ಬೆಂಗಳೂರು: ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯನ್ನು ಮುಂದಿನ 3 ವರ್ಷಗಳ ಅವಧಿಗೆ ಪುನರ್ ರಚಿಸಲಾಗಿದೆ.
ಸಿಎಂ ಸಿದ್ದರಾಮಯ್ಯ ಮಂಡಳಿಯ ಅಧ್ಯಕ್ಷರಾಗಿದ್ದು, ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ಉಪಾಧ್ಯಕ್ಷರಾಗಿದ್ದಾರೆ.
ವಿಧಾನ ಮಂಡಲ ಸದಸ್ಯರಾದ ಶಾಸಕರಾದ ಅಶೋಕ್ ಮ.ಪಟ್ಟಣ, ಹೆಚ್ ಎಂ.ಗಣೇಶ್ ಪ್ರಸಾದ್ ಹಾಗೂ ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ ಮಂಡಳಿ ಸದಸ್ಯರನ್ನಾಗಿ ನೇಮಿಸಲಾಗಿದೆ.
ವನ್ಯಜೀವಿ ಬಗ್ಗೆ ಕೆಲಸ ಮಾಡುವ ಸರ್ಕಾರೇತರ ಸಂಸ್ಥೆಗಳ ಮುಖ್ಯಸ್ಥರಾದ ವೈಲ್ಡ್ ಲೈಫ್ ಅಸೋಸಿಯೇಷನ್ ಆಫ್ ಸೌತ್ ಇಂಡಿಯಾದ ಸುಶೀಲ್ ಗ್ಯಾನ್ ಚಂದ್, ಟೈಗರ್ಸ್ ಅನ್ ಲಿಮಿಟೆಡ್ ವೈಲ್ಡ್ ಲೈಫ್ ಸೊಸೈಟಿ ಸೀಮಾ ಬೇಗಂ ಖಲೀಲ್, ಬೆಂಗಳೂರು ಎನ್ವಿರಾನ್ ಮೆಂಟಲ್ ಟ್ರಸ್ಟ್ ನ ಡಾ.ದಿನೇಶ್ ಆರ್ ವಿ ಅವರನ್ನು ಸದಸ್ಯರಾಗಿ ನೇಮಿಸಲಾಗಿದೆ.
ಸಂರಕ್ಷಣಾ ವಿಶೇಷ ತಜ್ಞರು, ಜೀವಿಶಾಸ್ತ್ರಜ್ಞರು ಹಾಗೂ ಪರಿಸರ ವಾದಿಗಳಾದ ರವೀಂದ್ರ ರಘುನಾಥ್, ಚಿಕ್ಕಣ್ಣ, ಡಾ.ರಾಜ್ ಕುಮಾರ್ ಎಸ್ ಎಲ್ಲೆ, ಸಂಕೇತ್ ಪೂವಯ್ಯ, ಕು,ವೈಶಾಲಿ ಕುಲಕರ್ಣಿ, ಅಜಿತ್ ಕರಿಗುಡ್ಡಯ್ಯ, ವಿನಯ್ ಕುಮಾರ್ ಮಾಳಿಗೆ, ಡಾ.ಸಂತೃಪ್ತ, ಧೃವ್ ಎಂ ಪಾಟೀಲ್, ಮಲ್ಲಪ್ಪ ಎಸ್ ಅಂಗಡಿ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.
ಪದನಿಮಿತ್ತ ಅಧಿಕಾರಿ ಸದಸ್ಯರಾಗಿ ಅರಣ್ಯ ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಪರಿಶಿಷ್ಟ ವರ್ಗದ ಕಲ್ಯಾಣ ಇಲಾಖೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರು, ಫಾರೆಸ್ಟ್ ಸೆಲ್ ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್, ಕೇಂದ್ರ ಸರ್ಕಾರದ ಸಶಸ್ತ್ರ ಪಡೆಯ ಓರ್ವ ಪ್ರತಿನಿಧಿ, ಪಶುಸಂಗೋಪನೆ ಹಾಗೂ ಪಶುವೈದ್ಯ ಸೇವಾ ಇಲಾಖೆ, ಮೀನುಗಾರಿಕೆ ಇಲಾಖೆ, ವನ್ಯಜೀವಿ ಸಂರಕ್ಷಣೆ (ನವದೆಹಲಿಯಿಂದ ನಾಮ ನಿರ್ದೇಶನ ಹೊಂದಿದ ಅಧಿಕಾರಿ), ಭಾರತೀಯ ವನ್ಯ ಜೀವಿ ಸಂಸ್ಥೆ (ಡೆಹರಾಡೂನ್ ನಿಂದ ನಾಮ ನಿರ್ದೇಶನ ಹೊಂದಿದ ಅಧಿಕಾರಿ), ಜುವಾಲಾಜಿಕಲ್ ಸರ್ವೆ ಆಫ್ ಇಂಡಿಯಾದ (ಕೋಲ್ಕತ್ತಾದಿಂದ ನಾಮ ನಿರ್ದೇಶನ ಹೊಂದಿದ ಅಧಿಕಾರಿ), ಬಟಾನಿಕಲ್ ಸರ್ವೆ ಅಫ್ ಇಂಡಿಯಾದ (ಕೋಲ್ಕತ್ತಾದಿಂದ ನಾಮ ನಿರ್ದೇಶನ ಹೊಂದಿದ ಅಧಿಕಾರಿ) ನಿರ್ದೇಶಕರು ಹಾಗೂ ವನ್ಯಜೀವಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅರಣ್ಯ ಭವನದ ವನ್ಯಜೀವಿ ಪರಿಪಾಲಕರು ಮಂಡಳಿಯ ಸದಸ್ಯರಾಗಿರಲಿದ್ದಾರೆ.