ಮನೆ ರಾಜ್ಯ ಕಾರು ಅಪಘಾತ: ಕೆಜಿಎಫ್‌ ನಟ ಅವಿನಾಶ್‌ ಅಪಾಯದಿಂದ ಪಾರು

ಕಾರು ಅಪಘಾತ: ಕೆಜಿಎಫ್‌ ನಟ ಅವಿನಾಶ್‌ ಅಪಾಯದಿಂದ ಪಾರು

0

ಬೆಂಗಳೂರು (Bengaluru): ಕೆಜಿಎಫ್‌ ಖ್ಯಾತಿಯ ನಟ ಬಿ.ಎಸ್.ಅವಿನಾಶ್‌ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಸದ್ಯ ಅವಿನಾಶ್‌ ಅವರು ಅಪಾಯದಿಂದ ಪಾರಾಗಿದ್ದಾರೆ.

ನಗರದ ಎಂ.ಜಿ. ರಸ್ತೆಯ ಅನಿಲ್‌ಕುಂಬ್ಳೆ ವೃತ್ತದ ಬಳಿ ಇಂದು ಬೆಳಿಗ್ಗೆ ಕಾರು ಹಾಗೂ ಕಂಟೇನರ್‌ ನಡುವೆ ಅಪಘಾತ ಸಂಭವಿಸಿದೆ. ಅವಿನಾಶ್ ಅವರು ಜಯನಗರದಿಂದ ತಮ್ಮ ಕಾರಿನಲ್ಲಿ ಎಚ್‌ಆರ್‌ಆರ್‌ ಲೇಔಟ್‌ಗೆ ತೆರಳುತ್ತಿದ್ದರು. ಎಂ.ಜಿ. ರಸ್ತೆಯಲ್ಲಿ ಎದುರಿನಿಂದ ಬರುತ್ತಿದ್ದ ಕಂಟೇನರ್‌ ಇವರ ಕಾರಿಗೆ ಡಿಕ್ಕಿ ಹೊಡೆದಿದೆ. ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಕಂಟೇನರ್‌ ಚಾಲಕ ಶಿವಗೌಡನನ್ನು ವಶಕ್ಕೆ ಪಡೆದು, ವಾಹನ ಜಪ್ತಿ ಮಾಡಲಾಗಿದೆ ಎಂದು ಕಬ್ಬನ್‌ಪಾರ್ಕ್‌ ಸಂಚಾರಿ ಪೊಲೀಸರು ತಿಳಿಸಿದ್ದಾರೆ.‌

ಅವಿನಾಶ್‌ ಅವರು ಕೆಜಿಎಫ್‌ 2 ಚಿತ್ರದಲ್ಲಿ ಆ್ಯಂಡ್ರೋಸ್ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಹಿಂದಿನ ಲೇಖನಶಿವಸೇನಾ ಬಂಡಾಯ ಶಾಸಕ ಬಾಲಾಜಿ ಕಿಣಿಕರ್‌ ಗೆ ಕೊಲೆ ಬೆದರಿಕೆ
ಮುಂದಿನ ಲೇಖನʻನನ್ನ ಜನರೇ ನನಗೆ ದ್ರೋಹ ಬಗೆದರು’: ಉದ್ಧವ್‌ ಠಾಕ್ರೆ