ಮನೆ ಜ್ಯೋತಿಷ್ಯ ಮೂತ್ರಪಿಂಡ

ಮೂತ್ರಪಿಂಡ

0

 ಇದರ ನಾಲ್ಕು ಮುಖ್ಯ ಕೆಲಸಗಳು :

Join Our Whatsapp Group

1. ದೇಹದ ನೀರಿನ ಸಮತೋಲನ ಕಾಪಾಡುವುದು

2. ರಕ್ತದಲ್ಲಿರುವ ಕಲ್ಮಶವನ್ನು ಶುದ್ಧೀಕರಿಸುವುದು

3. ಕ್ಯಾಲ್ಸಿಯಂ ಸಮತೋಲವನ್ನು ಕಾಪಾಡುವುದು.

4. ರಕ್ತದ ಕೆಂಪು ರಕ್ತ ಕಣಗಳಲ್ಲಿ ಹಿಮೋಗ್ಲೋಬಿನ್ ಉತ್ಪತ್ತಿ ಮಾಡುವುದು.

ದೇಹದ ನೀರಿಸಮತೋಲನವನ್ನು ಕಾಪಾಡುವುದು :

    ದೇಹವು ಉತ್ತಮವಾದ ಆರೋಗ್ಯದಿಂದ ಇರಬೇಕಾದರೆ ನಾವು ಉತ್ತಮವಾದ ಆಹಾರವನ್ನು ಸೇವಿಸಬೇಕು ನಾವು ಸೇವಿಸಿದ ಆಹಾರ ಪಚನವಾಗಿ ಅದರಲ್ಲಿರುವ ಪೋಷಕಾಂಶಗಳು ಗ್ಲುಕೋಸ್ ಮೊದಲಾದ ಪೌಷ್ಟಿಕಾಂಶಗಳು ರಕ್ತದ ಮೂಲಕ ದೇಹದ ವಿವಿಧ ಭಾಗಗಳಿಗೆ ತಲುಪಿ ನಾವು ಚೈತನ್ಯವಾಗಿರುವಂತೆ ಮಾಡುತ್ತದೆ. ಊಟದಷ್ಟೇ ನಮ್ಮ ದೇಹಕ್ಕೆ ನೀರು ಸಹ ಮುಖ್ಯ ಆದ್ದರಿಂದ ನಾವು ಪ್ರತಿದಿನ ನೀರು ಜ್ಯೂಸ್, ಕಾಫಿ, ಟೀ, ಮೊದಲಾದ ದ್ರವ್ಯ ಪದಾರ್ಥಗಳನ್ನು ಸೇವಿಸುತ್ತೇವೆ.

     ಏಕೆಂದರೆ ನಾವು ತಿಂದ ಆಹಾರ ಪಚನವಾಗಬೇಕಾದರೆ ನಮಗೆ ಸಾಕಷ್ಟು ನೀರಿನ ಅವಶ್ಯಕವಿದೆ ನಾವು ಪ್ರತಿದಿನ ಆಹಾರ ಪೌಷ್ಟಿಕಾಂಶಕ್ಕಾಗಿ ತೆಗೆದುಕೊಳ್ಳುವಾಗ ನಾವು ತಿಳಿಯದಂತೆ ಅನೇಕ ಬೇಡವಾದ ವಿಷಯುಕ್ತ ಆಹಾರವನ್ನು ಸೇವಿಸುತ್ತೇವೆ. ಆ ಬೇಡವಾದ ವಿಷಯುಕ್ತ ಆಹಾರವನ್ನು ನಮ್ಮ ದೇಹದಿಂದ ಈ ಮೂತ್ರಪಿಂಡಗಳು ಹೊರ ಹಾಕುತ್ತವೆ ಈ ಮೂತ್ರಪಿಂಡಗಳು ವಿಷ ಪದಾರ್ಥಗಳನ್ನು ನೀರಿನ ಮೂಲಕವೇ ಹೊರಹಾಕುತ್ತದೆ. ಆದ್ದರಿಂದ ನಮ್ಮ ದೇಹಕ್ಕೆ ಬೇಕಾದಷ್ಟು ಮಾತ್ರನೀರನ್ನು ಇಟ್ಟು ಉಳಿದ ನೀರಿನ ಅಂಶವನ್ನು ತಮ್ಮ ದೇಹದಿಂದ ಮೂತ್ರದ ಅಥವಾ ಬೆವರಿನ ಮೂಲಕ ಹೊರ ಹಾಕುವ ಕೆಲಸವನ್ನು ಈ ಮೂತ್ರಪಿಂಡಗಳು ಮಾಡಿ ನಮ್ಮ ದೇಹದ ನೀರಿನ ಸಮತೋಲನವನ್ನು ಕಾಪಾಡುತ್ತದೆ.

 ಇದು ಹಲವು ಕೆಲಸಗಳನ್ನು ನಿರ್ವಹಿಸುತ್ತದೆ ಅದರಲ್ಲಿ ಮುಖ್ಯವಾಗಿ :

 ಎಂಡ್ರೋಪ್ರೋಟೀನ್ : ಇದು ಅಸ್ಥಿಮಜ್ಜೆಯನ್ನು ಕೆಂಪು ರಕ್ತ ಕಣಗಳನ್ನು ಉತ್ಪಾದಿಸುವ ಪ್ರಚೋದಿಸುತ್ತದೆ.

 ರೆನಿನ್ : ಇದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

 ಕ್ಯಾಲ್ಸಿಟ್ರೊಲ್: ಒಂದು ರೀತಿಯ ವಿಟಮಿನ್ ಡಿ ದೇಹದಲ್ಲಿ ಕ್ಯಾಲ್ಸಿಯಂ ಸಮತೋಲನವನ್ನು ನಿಯಂತ್ರಿಸುತ್ತದೆ.

 ರಕ್ತ ಶುದ್ಧೀಕರಣ

    ನಮ್ಮ ದೇಹದ ನಾನಾ ಅಂಗಗಳಲ್ಲಿ ಉತ್ಪತ್ತಿಯಾಗುವ ಅನೇಕ ರೀತಿಯ ಅನಾವಶ್ಯಕವಾದ ಪದಾರ್ಥಗಳು ರಕ್ತದಲ್ಲಿ ಉತ್ಪತ್ತಿಯಾಗುವ ನಾನಾ ವಿಷಯಕ್ತ  ಕಲ್ಮಶಗಳನ್ನು ಈ ಮೂತ್ರಪಿಂಡಗಳು ತೆಗೆದು ಶುದ್ಧೀಕರಿಸುವ ಕಾರ್ಯವನ್ನು ಮಾಡುತ್ತದೆ. ಈ ರೀತಿ ಶುದ್ದಿ ಕಲಿಸಿದ ರಕ್ತವನ್ನು ಮತ್ತೆ ಹೃದಯದ ಬೃಹತ್ ಕುಕ್ಷಿಗೆ ಕಳಿಸುತ್ತದೆ. ಅದು ಅಲ್ಲಿಂದ ಶ್ವಾಸಕೋಶಗಳಿಗೆ ಕಳುಹಿಸಿ,ಅಲ್ಲಿ ಮತ್ತೆ ರಕ್ತದಲ್ಲಿರುವ ಇಂಗಾಲದ ಡೈಯಾಕ್ಸೈಡ್ ಅನ್ನು ಬಿಟ್ಟು ಆಮ್ಲಜನಕವನ್ನು ತೆಗೆದುಕೊಂಡು ರಕ್ತ ಪೂರ್ಣಶುದ್ದಿಯಾಗುತ್ತದೆ ಅದು ಅಲ್ಲಿಂದ ಮತ್ತೆ ಹೃದಯದ ಎಡಹೃಕ್ತುಕ್ಷಿಗೆ ಕಳಿಸುತ್ತದೆ ಹೃದಯ ಈ ರಕ್ತ ಶುದ್ಧರಕ್ತವನ್ನು ಅಲ್ಲಿಂದ ದೇಹದ ಎಲ್ಲಾ ಅಂಗಗಳಿಗೆ ರಕ್ತನಾಳಗಳ ಮೂಲಕ ಕಳಿಸುತ್ತದೆ.