ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಗ್ರಾಮ ಆಡಳಿತ ಅಧಿಕಾರಿ –2024 ವಿಒಎ ನೇಮಕಾತಿ ಪರೀಕ್ಷೆಯ ಜಿಲ್ಲಾವಾರು ತಾತ್ಕಾಲಿಕ ಸ್ಕೋರ್ ಲಿಸ್ಟ್ ಅನ್ನು ಇಂದು ಪ್ರಕಟಿಸಿದೆ.
ಆಸಕ್ತ ಅಭ್ಯರ್ಥಿಗಳು https://cetonline.karnataka.gov.in/kea/vacrec24 ಇಲ್ಲಿ ಪರಿಶೀಲಿಸಿಕೊಳ್ಳಬಹುದಾಗಿದೆ.
ಪೇಪರ್ 1 ಮತ್ತು ಪೇಪರ್ 2ರ ಅಂಕಗಳ ಲಿಸ್ಟ್ ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ನೋಡಬಹುದು.
ಅಕ್ಟೋಬರ್ 27ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆದಿತ್ತು. ಪೇಪರ್ –1 100 ಅಂಕಗಳಿಗೆ ನೆಗಟಿವ್ ಅಂಕಗಳಿದ್ದವು. ಪೇಪರ್ –2 100 ಅಂಕಗಳಿಗೂ ನೆಗಟಿವ್ ಅಂಕಗಳಿದ್ದವು.
ಪಿಯುಸಿ ಅಂಕಗಳನ್ನು ಆಯ್ಕೆಗೆ ಪರಿಗಣಿಸುವುದಿಲ್ಲ. ಮೆರಿಟ್ ಆಧಾರದ ಮೇಲೆ ನೇಮಕಾತಿ ನಡೆಯಲಿದೆ.
ಈ ಪಟ್ಟಿಯ ಅನುಸಾರ ಕೆಇಎ ಶೀಘ್ರದಲ್ಲೇ ಜಿಲ್ಲಾವಾರು ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಿದೆ ಎನ್ನಲಾಗಿದೆ.
Saval TV on YouTube