ಮಧುಮೇಹ/ ಬಿ.ಪಿ : ಮಧುಮೇಹ ಅಧಿಕ ರಕ್ತದೊತ್ತ ಡವಿರುವವರಿಗೆ ಮಾತ್ರ ಕೋಶ ವ್ಯಾದಿ ಇರುತ್ತದೆ. ಮಧುಮೇಹದವರಿಗೆ ಅವರ ರಕ್ತದಲ್ಲಿ ಸೇರಿರುವ ಗ್ಲೂಕೋಸ್ ಈ ನೆಫ್ರಾನ್ ಗಳಿಗೆ ಹಾನಿ ಮಾಡುತ್ತದೆ. ಗ್ಲೂಕೋಸ್ ಪ್ರಮಾಣ ಅಧಿಕವಾದರೆ ಅದು ನೆಫ್ರಾನ್ ಗಳ ಸೂಕ್ಷ್ಮನಾಳಗಳನ್ನು ಮುಚ್ಚಿ ಬಿಡುತ್ತವೆ ಅಧಿಕ ರಕ್ತ ಒತ್ತಡದಿಂದ ಕಿಡ್ನಿಯ ರಕ್ತನಾಳಗಳನ್ನು ಗಡಸತ್ವ ಮಾಡಿ ಹಾಳು ಮಾಡುತ್ತದೆ ಇದರಿಂದ ರಕ್ತ ಶುದ್ಧೀಕರ್ಯದಲ್ಲಿ ತಡೆಯಾಗುತ್ತದೆ ಅಥವಾ ಮೂತ್ರಕೋಶವೇ ವೈಫಲ್ಯ ಆಗುವ ಸಾಧ್ಯತೆ ಇರುತ್ತದೆ.
ಗ್ಲೊಮಿರುಲರ್ ವ್ಯಾದಿ : ಇದು ಸಣ್ಣರಕ್ತ ಲೋಮನಾಳಗಳ ಹುಂದಿ ಇದು ರಕ್ತದಲ್ಲಿರುವ ಪ್ರೋಟೀನ್ ಮತ್ತು ನಾಶವಾದ ಜೀವಕೋಶಗಳನ್ನು ತೆಗೆದುಹಾಕಿ ಸೋಸುವ ಕೆಲಸ ಮಾಡುತ್ತದೆ.ಇದನ್ನು ಗ್ಲೊಮಿರುಲರ್ ಶೋಧಿಸುವಿಕೆ ಎನ್ನುತ್ತಾರೆ. ಈ ಸೋಸುವಿಕೆಯಲ್ಲಿ ತೊಂದರೆಯಾದರೆ ಮೂತ್ರದಲ್ಲಿರುವ ಪ್ರೋಟೀನ್ ಅನ್ನು ಮೂತ್ರಕೋಶ ಯುರಿಯಾಗಿ ಕರಗಿಸಲಾಗಿದೆ ಹಾಗೇ ಕಳಿಸುತ್ತದೆ.ಇದರಿಂದ ಪ್ರೊಟೀನ್ ಅಂಶ ಮೂತ್ರದಲ್ಲಿ ಹೆಚ್ಚಾಗುತ್ತದೆ.ಇದು ಸೋಸುವ ದರ ನೂರು ಎಂ.ಎಲ್ ಮಿನಿಟ್ ಮೂತ್ರ ಪರೀಕ್ಷೆಯಿಂದ ತಿಳಿಯಬಹುದು.
ಕಿಡ್ನಿಕಲ್ಲು : ಇವು ಕ್ಯಾಲ್ಸಿಯಂ ಮತ್ತು ಯೂರಿಯಾ ಆಸಿಡ್ ಹರಳುಗಳು.ಇವು ಸಣ್ಣಗಿದ್ದರೆ ಮೂತ್ರದಲ್ಲಿ ಹೋಗುತ್ತದೆ. ದೊಡ್ಡ ಗಾತ್ರದ ಕಲ್ಲುಗಳು ಶಸ್ತ್ರ ಚಿಕಿತ್ಸೆಯಿಂದ ಮಾತ್ರ ತೆಗೆಯಲು ಸಾಧ್ಯ.ಇಲ್ಲದಿದ್ದರೆ ಕಾರ್ಯಕ್ಕೆ ಅಡ್ಡಿ ಮಾಡುತ್ತದೆ.
ಕ್ರಿಯೋಟೈನೈನ್ : ಮಾಂಸಖಂಡಗಳ ಚಟುವಟಿಕೆಯಿಂದ ಅನೇಕ ಜೀವಕೋಶಗಳು ಪ್ರತಿದಿನ ನಾಶವಾಗುತ್ತದೆ ಮತ್ತು ಮತ್ತೆ ದೇಹದಲ್ಲಿ ಜೀವಕೋಶಗಳು ಉತ್ಪತ್ತಿಯಾಗುತ್ತದೆ. ಈ ರೀತಿ ನಾಶವಾದ ತ್ಯಾಜ್ಯವನ್ನು ಕ್ರಿಯೋಟೈನೈ ಎಂದು ಕರೆಯುತ್ತಾರೆ.ರಕ್ತದಲ್ಲಿರುವ ಈ ತ್ಯಾಜ್ಯ ಮೂತ್ರಪಿಂಡವು ಶೋಧಿಸಿ, ರಕ್ತದಲ್ಲಿ ಕ್ತಿಯೋಟೈನೈನ್ ಮಟ್ಟ ಕಾಪಾಡುತ್ತದೆ ಮೂತ್ರಪಿಂಡದಲ್ಲಿ ಸೋಧಿಸುವ ಸಾಮರ್ಥ್ಯ ಕಡಿಮೆಯಾದರೆ ಈ ತ್ಯಾಜ್ಯ ರಕ್ತದಲ್ಲಿ ಹೆಚ್ಚಾಗಿ ರಕ್ತ ಮಾಲಿನ ವಾಗುತ್ತದೆ ಆಗ ರಕ್ತವನ್ನು ಶೋಧಿಸಲು ಡಯಾಲಿಸಿಸ್ ಮಾಡಬೇಕಾಗುತ್ತದೆ. ಸಾಮಾನ್ಯವಾಗಿ ಆರೋಗ್ಯವಂತ ಮನುಷ್ಯನ ರಕ್ತದಲ್ಲಿ ಕ್ರಿಯೇಟೈನೈನ್ ಮಟ್ಟ 0.8 ರಿಂದ 1.5 ಇರಬೇಕು. ಮೂತ್ರ ಪರೀಕ್ಷೆಯಿಂದ ತಿಳಿಯಬಹುದು.
ಅತಿಯಾಗಿ ನೋವಿನ ಮಾತ್ರೆಯಿಂದ ಮುತ್ತು ಅತಿಯಾದ ಆೄಂಟಿಬಯೋಟಿಕ್ ಪೆನ್ಸಿಲಿನ್ ಇತರೆ ಮಾತ್ರೆಗಳಿಂದ ರಕ್ತದಲ್ಲಿ ಕ್ರಿಯಾಟಿನ್ ಮಟ್ಟ ಹೆಚ್ಚುತ್ತದೆ ಈ ಔಷಧದ ರಾಸಾಯನಿಕ ವಸ್ತುವು ಮೂತ್ರಕೋಶದಲ್ಲಿ ಶೋಧಿಸುವ ಕಾರ್ಯಕ್ಕೆ ಅಡ್ಡಿ ಮಾಡುತ್ತದೆ.