ಮನೆ ಮನರಂಜನೆ  ‘ಖಾಸಗಿ ಪುಟ’ಗಳಲ್ಲಿ ಸೆರೆಯಾದ ಪ್ರೇಮಕಥೆ!

 ‘ಖಾಸಗಿ ಪುಟ’ಗಳಲ್ಲಿ ಸೆರೆಯಾದ ಪ್ರೇಮಕಥೆ!

0

ಕನ್ನಡ ಚಿತ್ರರಂಗದಲ್ಲಿ ಒಂದಷ್ಟು ಹೊಸ ಪ್ರಯೋಗದ, ನೈಜತೆಗೆ ಹೆಚ್ಚು ಒತ್ತು ನೀಡುವ ಸಿನಿಮಾಗಳು  ಇತ್ತೀಚಿಗೆ ತೆರೆ ಕಾಣುತ್ತಿದ್ದು, ಆ ಸಾಲಿಗೆ “ಖಾಸಗಿ ಪುಟಗಳು ಹೊಸ ಸೇರ್ಪಡೆಯಾಗಿದೆ.

ಒಂದು ಲವ್‌’ಸ್ಟೋರಿಯನ್ನು ಎಷ್ಟು ನೈಜವಾಗಿ ಹಾಗೂ ಮನಸ್ಸಿಗೆ ಹತ್ತಿರವಾಗುವಂತೆ ಕಟ್ಟಿಕೊಡಲು ಸಾಧ್ಯವೋ, ಆ ತರಹದ ಒಂದು ಪ್ರಯತ್ನವನ್ನು ಚಿತ್ರತಂಡ ಇಲ್ಲಿ ಮಾಡಿದೆ. ಹಾಗಂತ ಚಿತ್ರದ ಕಥೆ ಈ ಹಿಂದೆ ಯಾರೂ ನೋಡಿರದ, ಕೇಳಿರದ ಕಥೆಯಲ್ಲ. ಆದರೆ, ಹೊಸಬರ ತಂಡ ನಿರೂಪಣೆಯಲ್ಲಿ ಹಾಗೂ ಅಲ್ಲಲ್ಲಿ ನೀಡುವ ಟ್ವಿಸ್ಟ್‌’ಗಳ ಮೂಲಕ ಸಿನಿಮಾವನ್ನು ಹೆಚ್ಚು ಆಪ್ತವಾಗುವಂತೆ ಹಾಗೂ ಕೊಂಚ ಕಾಡುವಂತೆ ಮಾಡಿದೆ. ಆ ಮಟ್ಟಿಗೆ ಹೊಸಬರ ಪ್ರಯತ್ನವನ್ನು ಮೆಚ್ಚಬಹುದು.

ಕರಾವಳಿ ಪರಿಸರದಲ್ಲೇ ನಡೆಯುವ “ಖಾಸಗಿ ಪುಟಗಳು’ ಕೆಲವೇ ಕೆಲವು ಪಾತ್ರಗಳ ಸುತ್ತ ಸುತ್ತುವ ಸಿನಿಮಾ. ಈ ಸಿನಿಮಾದ ಪರಮ ಉದ್ದೇಶ ಲವ್‌’ಸ್ಟೋರಿಯನ್ನು ಹೆಚ್ಚು ಆಪ್ತವಾಗುವಂತೆ ಕಟ್ಟಿಕೊಡುವುದು. ಅದೇ ಕಾರಣದಿಂದ ಚಿತ್ರದಲ್ಲಿ ಬರುವ ಇತರ ದೃಶ್ಯಗಳನ್ನು ಹೆಚ್ಚು ಎಳೆದಾಡದೇ, ಅಲ್ಲಲ್ಲೇ ಮುಗಿಸಿ, ಪ್ರೇಮಕಥೆಯನ್ನೇ ಮುಂದೆ ತಂದಿದೆ.

ಪ್ರೇಕ್ಷಕನ ಊಹೆಗೆ ನಿಲುಕದೇ ಕಥೆ ಸಾಗುವುದು ಕೂಡಾ ಇಲ್ಲಿನ ಪ್ಲಸ್‌ ಎಂದೇ ಹೇಳಬಹುದು.

ಚಿತ್ರದಲ್ಲಿ ನಾಯಕ ವಿಶ್ವ ಪ್ರೇಮಿಯಾಗಿ ಇಷ್ಟವಾಗುತ್ತಾರೆ. ನಾಯಕಿ ಲಿಯೋನಿಲ್ಲ ಶ್ವೇತಾ ಡಿಸೋಜಾ ಮುಖಭಾವದಲ್ಲೇ ನಟಿಸಿ, ಭರವಸೆ ಮೂಡಿಸಿದ್ದಾರೆ. ಉಳಿದಂತೆ ಮೋಹನ್‌ ಜುನೇಜ, ಪ್ರಶಾಂತ್‌ ನಟನಾ, ಶ್ರೀಧರ್‌, ಚೇತನ್‌ ದುರ್ಗಾ, ನಂದಗೋಪಾಲ್‌, ನಿರೀಕ್ಷಾ ಶೆಟ್ಟಿ, ಮಂಗಳೂರು ದಿನೇಶ್‌ ಮುಂತಾದವರು “ಖಾಸಗಿ ಪುಟಗಳು’ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

“ಖಾಸಗಿ’ ಲವ್‌’ಸ್ಟೋರಿಯನ್ನು ಒಮ್ಮೆ “ಬಹಿರಂಗ’ವಾಗಿ ನೋಡಲಡ್ಡಿಯಿಲ್ಲ.

ಹಿಂದಿನ ಲೇಖನಮೈಸೂರು: ಇಬ್ಬರು ಸರಗಳ್ಳರ ಬಂಧನ:  11.75 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ
ಮುಂದಿನ ಲೇಖನಮೇಲುಕೋಟೆ: ಮರದ ಕೊಂಬೆ ಬಿದ್ದು, ಮೂವರು ವಿದ್ಯಾರ್ಥಿಗಳು , ಓರ್ವ ಶಿಕ್ಷಕನಿಗೆ ಗಂಭೀರ ಗಾಯ