ಮನೆ ಜ್ಯೋತಿಷ್ಯ ಮೂತ್ರಪಿಂಡ

ಮೂತ್ರಪಿಂಡ

0

ಹೃದಯದಷ್ಟೇ ನಿಯಮಿತವಾಗಿ ಕೆಲಸಮಾಡುವ ಅಂಗ ಈ ಮೂತ್ರಕೋಶ. ಇದು ರಕ್ತದಲ್ಲಿ ಶೇಖರವಾಗಿರುವ ವಿಷಕಾರಿ ತ್ಯಾಜ್ಯವನ್ನು ಸೋಸಿ, ಅದನ್ನು ಮೂತ್ರದ ಮೂಲಕ ಹೊರ ಹಾಕುವ ವ್ಯವಸ್ಥೆ ಮಾಡುತ್ತದೆ. ಒಂದುವೇಳೆ ಮೂತ್ರಕೋಶದಲ್ಲಿ ಸಮಸ್ಯೆಯಾದರೆ,ಅದು ದೇಹದ ವ್ಯವಸ್ಥೆಯನ್ನೇ ಅಲುಗಾಡಿಸಬಹುದು.ಮನೆಯ ಮೋರಿ ಕಟ್ಟಿದಾಗ ಮೊರಿ ನೀರು ಮನೆಯೆಲ್ಲಾ ಸೇರಿದರೆ ಯಾವ ರೀತಿ ಸಮಸ್ಯೆಯಾಗುತ್ತದೆಯೋ ಅದೇ ಪರಿಸ್ಥಿತಿ ದೇಹಕ್ಕೆ ಆಗುತ್ತದೆ.ನಮ್ಮ ದೇಹದಲ್ಲಿ 20 ಲಕ್ಷಕ್ಕೂ ಅಧಿಕ ಮಂದಿ ತೀವ್ರವಾದ ಕಿಡ್ನಿ ವ್ಯಾಧಿಯಿಂದ ನರಳುತ್ತಿದ್ದಾರೆ

Join Our Whatsapp Group

     ಈ ಮೂತ್ರಪಿಂಡವು ನಮ್ಮ ದೇಹದ ಒಂದು ಮುಖ್ಯ ಅಂಗ, ಜನಿಸಿದ ಎಲ್ಲರಿಗೂ ಎರಡು ಮೂತ್ರಪಿಂಡಗಳಿವೆ. ಇಡೀ ದೇಹದ ಕ್ರಿಯೆಯನ್ನು ಈ ಮೂತ್ರಪಿಂಡಗಳು ನಿರ್ವಹಿಸಿ ನಮ್ಮ ಆರೋಗ್ಯವನ್ನು ಕಾಪಾಡುತ್ತದೆ.ಸಾವಿರದಲ್ಲಿ ಒಬ್ಬರಿಗೆ ಮಾತ್ರ ಒಂದು ಮೂತ್ರಪಿಂಡವಿರುತ್ತದೆ ಅದನ್ನು ಸಹ ಒಂದೇ ಕಿಡ್ನಿಯು ಅವರ ದೇಹ ಕಾರ್ಯವನ್ನು ನಿರ್ವಹಿಸಲು ಸಮರ್ಥವಾಗಿರುತ್ತದೆ. ಮೂತ್ರಪಿಂಡಗಳು ನಮ್ಮ ದೇಹದ ಜಠರದ ಹಿಂದೆ ಬೆನ್ನೆಲುಬು ಪಕ್ಕದ ಎರಡುಭಾಗದಲ್ಲಿ ಒಂದೊಂದು ಬೆನ್ನಿಗೆ ಅಂಟಿಕೊಂಡಿರುತ್ತದೆ. ದೇಹದ ಬಲಭಾಗದಲ್ಲಿ ಬಲಕಿಡ್ನಿ, ಎಡಭಾಗದಲ್ಲಿ ಎಡಕಿಡ್ನಿ ಇರುತ್ತದೆ.ಪ್ರತಿ ಕಿಡ್ನಿಯು 11 ಸೆಂಟಿಮೀಟರ್ ಉದ್ದ,3 ಸೆಂ.ಟಿಮೀಟರ್ ದಪ್ಪ 6 ಸೆಂ.ಟಿಮೀಟರ್ ಅಗಲವಾಗಿ ಪುರುಷರಲ್ಲಿ 150 ಗ್ರಾಂ, ಸ್ತ್ರೀಯರಲ್ಲಿ 135 ಗ್ರಾಂ ತೂಕವಾಗಿ ಬೀನ್ಸ್ ಬೀಜಾಕೃತಿಯಲ್ಲಿರುತ್ತದೆ.ಇದು 12 ಸಣ್ಣಹಾಳೆಗಳಿಂದ ರಚನೆಯಾಗಿದೆ.

ಕಿಡ್ನಿಮೇಲೆ ಸುಪರ್ನಲ್ ಗ್ರಂಥಿ ಇದೆ. ಕಿಡ್ನಿ ಮೇಲೆ ಸೂಪರ್ ಗ್ರಂಥಿ ಇದೆ ಕಿಡ್ನಿ ಒಳಗೆ 10 ಬಿಲ್ಲೆಯಾಕಾರದಲ್ಲಿ ಸೂಕ್ಷ್ಮವಾದ ಬಲೆಯಾಕಾರದಲ್ಲಿ ನರವ್ಯೂಹ ಸಮೂಹ ಹೊಂದಿದೆ.ಇದನ್ನು ಮೆಡುಲ್ಲಾ ಎನ್ನುತ್ತೇವೆ.ಇದು ಮೂತ್ರಕೋಶದಲ್ಲಿ ಅತ್ಯಂತ ಕಾರ್ಯನಿರ್ವಾಹಕ ಅಂಗ ಇದರ ಒಂದೊಂದರಲ್ಲಿ ಲಕ್ಷ ನೆಫ್ರಾನ್ ಗಳು ಹೊಂದಿವೆ. ಇದರಲ್ಲಿ ರಕ್ತವನ್ನು ಶುದ್ದಿ ಮಾಡಿ ತ್ಯಾಜ್ಯವನ್ನು ಬೇರೆ ಮಾಡಿ ಕಳಿಸುವ ಸೂಕ್ಷ್ಮವಾದ ಸೋಸುವ ಜಲ್ಲಡಿಯಂತಹ ನಾಳಗಳ ಸಮೂಹ ಅಡಕವಾಗಿದೆ.