ಮೈಸೂರು : ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಅಧಿಕಾರಿಗಳು ಮತ್ತು ನೌಕರರ ಕಲ್ಯಾಣ ಸಮಿತಿ (ರಿ) ಜಿಲ್ಲಾ ಘಟಕ ಮೈಸೂರು ರವರ ನೂತನ ವರ್ಷದ ದಿನದರ್ಶಿಕೆಯನ್ನು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯದರ್ಶಿಗಳಾದ ಶ್ರೀ ಯುಕೇಶಕುಮಾರ ರವರು ಅನಾವರಣಗೊಳಿಸಿದರು ಹಾಗೂ ಸಂಘದ ಎಲ್ಲರಿಗೂ ನೂತನ ವರ್ಷದ ಶುಭಾಶಯಗಳನ್ನು ತಿಳಿಸಿದರು.
ಸಂಘದ ಜಿಲ್ಲಾ ಅಧ್ಯಕ್ಷರಾದ ಪ್ರಕಾಶ ಸಿ ರವರು ಕಾರ್ಯಕ್ರಮದಲ್ಲಿ ಮಾತನಾಡಿ ಸಂಘದ ಎಲ್ಲಾ ನೌಕರರಿಗೂ ಹೊಸ ವರ್ಷವು ಎಲ್ಲರ ಮುಖದಲ್ಲಿ ಹರುಷ ತರಲೆಂದು ಹಾಗೂ ಎಲ್ಲರೂ ಸಂಘದ ಚಟುವಟಿಕೆಯಲ್ಲಿ ಸಕ್ರಿಯ ರಾಗಬೇಕೆಂದು ತಿಳಿಸಿ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ (ಆಡಳಿತ )ಶ್ರೀಮತಿ ಸವಿತ, ಉಪಕಾರ್ಯದರ್ಶಿ (ಅಭಿವೃದ್ಧಿ) ಶ್ರೀ ಭೀಮಪ್ಪ ಲಾಳಿ. ಮುಖ್ಯ ಲೆಕ್ಕಾಧಿಕಾರಿಗಳಾದ ಶ್ರೀಮತಿ ಸಿದ್ಧಗಂಗಮ್ಮ, ಜಿಲ್ಲಾ ಖಜಾಂಚಿ ಮಹದೇವನಾಯಕ ರಾಜ್ಯ ಪರಿಷತ್ ಸದಸ್ಯ ಚಂದ್ರಕಾಂತ್, ಜಿಲ್ಲಾ ಪದಾಧಿಕಾರಿಗಳಾದ ಅನಿಲ್ ಕುಮಾರ್, ಮಧುಕುಮಾರ್ ತಾರ, ತಾಲೂಕು ಅಧ್ಯಕ್ಷರುಗಳಾದ ರಾಮದಾಸ್, ಸುರೇಶ್ ಶಿವರಾಜು, ಪುಟ್ಟಸ್ವಾಮಿ, ಮಹದೇವ, ಮಹದೇವಸ್ವಾಮಿ, ಮಲ್ಕುಂಡಿ ಮಹದೇವಸ್ವಾಮಿ ಹಾಗೂ ನೌಕರ ಮಿತ್ರರು ಭಾಗವಹಿಸಿದ್ದರು.















