ಮೈಸೂರು : ನಟ ಕಿಚ್ಚ ಸುದೀಪ್ ಪತ್ನಿ ಸಮೇತರಾಗಿ ಮೈಸೂರಿನಲ್ಲಿರುವ ಚಾಮುಂಡಿ ಬೆಟ್ಟಕ್ಕೆ ಇಂದು ಭೇಟಿ ನೀಡಿ, ದೇವರ ದರ್ಶನ ಪಡೆದಿದ್ದಾರೆ.
ಸುದೀಪ್ ದಂಪತಿ ಜೊತೆ ಬಿಗ್ಬಾಸ್ ಸ್ಪರ್ಧಿ ವಿನಯ್ ಗೌಡ, ಪತ್ನಿ ಅಕ್ಷತಾ ಹಾಗೂ ಪುತ್ರ, ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದಿದ್ದಾರೆ. ಈ ವೇಳೆ ಕಿಚ್ಚ ಸುದೀಪ್ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.
ಇತ್ತೀಚೆಗಷ್ಟೆ ಅಗಲಿದ್ದ, ತಾಯಿಯ ಹುಟ್ಟುಹಬ್ಬವನ್ನು ನೆನ್ನೆ (ಶನಿವಾರ) ಗಿಡ ನೆಡುವ ಮೂಲಕ ಸುದೀಪ್ ವಿಶೇಷವಾಗಿ ಆಚರಿಸಿದ್ದರು. ಅಲ್ಲದೇ ಇದೇ ಸೆ.2 ರಂದು ಸುದೀಪ್ ಕೂಡ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.














