ಮನೆ ಅಪರಾಧ ಕೇರಳ: ಮನೆಗೆ ಬೆಂಕಿ, ವೃದ್ಧ ದಂಪತಿ ಸಾವು, ಮಗನ ಬಂಧನ

ಕೇರಳ: ಮನೆಗೆ ಬೆಂಕಿ, ವೃದ್ಧ ದಂಪತಿ ಸಾವು, ಮಗನ ಬಂಧನ

0

ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ ಶನಿವಾರ ಮುಂಜಾನೆ ಮನೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ವೃದ್ಧ ದಂಪತಿ ಸಾವನ್ನಪ್ಪಿದ್ದಾರೆ.

Join Our Whatsapp Group

ಮೃತರನ್ನು ರಾಘವನ್ (96) ಮತ್ತು ಅವರ ಪತ್ನಿ ಭಾರತಿ (86) ಎಂದು ಗುರುತಿಸಲಾಗಿದ್ದು, ಚೆನ್ನಿತಲ ಗ್ರಾಮದಲ್ಲಿ ವಾಸವಿದ್ದರು.

ಮನೆಗೆ ಬೆಂಕಿ ಹಚ್ಚಿದ ಶಂಕೆ ಮೇರೆಗೆ ಅವರ ಪುತ್ರ ವಿಜಯನ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೂಲಗಳ ಪ್ರಕಾರ ವಿಜಯನ್ ಆಸ್ತಿ ವಿಚಾರದಲ್ಲಿ ಪೋಷಕರೊಂದಿಗೆ ಜಗಳವಾಡುತ್ತಿದ್ದ ಎನ್ನಲಾಗಿದೆ.

ಬೆಳಗಿನ ಜಾವ 3.30ರ ಸುಮಾರಿಗೆ ಬೆಂಕಿ ಹೊತ್ತಿ ಉರಿಯುತ್ತಿರುವುದನ್ನು ಚಾಲಕ ಗಮನಿಸಿದ್ದಾನೆ. ಕೂಡಲೇ ಪೊಲೀಸ್, ಅಗ್ನಿಶಾಮಕ ಅಧಿಕಾರಿಗಳು, ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದರು. ಕೂಡಲೇ ಬೆಂಕಿ ನಂದಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ದಂಪತಿಯ ಸುಟ್ಟು ಕರಕಲಾದ ದೇಹಗಳು ಪತ್ತೆಯಾಗಿವೆ. ಮನ್ನಾರ್ ಪೊಲೀಸರು ವಿಜಯನ್ ಅವರನ್ನು ಸಮೀಪದ ಪ್ಲಾಟ್‌ನಿಂದ ಬಂಧಿಸಿದ್ದು, ಬೆಂಕಿಯ ಕಾರಣವನ್ನು ತನಿಖೆ ನಡೆಸುತ್ತಿದ್ದಾರೆ.

ತನಿಖೆಯ ನಂತರ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ಆ ಸಮಯದಲ್ಲಿ ಮಗ ಮನೆಯಲ್ಲಿಲ್ಲದೆ ಯಾವುದೋ ಫ್ಲಾಟ್​ನಲ್ಲಿದ್ದುದು ಮತ್ತಷ್ಟು ಅನುಮಾನವನ್ನು ಹುಟ್ಟುಹಾಕಿದೆ. ಬೆಂಕಿ ಹೇಗೆ ಹೊತ್ತಿಕೊಂಡಿತ್ತು ಎಂಬುದರ ಕುರಿತು ಸಮರ್ಪಕ ಮಾಹಿತಿ ಇನ್ನೂ ಲಭ್ಯವಾಗಿಲ್ಲ.