ಕಲಬುರಗಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇತ್ತೀಚೆಗೆ ನಡೆಸಿದ್ದ ಪರೀಕ್ಷೆಗಳಲ್ಲಿ ಮಾಮೂಲಿಯಂತೆ ಮತ್ತೆ ಅಕ್ರಮಗಳು ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯೂಟೂತ್ ಮೂಲಕ ಅಕ್ರಮ ನಡೆಸುತ್ತಿದ್ದ ಗ್ಯಾಂಗ್ ಅನ್ನು ಪತ್ತೆ ಹಚ್ಚಿ, ಅರೆಸ್ಟ್ ಮಾಡಿದ ಬೆನ್ನಲ್ಲೇ ಪರೀಕ್ಷೆಯ OMR ಆನ್ಸರ್ ಶೀಟ್ ಇದೀಗ ವೈರಲ್ ಆಗಿದೆ.
ಅಭ್ಯರ್ಥಿಯೊಬ್ಬನ ಓ.ಎಂ.ಆರ್. ಶೀಟ್ ಸಾಮಾಜಿಕ ಜಾಲದಲ್ಲಿ ವೈರಲ್ ಆಗಿದೆ. ಹುಬ್ಬಳ್ಳಿಯಿಂದ ಈ ಓ.ಎಂ.ಆರ್. ಶೀಟ್ ವೈರಲ್ ಆಗಿರುವ ಶಂಕೆ ವ್ಯಕ್ತವಾಗಿದೆ. ಪರೀಕ್ಷಾ ಕೇಂದ್ರದೊಳಗೆ ಕ್ಯಾಮರಾ, ಮೊಬೈಲ್ ನಿಷೇಧವಿದೆ. ಹಾಗಿದ್ದರೂ ವೈರಲ್ ಆಗಿರುವ ಓ.ಎಂ.ಆರ್ ಶೀಟ್ ನೋಡಿದಾಗ ಅದರ ಫೋಟೋ ತೆಗೆದಿದ್ದು ಹೇಗೆ? ಎಂಬ ಪ್ರಶ್ನೆ ಮೂಡಿದೆ.
ಓಎಂಆರ್ ಶೀಟ್ ಜೊತೆ ಅಭ್ಯರ್ಥಿಯ ಹಾಲ್ ಟಿಕೆಟ್ ಇಟ್ಟು ಫೋಟೋ ತೆಗೆದಿರುವುದು ಇನ್ನೂ ಹೆಚ್ಚಿನ ಅನುಮಾನಕ್ಕೆ ಕಾರಣವಾಗಿದೆ. ಇರುವವರಿಗೆ ಕಳುಹಿಸಿದರೆ ಯಾವ ಅಭ್ಯರ್ಥಿಗೆ ಯಾವ ಪ್ಯಾರ್ಟನ್ ಪ್ರಶ್ನೆಗಳಿವೆ ಎನ್ನುವುದು ಉತ್ತರ ಹೇಳುವವರಿಗೆ ಸುಲಭವಾಗುತ್ತದೆ ಎಂಬುದು ಗಮನಾರ್ಹ.














