ಮನೆ ಮನರಂಜನೆ ಬಿಡುಗಡೆಗೆ ಮುನ್ನವೇ ದಾಖಲೆ ಬರೆದ ಕೆಜಿಎಫ್ ಚಾಪ್ಟರ್-2

ಬಿಡುಗಡೆಗೆ ಮುನ್ನವೇ ದಾಖಲೆ ಬರೆದ ಕೆಜಿಎಫ್ ಚಾಪ್ಟರ್-2

0

ಭಾರತೀಯ ಚಿತ್ರರಂಗವಲ್ಲದೇ ವಿಶ್ವದಾದ್ಯಂತ ಟ್ರೈಲರ್​ನಿಂದಲೇ ಸಖತ್​ ಸೌಂಡ್ ಮಾಡುತ್ತಿರುವ ಬಹು ನಿರೀಕ್ಷಿತ ಸಿನಿಮಾ ಕೆಜಿಎಫ್ ಚಾಪ್ಟರ್ 2.(KGF chapter-2) ಬಿಡುಗಡೆಗೆ ಮುನ್ನವೇ ದಾಖಲೆಗಳನ್ನು ಮಾಡುತ್ತಿದೆ.

ಪ್ರಶಾಂತ್ ನೀಲ್(Prashant neel) ನಿರ್ದೇಶನದ, ರಾಕಿಂಗ್ ಸ್ಟಾರ್ ಯಶ್(Yash) ಅಭಿನಯದ ಕೆಜಿಎಫ್ ಚಾಪ್ಟರ್ 2 ಏಪ್ರಿಲ್ 14ರಂದು ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಇದರಿಂದಾಗಿ ಕೆಜಿಎಫ್ ಚಿತ್ರತಂಡ ಭರ್ಜರಿ ಪ್ರಚಾರದಲ್ಲಿ ತೊಡಗಿದೆ. ಯಶ್, ಸಂಜಯ್ ದತ್(Sanjay dutt), ರವೀನಾ ಟಂಡನ್(Raveena tendon), ಶ್ರೀನಿಧಿ ಶೆಟ್ಟಿ(Shreenidhi Shetty) ತಂಡ ಕೆಜಿಎಫ್ ಚಾಪ್ಟರ್ 2 ಪ್ರಮೋಷನ್ ಮಾಡುತ್ತಿದೆ.

ದಕ್ಷಿಣ ಭಾರತದ ಖ್ಯಾತ ಚಿತ್ರಗಳು ಮಾಡದ ದಾಖಲೆಗಳನ್ನು ಕೆಜಿಎಫ್ ಚಾಪ್ಟರ್ 2 ಸಿನಿಮಾ ಮಾಡುತ್ತಿದೆ. ಅಮೆರಿಕಾ(America)ದಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರದ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಕೇವಲ 12 ಗಂಟೆಗಳ ಅವಧಿಯಲ್ಲೇ 5,000 ಟಿಕೆಟ್​ಗಳು ಸೇಲ್ ಆಗಿವೆ. ಈವರೆಗೆ ಯಾವುದೇ ಭಾರತೀಯ ಚಿತ್ರದ ಟಿಕೆಟ್​ಗಳು ಇಷ್ಟು ದೊಡ್ಡ ಮಟ್ಟದಲ್ಲಿ ಪ್ರೀ ಬುಕ್ಕಿಂಗ್ ಆಗಿರಲಿಲ್ಲ ಎಂದು ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಹೇಳಲಾಗುತ್ತಿದೆ.

ಭಾರತ ಅಲ್ಲದೇ ಯುರೋಪ್, ಅಮೆರಿಕಾ, ರಷ್ಯಾ ಸೇರಿದಂತೆ ವಿಶ್ವದ ಹಲವೆಡೆ ಕೆಜಿಎಫ್ ಚಾಪ್ಟರ್ 2 ಸಿನಿಮಾ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ವಿಶೇಷವೆಂದರೆ ಎಲ್ಲೆಡೆ ಕನ್ನಡ ಸೇರಿದಂತೆ ತೆಲುಗು, ಹಿಂದಿ ಮೊದಲಾದ ಭಾಷೆಗಳಲ್ಲೂ ಚಿತ್ರವನ್ನು ರಿಲೀಸ್ ಮಾಡಲಾಗುತ್ತಿದೆ. ಆದರೆ, ಗ್ರೀಸ್​ನಲ್ಲಿ ರಿಲೀಸ್ ಆಗಲಿರುವ ಮೊದಲ ದಕ್ಷಿಣ ಭಾರತದ ಸಿನಿಮಾ ಎಂಬ ಖ್ಯಾತಿಯನ್ನು ಕೆಜಿಎಫ್ 2 ಪಡೆಯಲಿದೆ. ಈ ವಿಚಾರವನ್ನ ಹೊಂಬಾಳೆ ಫಿಲ್ಮ್ಸ್(Hombale Films) ಸಂಸ್ಥೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಗ್ರೀಸ್​ನಲ್ಲಿ ಈ ಚಿತ್ರ ರಿಲೀಸ್ ಆಗಲಿದೆ. ಹಾಗೆಯೇ ಇಟಲಿಯಲ್ಲಿ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಚಿತ್ರ ತೆರೆಕಾಣಲಿದೆ. ಇದರ ಜೊತೆಗೆ ರಷ್ಯಾದಲ್ಲೂ ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಿಡುಗಡೆ ಆಗುತ್ತಿದೆ. ರಷ್ಯಾದಲ್ಲಿ ರಷ್ಯನ್ ಸಬ್​ಟೈಟಲ್​ ಮೂಲಕವೇ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿದೆ.

ಇನ್ನು ಕೆಜಿಎಫ್ ಚಾಪ್ಟರ್ 2 ಸಿನಿಮಾದ ಟ್ರೈಲರ್​ ಅನ್ನು ಬರೋಬ್ಬರಿ 250 ಮಿಲಿಯನ್‌ ಗಟ್ಟಲೇ ಜನರು ನೋಡಿ ಮೆಚ್ಚಿಕೊಂಡಿದ್ದಾರೆ. ಚಿತ್ರದಲ್ಲಿ ರಾಕಿ ಅಬ್ಬರ ಹೇಗಿರುತ್ತೆ ಅನ್ನೋ ಕುತೂಹಲ ಹೆಚ್ಚಿದೆ. ಬಾಲಿವುಡ್​ ನಟ ಸಂಜಯ್ ದತ್​ ಅಧೀರನಾಗಿ ಸಿನಿಮಾದಲ್ಲಿ ನಟಿಸಿದ್ದಾರೆ.ಪವರ್ ಫುಲ್ ಪಾತ್ರದಲ್ಲಿ ರವೀನಾ ಟಂಡನ್​, ಬಹುಭಾಷಾ ನಟ ಪ್ರಕಾಶ್ ರಾಜ್​(Prakash raj), ಶ್ರೀನಿಧಿ ಶೆಟ್ಟಿ ಅಭಿನಯಿಸಿದ್ದಾರೆ.

ರವಿ ಬಸ್ರೂರು ಸಂಗೀತ ನೀಡಿದ್ದು, ಭುವನ್ ಗೌಡ ಛಾಯಾಗ್ರಹಣವಿದೆ. ಪ್ರಶಾಂತ್ ನೀಲ್ ನಿರ್ದೇಶನವಿರುವ ಈ ಚಿತ್ರವನ್ನು ವಿಜಯ್ ಕಿರಗಂದೂರ್ ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾರೆ.

ಹಿಂದಿನ ಲೇಖನಅಕ್ರಮವಾಗಿ ಕಡವೆ,ಜಿಂಕೆ ಮಾಂಸ ಮಾರಾಟ ಮಾಡಲು ಯತ್ನ: ಐವರ ಬಂಧನ
ಮುಂದಿನ ಲೇಖನಜಯತೀರ್ಥ ನಿರ್ದೇಶನದ ‘ಕೈವ’ ದಲ್ಲಿ ಧನ್ವೀರ್ ನಟನೆ