ಮನೆ ಜ್ಯೋತಿಷ್ಯ ಮೂತ್ರಪಿಂಡ

ಮೂತ್ರಪಿಂಡ

0

 ಕ್ಯಾಲ್ಸಿಯಂ ಸಮತೋಲನ,:

Join Our Whatsapp Group

    ಒಂದು ರೀತಿಯ ವಿಟಾಮಿನ್ ‘ಡಿ’ ದೇಹದಲ್ಲಿ ಕ್ಯಾಲ್ಸಿಯಂ ಸಮತೋಲನವನ್ನು ಕಾಪಾಡುತ್ತದೆ. ಇದನ್ನು ನಾವು ‘ಕ್ಯಾಲ್ಸಿಟ್ರೋಲ್’ ಎನ್ನುತ್ತೇವೆ. ‘ಡಿ’ ವಿಟಾಮಿನ್ ನಾವು ಸೂರ್ಯನ ಬಿಸಿಲಿನಿಂದ ನೈಸರ್ಗಿಕವಾಗಿ ಪಡೆಯಬಹುದು. ಯಾರು ಬಿಸಿಲನ್ನು ಕೆಲವು ನಿಮಿಷಗಳಾದರೂ ದೇಹಕ್ಕೆ ಪಡೆಯುವುದಿಲ್ಲವೂ ಅವರಿಗೆ ಈ ವಿಟಾಮಿನ್ ಕೊರತೆಯಾಗಿ, ಮೂಳೆ ಸಂಬಂಧವಾದ ವ್ಯಾಧಿಗಳು ಬರುವ ಸಾಧ್ಯತೆ ಇರುತ್ತದೆ.

     ನಮ್ಮ ದೇಹದಲ್ಲಿರುವ ಮೂಳೆಗಳು ಬಹಳ ದಿನಗಳವರೆಗೆ ಗಟ್ಟಿಮುಟ್ಟಾಗಿ ಇರಬೇಕಾದರೆ ನಮ್ಮ ಮೂಳೆಗಳಿಗೆ ಕ್ಯಾಲ್ಸಿಯಂ ಅವಶ್ಯಕ. ನಮ್ಮ ದೇಹಕ್ಕೆ ಆಹಾರದ ಕ್ಯಾಲ್ಸಿಯಂ ಇರುತ್ತದೆ ಅಥವಾ ಇಲ್ಲದೆ ಇರುತ್ತದೆ. ಅದು ನಮ್ಮದೇಹಕ್ಕೆ ಯಾವ ಪ್ರಮಾಣದಲ್ಲಿ ಬೇಕು ಎಂದು ನಿರ್ಧರಿಸಿ,ಅದನ್ನು ಉಪಯೋಗಿಸಿಕೊಂಡು ಉಳಿದಿದ್ದನ್ನು ಹೊರಹಾಕುವ ಕೆಲಸವನ್ನು ಈ ಮೂತ್ರಪಿಂಡ ನೋಡಿಕೊಳ್ಳುತ್ತದೆ. ಇದನ್ನು ‘ಕ್ಯಾಲ್ಸಿಯಂ ಮೆಟಬಾಲಿಸಂ’ ಎಂದು ಕರೆಯುತ್ತಾರೆ

 ಹಿಮೋಗ್ಲೋಬಿನ್ ಉತ್ಪತ್ತಿ :

    ನಮ್ಮ ದೇಹದಲ್ಲಿ ಹರಿಯುತ್ತಿರುವ ರಕ್ತದಲ್ಲಿ ಅನೇಕ ಖನಿಜಾಂಶಗಳು, ಆಹಾರ ಪೋಷಕಾಂಶಗಳು, ಔಷಧಗಳು, ಆಮ್ಲಜನಕ, ಕೆಂಪು ಮತ್ತು ಬಿಳಿ ರಕ್ತಕಣಗಳಿಂದ ಕೂಡಿ ಅದನ್ನು ದೇಹದ ಪ್ರತಿ ಅಂಗ ಮತ್ತು ಅಂಗದಲ್ಲಿ ಕೇವಲ ಮಾಡುವ ಜೀವಕೋಶಗಳಿಗೆ ಬೇಕಾಗಿರುವ ಪೌಷ್ಟಿಕ ಆಹಾರ, ಔಷಧ, ಆಮ್ಲಜನಕವನ್ನು ನೀಡಿ ದೇಹದ ಪ್ರತಿಯೊಂದು ಅಂಗ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳುವ ಕೆಲಸ ಈ ರಕ್ತ ಮಾಡುತ್ತದೆ.ಬಿಳಿ ರಕ್ತಕಣಗಳು ನಮ್ಮ ದೇಹದಲ್ಲಿ ಪ್ರವೇಶಿಸುವ ವಿಷ ಕ್ರಿಮಿಗಳಿಂದ ಹರಡುವ ರೋಗ ನಾಶಮಾಡುವ ಪ್ರತಿರೋಧಕಶಕ್ತಿಯನ್ನು ಹೊಂದಿದೆ, ಕೆಂಪು ರಕ್ತಕಣಗಳು ನಮ್ಮ ದೇಹ ಎಲ್ಲಾ ಅಂಗಗಳು ಸದಾ ಆರೋಗ್ಯದಿಂದ ಕೆಲಸ ನಿರ್ವಹಿಸಬೇಕಾದರೆ ಅದಕ್ಕೆ ಇಂಧನ ಶಕ್ತಿಯುತವಾದ ಆಮ್ಲಜನಕದ ಅವಶ್ಯಕತೆ ಬೇಕು. ಈ ಆಮ್ಲಜನಕವನ್ನು ಕೆಂಪು ರಕ್ತಕಣದಲ್ಲಿರುವ ಹಿಮೋಗ್ಲೋಬಿನ್ ಎಂಬ ವಸ್ತು ಶ್ವಾಶಕೋಶದಲ್ಲಿ   ನಾವು ಸೇವಿಸುವ ಗಾಳಿಯಲ್ಲಿ ಆಮ್ಲಜನಕವನ್ನು ಹೀರಿ ಅಂಗಗಳಿಗೆ ನೀಡುವ ಕೆಲಸವನ್ನು ಮಾಡುತ್ತದೆ.

   ಈ  ಆಮ್ಲಜನಕವನ್ನು ಸರಿಯಾದ ಪ್ರಮಾಣದಲ್ಲಿ ಅಂಗಗಳಿಗೆ ನೀಡಿದರೆ ಅಂಗಗಳೂ ಸಹ ಸರಿಯಾಗಿ ತಮ್ಮ ಕಾರ್ಯವನ್ನು ನಿರ್ವಹಿಸುತ್ತವೆ. ಸರಿಯಾದ ಪ್ರಮಾಣದಲ್ಲಿ ನೀಡದೇ ಇರುವ ಪಕ್ಷದಲ್ಲಿ ಅದು ಕೆಲಸ ಸರಿಯಾಗಿ ಮಾಡದೆ ದೋಷಯುಕ್ತವಾಗಿ ಕಾರ್ಯನಿರ್ವಹಿಸಿ, ನಾವು ಕೆಲಸ ಮಾಡುವಾಗ ನಮಗೆ ಸುಸ್ತಿನ ರೂಪದಲ್ಲಿ ತಿಳಿಸುತ್ತದೆ. ನಾವು ಬಲವಂತವಾಗಿ ಕಾರ್ಯ ಮುಂದುವರಿಸಿದರೆ ನಮ್ಮ ಅಂಗಗಳು ನಿಷ್ಪೀಯವಾಗುತ್ತವೆ ಆದ್ದರಿಂದ ನಾವು ಮಾಡುವ ಕೆಲಸಕ್ಕೆ ಸರಿಯಾಗಿ ನಮ್ಮ ಅಂಗಗಳಿಗೆ ಶುದ್ಧವಾದ ರಕ್ತ ಅಂದರೆ ಆಮ್ಲಜನಕ ಬೇಕು. ಈ ಕೆಂಪು ರಕ್ತ ಕಣಗಳಿಗೆ ಈ ಹಿಮೋಗ್ಲೋಬಿನ್ ಪೂರೈಕೆ ಮಾಡುವ ಕೆಲಸ ಈ ಮೂತ್ರಪಿಂಡಗಳು ಮಾಡುತ್ತವೆ.

     ಈ ಮೇಲೆ ಹೇಳಿದ ನಾಲ್ಕು ಕೆಲಸಗಳಲ್ಲಿ ಯಾವುದಾದರೂಂದು ಏರುಪೇರಾದರೂ ಅದು ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗುತ್ತದೆ. ಅಧಿಕ ರಕ್ತದೊತ್ತಡ,ಮಧುಮೇಹ, ಅತಿ ಹೆಚ್ಚು ಮೂತ್ರ ವಿಸರ್ಜನೆ,ಮುಖ ಮತ್ತು ಕಣ್ಣುಗಳ ಸುತ್ತಾ ಊದಿ ಕೊಳ್ಳುವುದು ಫಿಟ್ಸ್, ಪಾರ್ಶ್ವವಾಯುವಂತಹ  ವ್ಯಾಧಿಗಳಿಗೆ ತುತ್ತಾಗಬೇಕಾಗುತ್ತದೆ.ನಮ್ಮ ಹೃದಯದ ಸುತ್ತಾ ಒಂದು ತೆಳುವಾದ ನೀರಿನ ಪೊರೆ ಇರುತ್ತದೆ.ಇದು ಹೃದಯ ಚಲನೆಗೆ ಸಹಾಯ ಮಾಡುತ್ತದೆ. ಮೂತ್ರಪಿಂಡ ವೈಫಲ್ಯವಾದಾಗ ಕಣ್ಣುಗಳಲ್ಲಿ ನೀರು ತುಂಬಿಕೊಳ್ಳುವಂತೆ ಹೃದಯದ ಸುತ್ತಲೂ ನೀರು ತುಂಬಿ ಹೃದಯ ಚಲನೆಗೆ ಅಡ್ಡಿಯಾಗಿ ಹೃದಯಾಘಾತಕ್ಕೆ  ಅವಕಾಶವಾಗುತ್ತದೆ.

    ನಮ್ಮ ನಿತ್ಯ ಆಹಾರ ಸೇವನೆಗೆ ತೊಂದರೆಯಾಗುತ್ತದೆ ಕಾರಣ, ನಾವು ಆಗ ದಿನಕ್ಕೆ ಕನಿಷ್ಠ 400 ಮಿಲಿಲೀಟರ್ ನಷ್ಟು ಮಾತ್ರ ನೀರು ಸೇವಿಸಬೇಕು. ಹಣ್ಣು ಹಂಪಲು ತಿನ್ನುವಂತಿಲ್ಲ. ಮಧುಮೇಹವಿದ್ದರೆ ಸಕ್ಕರೆ ಪದಾರ್ಥಗಳನ್ನು ಸೇವಿಸುವಂತಿಲ್ಲ.