ಮನೆ ಸುದ್ದಿ ಜಾಲ ಕೆಂಪೇಗೌಡರ ಕೊಡುಗೆ ರಾಜ್ಯಕ್ಕೆ ದೇಶಕ್ಕೆ ಅಪಾರ: ಯಶಸ್ವಿ ಎಸ್ ಸೋಮಶೇಖರ್

ಕೆಂಪೇಗೌಡರ ಕೊಡುಗೆ ರಾಜ್ಯಕ್ಕೆ ದೇಶಕ್ಕೆ ಅಪಾರ: ಯಶಸ್ವಿ ಎಸ್ ಸೋಮಶೇಖರ್

0

ಮೈಸೂರು:ನಗರದ ಅಗ್ರಹಾರ ವೃತ್ತದಲ್ಲಿ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ವತಿಯಿಂದ ನಾಡು ಕಟ್ಟಿದ ನಾಡಪ್ರಭು ಕೆಂಪೇಗೌಡರ 514ನೇ ಜಯಂತಿ ಆಚರಿಸಲಾಯಿತು.

Join Our Whatsapp Group

ಈ ಸಂದರ್ಭದಲ್ಲಿ ಸುಯೋಗ ಆಸ್ಪತ್ರೆಯ ಸಂಸ್ಥಾಪಕ ಎಸ್. ಪಿ ಯೋಗಣ್ಣ ಮಾತನಾಡಿ, ಕೆಂಪೇಗೌಡರ ಕೊಡುಗೆ ರಾಜ್ಯಕ್ಕೆ ದೇಶಕ್ಕೆ ಅಪಾರ. ಕೆಂಪೇಗೌಡರು ಆಗಿನ ಕಾಲದಲ್ಲಿಯೇ ಎಲ್ಲಾ ವರ್ಗದ ಜನರಿಗೆ , ಅವರವರು ಮಾಡುವ ಕಸುಬುಗಳಿಗೆ ತಕ್ಕಂತೆ ಬಳೆಪೇಟೆ, ಕಾಟನ್ ಪೇಟೆ, ಚಿಕ್ಪೇಟೆ, ದೊಡ್ಡಪೇಟೆ, ಅಕ್ಕಿಪೇಟೆ, ಮುಸ್ಲಿಮರಿಗೆ ಸುಲ್ತಾನ್ ಪೇಟೆ ಈ ರೀತಿ ಎಲ್ಲಾ ಸಮುದಾಯವರಿಗೂ ಸುಮಾರು 50 ಕ್ಕ ಹೆಚ್ಚು ಪೇಟೆಗಳನ್ನು ನಿರ್ಮಿಸಿ ಕೊಟ್ಟರು. ಈಗಿನ ರಾಜಕಾರಣಿಗಳು ಕೆಂಪೇಗೌಡರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ಜನರ, ಬಡವರ ಪರವಾಗಿ ಕೆಲಸ ಮಾಡಬೇಕು ಎಂದರು.

ನಂತರ ಸಾಹಿತಿಗಳಾದ ಬನ್ನೂರ್ ಕೆ ರಾಜು ಮಾತನಾಡಿ, ನಮ್ಮ ರಾಜ್ಯ ದೇಶವನ್ನಾಗಿದ ಹಲವಾರು ನಾಯಕರುಗಳಲ್ಲಿ ಮಹಾರಾಜರಗಳು, ಸುಲ್ತಾನರು, ಮೊಘಲರು ಇವರೆಲ್ಲರುಗಳಲ್ಲಿ ಅತ್ಯಂತ ಕ್ರಿಯಾಶೀಲ ವ್ಯಕ್ತಿತ್ವವುಳ್ಳ, ಜನಪರ ಕಾಳಜಿ ಉಳ್ಳ ಮಹಾನ್ ವ್ಯಕ್ತಿ ನಾಡಪ್ರಭು ಕೆಂಪೇಗೌಡರು. ಎಲ್ಲಾ ವರ್ಗದವರನ್ನು ಸಮನಾಗಿ ಕಂಡು ಬೆಂಗಳೂರು ಸುತ್ತಮುತ್ತ  ಸಾವಿರಕ್ಕೂ ಹೆಚ್ಚು ಕೆರೆಗಳನ್ನು ನಿರ್ಮಿಸಿದರು. ಆಗ ಬೆಂಗಳೂರಿನ ನಾಲ್ಕು ದಿಕ್ಕುಗಳಲ್ಲಿ ದ್ವಾರಗಳನ್ನು ನಿರ್ಮಿಸುವಾಗ ಒಂದು ದ್ವಾರ ನಿಲ್ಲದೆ, ಜ್ಯೋತಿಷಿಗಳನ್ನು ಕೇಳಿದಾಗ ಇದಕ್ಕೆ ತುಂಬ ಗರ್ಭಿಣಿಯ ಆಹುತಿ ಆಗಬೇಕು ಅಂತ ಹೇಳಿದಾಗ ಇದನ್ನು ಕೇಳಿಸಿಕೊಂಡ ಕೆಂಪೇಗೌಡರ ಸೊಸೆಯಾದ ಲಕ್ಷ್ಮೀದೇವಿ ತಾವೇ ಸ್ವ ಆಹುತಿ ಆಗಿ ತಮ್ಮ ಜೀವವನ್ನು ಅರ್ಪಿಸಿಕೊಂಡಂತ ವ್ಯಕ್ತಿತ್ವ ಕೆಂಪೇಗೌಡರ ಕುಟುಂಬದ್ದು. ಇಂತಹ ಮಹನೀಯರನ್ನು ಪ್ರತಿಯೊಬ್ಬರೂ ಸ್ಮರಿಸಬೇಕು ಎಂದರು.

ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಯಶಸ್ವಿ ಎಸ್ ಸೋಮಶೇಖರ್ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಕಾರ್ಯಕ್ರಮದಲ್ಲಿ ನೆರದಿದ್ದವರಿಗೆ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷರಾದ ಸಿ ಜಿ ಗಂಗಾಧರ್ ಅವರು ಸಿಹಿ ವಿತರಣೆಯನ್ನು ಮಾಡಿದರು.

ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ತೇಜೇಶ್  ಲೋಕೇಶ್ ಗೌಡ, ಕೃಷ್ಣಯ್ಯ ಪ್ರಭುಶಂಕರ್ ವಿಜಯೇಂದ್ರ ಲತಾ ಮಂಜುನಾಥ್, ಶಾಂತರಾಜೇಅರಸ್, ನರಸಿಂಹ ಗೌಡ, ಹನುಮಂತಯ್ಯ,ಅಂಬಾ, ಪದ್ಮ, ಸುಬ್ಬೆಗೌಡ, ಶಿವಲಿಂಗಯ್ಯ ದರ್ಶನ್ ಗೌಡ, ಗಣೇಶ್ ಪ್ರಸಾದ್, ಎಳನೀರು ರಾಮಣ್ಣ, ದಿಲೀಪ್, ಪ್ರಭಾಕರ, ವೆಂಕಟೇಶ್, ಮೂರ್ತಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.