ಮನೆ ಅಪರಾಧ ಕೇರಳ: ರೈಲ್ವೆ ಹಳಿಯ ಮೇಲೆ ಮೂವರು ಮಹಿಳೆಯರ ಶವ ಪತ್ತೆ

ಕೇರಳ: ರೈಲ್ವೆ ಹಳಿಯ ಮೇಲೆ ಮೂವರು ಮಹಿಳೆಯರ ಶವ ಪತ್ತೆ

0

ತಿರುವನಂತಪುರ:  ಕೇರಳದ ಕೊಟ್ಟಾಯಂನ ಸಮೀಪದ ರೈಲ್ವೆ ಹಳಿಯ ಮೇಲೆ ಮೂವರು ಮಹಿಳೆಯರ ಶವ ಇಂದು (ಶುಕ್ರವಾರ) ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Join Our Whatsapp Group

ಇಂದು ಬೆಳಿಗ್ಗೆ 5.30ರ ಸುಮಾರಿಗೆ ಈ ಘಟನೆ ನಡೆದಿದೆ.

ಕೊಟ್ಟಾಯಂ-ನಿಲಂಬೂರ್ ರೈಲು ಎರ್ನಾಕುಲಂ ಕಡೆಗೆ ಚಲಿಸುತ್ತಿದ್ದ ವೇಳೆ ಮೂವರು ಮಹಿಳೆಯರು ರೈಲಿನ ಮುಂದೆ ಹಾರಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

ಮೃತರ ವಯಸ್ಸು, ಗುರುತು ಮತ್ತು ಇತರೆ ವಿವರಗಳು ಇನ್ನೂ ಖಚಿತವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವೇಳೆ ರೈಲು ಸೇವೆಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕೊಟ್ಟಾಯಂ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.