ಮನೆ ಅಪರಾಧ ಕಾರವಾರ: ಎರಡು ಕಾಲು ಕಡಿದು ವ್ಯಕ್ತಿಯ ಬರ್ಬರ ಹತ್ಯೆ

ಕಾರವಾರ: ಎರಡು ಕಾಲು ಕಡಿದು ವ್ಯಕ್ತಿಯ ಬರ್ಬರ ಹತ್ಯೆ

0

ಕಾರವಾರ: ಹಳಿಯಾಳ ತಾಲೂಕಿನ ಕರ್ಲಕಟ್ಟಾ ಗ್ರಾಮ ವ್ಯಾಪ್ತಿಯಲ್ಲಿರುವ ಹೊಲದಲ್ಲಿ ಹಳಿಯಾಳ ಅರಣ್ಯ ವಿಭಾಗದ ದಿನಗೂಲಿ ನೌಕರ, ಹವ್ಯಾಸಿ ಉರಗ ಸಂರಕ್ಷಕ ಪರಶುರಾಮ ನಾರಾಯಣ ತೋರಸ್ಕರ ಅವರ ಎರಡೂ ಕಾಲುಗಳನ್ನು ಕಡಿದು ಭೀಕರವಾಗಿ ಹತ್ಯೆ ಮಾಡಲಾಗಿದೆ.

Join Our Whatsapp Group

ಕರ್ಲಕಟ್ಟಾ ಗ್ರಾಮದಲ್ಲಿ ಮೂರು ಎಕರೆ ಕೃಷಿ ಜಮೀನಿಗೆ ಸಂಬಂಧಿಸಿದಂತೆ ಕೊಲೆಯಾದ ಪರಶುರಾಮ ತೋರಸ್ಕರ ಹಾಗೂ ಸಹದೇವ ಹನುಮಂತ ದಡ್ಡಿಕರ ಎಂಬವರ ಮಧ್ಯೆ ಗಲಾಟೆಯಾಗಿದ್ದು, ಜಮೀನು ವ್ಯಾಜ್ಯದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಗುರುವಾರ ಇದೇ ವಿವಾದಿತ ಕೃಷಿ ಜಮೀನಿನಲ್ಲಿಯೇ ಪರಶುರಾಮರ ಕಾಲು ಕತ್ತರಿಸಿದ್ದು, ತೀವ್ರ ರಕ್ತಸ್ರಾವವಾಗಿ ಹೊಲದಲ್ಲಿಯೇ ಸಾವನ್ನಪ್ಪಿದ್ದಾರೆ.

ಪ್ರಕರಣದ ಕುರಿತು ಮೃತರ ಸಹೋದರ ತುಕಾರಾಮ ನಾರಾಯಣ ತೋರಸ್ಕರ ಹಳಿಯಾಳ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಎಸ್.ಪಿ.ವಿಷ್ಣುವರ್ದನ.ಎಸ್‌. ಹಳಿಯಾಳ ಠಾಣೆಗೆ ಸಂಜೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

ದಾಂಡೇಲಿ ಡಿವೈಎಸ್​’ಪಿ ಶಿವಾನಂದ ಕಟಗಿ ಮಾರ್ಗದರ್ಶನದಲ್ಲಿ ಹಳಿಯಾಳ ಸಿಪಿಐ ಸುರೇಶ ಶಿಂಗಿಯವರ ಮುಂದಾಳತ್ವದಲ್ಲಿ ಪಿಎಸ್ ಐ ವಿನೋದ ರೆಡ್ಡಿ, ಅಪರಾಧ ವಿಭಾಗದ ಪಿಎಸ್ ಐ ಅಮಿತ ಅತ್ತಾರ ನೇತೃತ್ವದಲ್ಲಿ ವಿಶೇಷ ತಂಡ  ರಚಿಸಲಾಗಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.