ಮನೆ ಕಾನೂನು ಗುರು ಸಮಾಧಿ ತೆರೆಯಲು ಕೇರಳ ಹೈಕೋರ್ಟ್‌ ಅಸ್ತು

ಗುರು ಸಮಾಧಿ ತೆರೆಯಲು ಕೇರಳ ಹೈಕೋರ್ಟ್‌ ಅಸ್ತು

0

ತಿರುವನಂತಪುರ: ಸ್ವಯಂ ಘೋಷಿತ ಗುರು ಗೋಪನ್‌ ಸ್ವಾಮಿಯ “ಸಮಾಧಿ’ ವಿಚಾರವಾಗಿ ಕೇರಳ ಹೈಕೋರ್ಟ್‌ ಬುಧವಾರ ಕಾಂಕ್ರಿಟ್‌ ಚೇಂಬರ್‌ ಅನ್ನು ತೆರೆಯಲು ಅನು ಮತಿ ನೀಡಿದೆ. ತಿರುವನಂತಪುರ ಜಿಲ್ಲೆಯ ನೆಯ್ಯತ್ತಿಂಕರದಲ್ಲಿನ ಗೋಪನ್‌ ಕಳೆದ ಶುಕ್ರವಾರದಿಂದ ಕಾಣೆ ಯಾಗಿದ್ದಾರೆ ಎನ್ನಲಾಗಿತ್ತು.

Join Our Whatsapp Group

ಗೋಪನ್‌ ಕುಟುಂಬ ಕಳೆದ ಗುರುವಾ ರವೇ ಸಮಾಧಿ ಸ್ಥಿತಿಗೆ ತಲುಪಿದ್ದಾರೆ ಎಂದಿತ್ತು. ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ನೆರೆಹೊರೆಯವರು ಪೊಲೀಸರಿಗೆ ದೂರು ನೀಡಿದ್ದರಿಂದ ಪೊಲೀಸರು ತನಿಖೆ ಆರಂಭಿಸಿದ್ದರು.

ಈ ವೇಳೆ ಮನೆ ಬಳಿಯೇ ಗೋಪನ್‌ ಶವವಿರುವ ಅನುಮಾನ ವ್ಯಕ್ತವಾಯಿತು. ಹಾಗಾಗಿ ಕಂದಾಯ ಅಧಿಕಾರಿಯ ಆದೇಶ ಪತ್ರದೊಂದಿಗೆ ಪೊಲೀಸರು ತಪಾಸಣೆಗೆ ಮುಂದಾ ದಾಗ ಕುಟುಂಬವು ಆಕ್ಷೇಪ ವ್ಯಕ್ತ ಪಡಿಸಿತ್ತು. ಜತೆಗೆ ಕೆಲವು ಹಿಂದೂ ಸಂಘಟನೆಗಳೂ ಕುಟುಂಬದ ಪರ ನಿಂತಿದ್ದವು. ಜತೆಗೆ ಪೊಲೀಸರ ತಪಾಸಣೆ ಪ್ರಶ್ನಿಸಿ ಹೈಕೋರ್ಟ್‌ಗೆ ರಿಟ್‌ ಅರ್ಜಿಯನ್ನೂ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ಮಾಡಿರುವ ನ್ಯಾಯಪೀಠ ಸಮಾಧಿ ತಪಾಸಣೆ ನಡೆಸಲು ಪೊಲೀಸರಿಗೆ ಅನುಮತಿ ನೀಡಿದೆ.