ಮನೆ ರಾಜ್ಯ ಕಾರವಾರ: ನೀರಿನಲ್ಲಿ ಮುಳುಗಿ ಇಬ್ಬರ ಸಾವು

ಕಾರವಾರ: ನೀರಿನಲ್ಲಿ ಮುಳುಗಿ ಇಬ್ಬರ ಸಾವು

0

ಕಾರವಾರ: ಕುಮಟಾ ತಾಲ್ಲೂಕಿನ ಬೆಟ್ಕುಳಿ ಗ್ರಾಮದಲ್ಲಿ ಗದ್ದೆಯಲ್ಲಿ ತುಂಬಿದ್ದ ನೀರಿನಲ್ಲಿ ಮುಳುಗಿ ಇಬ್ಬರು ಮೃತ ಪಟ್ಟ ಘಟನೆ ಗುರುವಾರ ರಾತ್ರಿ ನಡೆದಿದೆ.

Join Our Whatsapp Group

ಪೋಸ್ಟ್ ಬೆಟ್ಕುಳಿ ಗ್ರಾಮದವರಾದ ಸತೀಶ ನಾಯ್ಕ (39), ಉಲ್ಲಾಸ ಗಾವಡಿ (60) ಮೃತರು‌.

ಸತೀಶ ಅವರಿಗೆ ಸೇರಿದ್ದ ಗದ್ದೆಗೆ ಬೇಲಿ ಹಾಕಲು ತೆರಳಿದ್ದಾಗ ಘಟನೆ ಸಂಭವಿಸಿದೆ.

ಅಘನಾಶಿನಿ ನದಿ ಮಟ್ಟ ಏರಿಕೆಯಾಗಿ ಗದ್ದೆಯಲ್ಲಿ ಪೂರ್ತಿ ನೀರು ತುಂಬಿಕೊಂಡಿತ್ತು. ಬೇಲಿ ಹಾಕುವ ವೇಳೆ ಉಲ್ಲಾಸ ಕಾಲು ಜಾರಿ ನೀರಿನಲ್ಲಿ ಬಿದ್ದು ಮುಳುಗಿದ್ದರು. ಅವರ ರಕ್ಷಣೆಗೆ ಧಾವಿಸಿದ್ದ ಸತೀಶ ಕೂಡ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಗೋಕರ್ಣ ಠಾಣೆ ಪೊಲೀಸರು ತಿಳಿಸಿದ್ದಾರೆ.