ಮನೆ ಅಪರಾಧ ಹನೂರು ತಾಲ್ಲೂಕು ಕಚೇರಿ ರೆಕಾರ್ಡ್ ರೂಂ ಬೀಗ ಒಡೆದು ದಾಖಲೆಗಳನ್ನು ಕದ್ದೊಯ್ದ ಖದೀಮರು

ಹನೂರು ತಾಲ್ಲೂಕು ಕಚೇರಿ ರೆಕಾರ್ಡ್ ರೂಂ ಬೀಗ ಒಡೆದು ದಾಖಲೆಗಳನ್ನು ಕದ್ದೊಯ್ದ ಖದೀಮರು

0

ಹನೂರು: ತಾಲ್ಲೂಕು ಕಛೇರಿಯಲ್ಲಿರುವ ರೆಕಾರ್ಡ್ ರೂಂ ಗೆ ಕಿಡಿಗೇಡಿಗಳು ಬೀಗ ಒಡೆದು ಒಳ ನುಗ್ಗಿ ಕೆಲವು ದಾಖಲೆಗಳನ್ನ ಕದ್ದೊಯ್ದಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದಲ್ಲಿ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದಲ್ಲಿರುವ ತಾಲ್ಲೂಕು ಕಛೇರಿಗೆ ಸೋಮವಾರ ರಾತ್ರಿ ಬಂದ ಕಿಡಿಗೇಡಿಗಳು ರೆಕಾರ್ಡ್ ರೂಂ ಬೀಗ ಹೊಡೆದು ಅಕ್ರಮವಾಗಿ ಒಳ ಪ್ರವೇಶ ಮಾಡಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಬೆರಳಚ್ಚು ವಿಭಾಗ ಹಾಗೂ ಶ್ವಾನ ದಳವನ್ನು ಕರೆಯಿಸಿ ಪರಿಶೀಲಿಸಿದರು.

ಹನೂರು ಪಟ್ಟಣ ಹಾಗೂ ತಾಲ್ಲೂಕಿನಲ್ಲಿ ಭೂ ಕಳ್ಳರು ಹೆಚ್ಚಾಗುದ್ದು ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಮೀನು ಖರೀದಿ ಹಾಗೂ ಪರಭಾರೆ ಮಾಡಿರುವವರೇ ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಪೊಲೀಸರ ತನಿಖೆಯಿಂದ ಸತ್ಯಾಸತ್ಯತೆ ಬಯಲಿಗೆ ಬರಬೇಕಾಗಿದೆ.

ಹಿಂದಿನ ಲೇಖನವಸತಿ ಇಲಾಖೆ: ಸ್ವಂತ ಸಂಪನ್ಮೂಲ ಕ್ರೋಢೀಕರಣಕ್ಕೆ ನೀತಿ- ಪ್ರಸ್ತಾವನೆಗೆ ಮುಖ್ಯಮಂತ್ರಿ ಸೂಚನೆ
ಮುಂದಿನ ಲೇಖನಮಾತಿನಲ್ಲಿ ಬದ್ಧತೆ