, MS SQL ನಲ್ಲಿ MVC ಆರ್ಕಿಟೆಕ್ಚರ್ (C# ಪೂರ್ಣ ಸ್ಟಾಕ್) ಡೆವಲಪ್ಮೆಂಟ್ ಮತ್ತು ಡೆವಲಪ್ಮೆಂಟ್’ನಲ್ಲಿ ಕನಿಷ್ಠ 2 ವರ್ಷಗಳ ಅನುಭವವನ್ನು ಹೊಂದಿರಬೇಕು.

ಆ್ಯಂಡ್ರ್ಯಾಯ್ಡ್ ಅಪ್ಲಿಕೇಶನ್ ಡೆಪಲಪರ್ ಹುದ್ದೆಗಳಿಗೆ ಅರ್ಜಿ ಹಾಕುವ ಅಭ್ಯರ್ಥಿಗಳು ಆ್ಯಂಡ್ರಾಯ್ಡ್ ಅಪ್ಲಿಕೇಶನ್ ಡೆವಲಪ್ಮೆಂಟ್’ನಲ್ಲಿ ಕನಿಷ್ಠ 3ರಿಂದ 5 ವರ್ಷ ಕೆಲಸ ಮಾಡಿದ ಅನುಭವ, ಜೊತೆಗೆ ಜಾವಾ ಲಾಂಗ್ವೇಜ್, Retrofit API ಇಂಟಿಗ್ರೇಷನ್, Sqlite ಡೇಟಾಬೇಸ್’ನಲ್ಲಿ ಕೆಲಸ ಮಾಡಿದ ಅನುಭವ ಹಾಗೂ UI/UX ನಲ್ಲಿ ಉತ್ತಮ ಜ್ಞಾನ ಹೊಂದಿರಬೇಕು.

ವೇತನ

ಕರ್ನಾಟಕ ಕಂದಾಯ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಸಾಫ್ಟ್’ವೇರ್ ಡೆವಲಪರ್ ಹಾಗೂ ಆಂಡ್ರ್ಯಾಯ್ಡ್ ಅಪ್ಲಿಕೇಶನ್ ಡೆಪಲಪರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 40,000-80,000 ವೇತನ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ಅಭ್ಯರ್ಥಿಗಳು ಸೂಕ್ತ ದಾಖಲೆಗಳೊಂದಿಗೆ ಅರ್ಜಿಯನ್ನು ದಿನಾಂಕ 23/12/2022ರೊಳಗೆ ಇ-ಮೇಲ್ ಐಡಿ ajskcareers@gmail.com ಗೆ ಕಳುಹಿಸಬೇಕು.

ಡಿಸೆಂಬರ್ 14ರಂದು ಹುದ್ದೆಯ ಕುರಿತಾಗಿ ನೋಟಿಫಿಕೇಶನ್ ಬಿಡುಗಡೆಯಾಗಿದೆ. ಅರ್ಜಿ ಹಾಕಲು ಡಿಸೆಂಬರ್ 23, 2022 ಅಂದರೆ ನಾಳೆಯೇ ಕೊನೆಯ ದಿನವಾಗಿದೆ.