ಮನೆ ರಾಜ್ಯ ಕಾಸರಗೋಡು: ನಿರ್ಮಾಣ ಹಂತದ ಮೇಲ್ಸೇತುವೆ ಕುಸಿತ – ಓರ್ವ ಕಾರ್ಮಿಕನಿಗೆ ಗಾಯ

ಕಾಸರಗೋಡು: ನಿರ್ಮಾಣ ಹಂತದ ಮೇಲ್ಸೇತುವೆ ಕುಸಿತ – ಓರ್ವ ಕಾರ್ಮಿಕನಿಗೆ ಗಾಯ

0

ಕಾಸರಗೋಡು(Kasaragodu): ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಅಂಗವಾಗಿ ಪೆರಿಯಾದಲ್ಲಿ ನಿರ್ಮಾಣಗೊಳ್ಳುತ್ತಿರುವ ಮೇಲ್ಸೇತುವೆ ಕುಸಿದು ಬಿದಿದ್ದು, ಓರ್ವ ಕಾರ್ಮಿಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಶನಿವಾರ ಮುಂಜಾನೆ ಸುಮಾರು 3 ಗಂಟೆಗೆ ಮೇಲ್ಸೇತುವೆ ಕುಸಿದು ಬಿದ್ದಿದೆ. ಈ ಸಮಯದಲ್ಲಿ ಐದು ಮಂದಿ ಕಾರ್ಮಿಕರು ಮೇಲ್ಸೇತುವೆಯ ಕಾಂಕ್ರೀಟ್‌ ಕೆಲಸದಲ್ಲಿ ನಿರತರಾಗಿದ್ದರು.

ನಿರ್ಮಾಣ ಕಾಮಗಾರಿಯಲ್ಲಿನ ಕುಂದುಕೊರತೆಯಿಂದಾಗಿ ಮೇಲ್ಸೇತುವೆ ಕುಸಿಯಲು ಕಾರಣವೆಂದು ಶಂಕಿಸಲಾಗಿದೆ. ಮೇಲ್ಸೇತುವೆ ಕುಸಿದು ಬಿದ್ದ ಬಗ್ಗೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಮೇಘಾ ಕನ್‌’ಸ್ಟ್ರೇಕ್ಷನ್‌ ಕಂಪೆನಿ ಚೆಂಗಳದಿಂದ ನೀಲೇಶ್ವರದ ತನಕದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಗುತ್ತಿಗೆ ವಹಿಸಿಕೊಂಡಿದೆ. ಮೂರು ಪಾಳಿಯಲ್ಲಿ 24 ಗಂಟೆಗಳ ಕಾಲ ನಿರ್ಮಾಣ ಕಾರ್ಯ ನಡೆಯುತ್ತಿದೆ. ಮೇಲ್ಸೇತುವೆ ನಿರ್ಮಾಣಕ್ಕೆ ಪಿಲ್ಲರ್‌’ಗಳ ಕಾಮಗಾರಿ ಪೂರ್ಣಗೊಂಡಿದೆ. ಸ್ಲ್ಯಾಬ್‌ ಕಾಮಗಾರಿ ನಡೆಯುತ್ತಿರುವಂತೆ ಕುಸಿದು ಬಿದ್ದಿದೆ.