ಮನೆ ಅಪರಾಧ ಉತ್ತರ ಪ್ರದೇಶದಲ್ಲಿ 13 ವರ್ಷದ ಬಾಲಕಿಯ ಅಪಹರಣ ಮತ್ತು ಅತ್ಯಾಚಾರ!

ಉತ್ತರ ಪ್ರದೇಶದಲ್ಲಿ 13 ವರ್ಷದ ಬಾಲಕಿಯ ಅಪಹರಣ ಮತ್ತು ಅತ್ಯಾಚಾರ!

0

ಉತ್ತರ ಪ್ರದೇಶ : ಉತ್ತರ ಪ್ರದೇಶದ ಇಟಾವಾ ಜಿಲ್ಲೆಯಲ್ಲಿ 13 ವರ್ಷದ ಬಾಲಕಿಯೊಬ್ಬಳನ್ನು ಅಪಹರಿಸಿ, ಅವಳ ಮೇಲೆ ವಾರಗಳ ಕಾಲ ಅತ್ಯಾಚಾರವೆಸಗಿರುವ ಭೀಕರ ಘಟನೆ ವರದಿಯಾಗಿದೆ. ಈ ಘಟನೆ ಇಡೀ ರಾಜ್ಯದಲ್ಲಿ ಆಘಾತ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಈಗಾಗಲೇ ಒಬ್ಬ ಆರೋಪಿಯನ್ನು ಬಂಧಿಸಿದ್ದು, ಇತರ ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಈ ಘಟನೆ ಏಪ್ರಿಲ್ 26ರಂದು ಸಂಜೆ ನಡೆದಿದೆ. ಬಾಲಕಿ ತನ್ನ ಅಜ್ಜಿಯವರೊಂದಿಗೆ ಹಳ್ಳಿಯಲ್ಲಿ ವಾಸವಾಗಿದ್ದು, ಆ ದಿನ ಸಂಜೆ ತರಕಾರಿ ಖರೀದಿಸಲು ಮನೆದಿಂದ ಹೊರಟಿದ್ದಳು. ಈ ವೇಳೆ ಒಂದು ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬನು, ವಿಳಾಸವನ್ನು ಕೇಳುವ ನೆಪದಲ್ಲಿ ಆಕೆಯನ್ನು ಮಾತನಾಡಿಸುತ್ತಿದ್ದ. ಅಷ್ಟರಲ್ಲಿ ಆತನಿಗೆ ಸಹಾಯ ನೀಡಲು ಬಂದುದಾಗಿ ತೋರಿಸಿಕೊಂಡು, ಆಕೆಯನ್ನು ಬಲವಂತವಾಗಿ ಕಾರಿಗೆ ಎಳೆದು ಕೂರಿಸುತ್ತಾನೆ.

ಆತ ಕಾರನ್ನು ಒಂದು ಮೆಡಿಕಲ್ ಸ್ಟೋರ್‌ ಬಳಿ ನಿಲ್ಲಿಸಿ, ನೀರಿನ ಬಾಟಲಿ ಮತ್ತು ಔಷಧಿಗಳನ್ನು ಖರೀದಿಸುತ್ತಾನೆ. ಆ ಬಳಿಕ ಆಕೆಗೆ ನೀರಿಗೆ ಔಷಧಿ ಬೆರೆಸಿ ಕುಡಿಯುವಂತೆ ಒತ್ತಾಯಿಸುತ್ತಾನೆ. ಕುಡಿದ ನಂತರ ಬಾಲಕಿ ಪ್ರಜ್ಞೆ ತಪ್ಪಿದ್ದು, ನಂತರ ಹೋಟೆಲ್‌ಗೆ ಕರೆದೊಯ್ದಿದ್ದ ಎನ್ನಲಾಗಿದೆ.

ಆಕೆಯ ಹೇಳಿಕೆಯಂತೆ, ಆಕೆಗೆ “ರೇಷ್ಮಾ” ಎಂಬ ನಕಲಿ ಹೆಸರಿನಲ್ಲಿ ನಕಲಿ ಐಡಿ ತಯಾರಿಸಿ, ಸಹಿ ಹಾಕುವಂತೆ ಒತ್ತಾಯಿಸಲಾಗುತ್ತಿತ್ತು. ಸಹಿ ಹಾಕದಿದ್ದರೆ ಮತ್ತಷ್ಟು ಹಿಂಸೆ ಅನುಭವಿಸಬೇಕಾಗಬಹುದು ಎಂಬ ಬೆದರಿಕೆಯೂ ಇರಿತ್ತು. ಆರೋಪಿ ವಿಷ್ಣು, ತನ್ನ ಸಹಚರ ನಾರಾಯಣ್‌ಗೆ ಕರೆ ಮಾಡಿ, ಬಾಲಕಿಯನ್ನು ದಾರಿ ಮಧ್ಯದಲ್ಲಿ ಬಿಟ್ಟುಕೊಡುತ್ತಾನೆ. ನಂತರ ಸಂಜಯ್ ಎಂಬ ಮತ್ತೊಬ್ಬ ಆರೋಪಿ, ಆಕೆಯನ್ನು ಎತ್ತಿಕೊಂಡು ತನ್ನ ಮನೆಗೆ ಕರೆದೊಯ್ಯುತ್ತಾನೆ. ಅಲ್ಲಿ ಆಕೆಗೆ ಮತ್ತೊಮ್ಮೆ ಔಷಧಿ ಬೆರೆಸಿದ ಪಾನೀಯ ನೀಡಿ ಪೀಡನೆ ಮುಂದುವರಿಸಲಾಗುತ್ತದೆ.

ಅತ್ಯಾಚಾರ ಪೀಡಿತ ಬಾಲಕಿಯ ಪೋಷಕರು ದೆಹಲಿಯಲ್ಲಿ ವಾಸವಿದ್ದು, ಆಕೆ ತನ್ನ ಅಜ್ಜಿಯೊಂದಿಗೆ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ಏಪ್ರಿಲ್ 26ರಂದು ಆಕೆ ಕಾಣೆಯಾಗಿದ್ದು, ಮೇ 1ರಂದು ಪತ್ತೆಯಾಗಿದ್ದಳು. ಪತ್ತೆಯಾದಾಗ ಆಕೆಯ ಆರೋಗ್ಯ ಸ್ಥಿತಿ ತೀವ್ರವಾಗಿ ಕುಗ್ಗಿತ್ತು. ಪೋಷಕರು ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಇಲ್ಲಿಯವರೆಗೆ ವಿಷ್ಣು ಎಂಬ ಆರೋಪಿ ಬಂಧನಕ್ಕೊಳಗಾಗಿದ್ದಾನೆ. ಇತರ ಆರೋಪಿಗಳ ಪತ್ತೆಗೆ ಬಲವಾದ ಶೋಧ ಕಾರ್ಯ ನಡೆಯುತ್ತಿದೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಬೆಳವಣಿಗೆಗಳ ನಿರೀಕ್ಷೆ ಇದೆ.