ಮನೆ ಆರೋಗ್ಯ ಮೂತ್ರಪಿಂಡಗಳಲ್ಲಿ ಕಲ್ಲುಗಳು

ಮೂತ್ರಪಿಂಡಗಳಲ್ಲಿ ಕಲ್ಲುಗಳು

0

     ಮೂತ್ರಪಿಂಡಗಳಲ್ಲಿ ಕಲ್ಲುಗಳುಂಟಾಗುವುದು ಇತ್ತೀಚೆಗೆ ಹೆಚ್ಚಾಗುತ್ತಿರುವ ಸಂಗತಿ ಎಂದು ತಿಳಿದು ಬಂದಿದೆ.ಒಟ್ಟು ಜನಸಂಖ್ಯೆಯಲ್ಲಿ ವರ್ಷಕ್ಕೆ 10,000 ಮಂದಿಯಲ್ಲಿ ಏಳರಿಂದ 21 ಜನರಿಗೆ ಮೂತ್ರಪಿಂಡಗಳಲ್ಲಿ ಕಲ್ಲುಗಳುಂಟಾಗುತ್ತಿರುವುದೆಂದು ತಿಳಿಯುತ್ತದೆ.

Join Our Whatsapp Group

      ಮೂತ್ರಪಿಂಡಗಳಲ್ಲಿ ಕಲ್ಲುಗಳುಂಟಾಗುವುದು ಸ್ತ್ರೀಯರಿಗಿಂತ ಪುರುಷರಲ್ಲಿ ಹೆಚ್ಚು ಶೇಕಡ 80 ಪ್ರಕರಣಗಳು ಪುರುಷರಿಗೆ ಸಂಬಂಧಿಸಿದವೇ ಆಗಿರುತ್ತವೆ.

    ಹಾಗಂದರೇನು?

     ವೈದ್ಯಕೀಯವಾಗಿ ಮೂತ್ರಪಿಂಡಗಳಲ್ಲಿ ಏರ್ಪಡುವ ಕಲ್ಲುಗಳನ್ನು Calculiಎನ್ನುತ್ತಾರೆ. ಸಾಮಾನ್ಯವಾಗಿ ಕಲ್ಲುಗಳು ಮೂತ್ರಪಿಂಡಗಳ ಒಳಗೆ ಏರ್ಪಡುತ್ತ ವಾದರೂ,  ಬ್ಲಾಡರ್ (ಮೂತ್ರಕೋಶ )ನಲ್ಲಿಯೂ Ureter ಮೂತ್ರನಾಳದಲ್ಲಿಯೂ ಸಹ ಕಾಣಿಸಿಕೊಳ್ಳುತ್ತವೆ.

      ರಕ್ತದಲ್ಲಿ ಕ್ಯಾಲ್ಸಿಯಂ, ಪ್ಲಾಸ್ಟರಸ್, ಯೂರಿಕ್ ಆಯ್ಸಿಡ್ ಲವಣಗಳು(Salts) ಅಧಿಕವಾಗುವುದರ ಮೂಲಕ ಈ ಕಲ್ಲುಗಳು ಉತ್ಪತ್ತಿಯಾಗುತ್ತವೆ. ಅಧಿಕವಾಗಿರುವ ಲವಣಗಳು ಹರಳಿನ (Crystal) ರೂಪವನ್ನ್ಕುಳೆದು ಕಿಡ್ನಿ ಯೊಳಗಿನ ಪೊರೆಯ ಮೇಲೆ ಶೇಖರವಾಗುತ್ತವೆ.

     ಇಲ್ಲವಾದರೆ ಮೂತ್ರ ಮಾರ್ಗ(Urinary tract)ಸೋಂಕಿಗೆ ಗುರಿಯಾಗಿರುವುದರ ಮೂಲಕವೂ ಸಹ, ಮೂತಪಿಂಡಗಳಲ್ಲಿ ಕಲ್ಲುಗಳು ಉಂಟಾಗುತ್ತವೆ.

      ಕಿಡ್ನಿಯನ್ನಾಗಲಿ, ಬ್ಲಾಡರ್ ನಲ್ಲಾಗಲಿ ಮರಳಿನ ಕಣದ ಗಾತ್ರದಿಂದ ಇನ್ನೂ ಹೆಚ್ಚಿನ ಗಾತ್ರದವರಗೆ ಇರುವ ಈ ಕಲ್ಲುಗಳು, ಆಯಾ ಭಾಗಗಳಲ್ಲಿ ಕದಲದೆ ಇರುವವರೆಗೆ ನಮಗೇನೂ ಸಮಸ್ಯೆಯಾಗದು. ಇದ್ದರೂ ಇಲ್ಲದಂತೆಯೇ

ಆದರೆ ಗಾತ್ರದಲ್ಲಿ ಎಷ್ಟು ಚಿಕ್ಕದಾಗಿರುವ ಕಲ್ಲಾದರೂ ಕಿಡ್ನಿಯಿಂದ ಬ್ಲಾಡರಿನೊಳಕ್ಕೆ ಹೋಗುತ್ತಿರುವಾಗ, Ureter ಒಳಗಿನ ಮೃದುವಾದ ಪದರ (ಲೈನಿಂಗ್ ) ಹಾನಿಗಿಡಾ ಗಲು ಪ್ರಾರಂಭಿಸುತ್ತಲೇ ನಮಗೆ ಸಹಿಸಲಾರದ ನೋವುಂಟಾಗುತ್ತದೆ.

ಲಕ್ಷಣಗಳು

ಪೃಷ್ಠದ ಹಿಂಭಾಗದಲ್ಲಿ ಹೇಳಲಾರದಷ್ಟು ತೀವ್ರ ನೋವು ಆರಂಭವಾಗಿ ಮುಂದುಗಡೆಯ ಕಿಬ್ಬಟ್ಟೆಯತನಕ ವ್ಯಾಪಿಸುತ್ತದೆ. ಅಲ್ಲಿಂದ ವೃಷಣಗಳ ಚೀಲ, ಪುರುಷಾಂಗ(Scrotum) ಇಲ್ಲವೇ ಸ್ತ್ರೀಯರಿಗಾದರೆ ಜನಂದ್ರಿಯದ ವರೆಗೂ ವ್ಯಾಪಿಸುತ್ತದೆ.

   ಕಿಡ್ನಿ ಕಲ್ಲು ಮೂತ್ರಪಿಂಡದ ಬ್ಲಾಂಡರ್ ವರೆಗಿರುವ Ureter (ಮೂತ್ರನಾಳ) ಎಂಬ ಟ್ಯೂಬಿನಲ್ಲಿ ಚಲಿಸುವಾಗ, ನೋವು ಅಲೆ ಅಲೆಯಾಗಿ ಹರಿಯುತ್ತಾ ಪಿಡಿಸುತ್ತದೆ.

ಈ ನೋವಿನ ತೀವ್ರತೆ ಕೆಲಕಾಲದ ನಂತರ ಗರಿಷ್ಠ ಮಟ್ಟ ತಲುಪಿ, ಒಂದು ನಿಮಿಷದವರೆಗೆ ಹಾಗೆಯೇ  ಇದ್ದು ನಂತರ ಕಡಿಮೆಯಾಗುತ್ತದೆ. ತಕ್ಷಣ ಕೆಲವೇ ನಿಮಿಷಗಳಲ್ಲಿ ಪುನಃಪ್ರಾರಂಭವಾಗುತ್ತದೆ.

ಆಗಾಗ ವಾಕರಿಕೆ, ನಡುಕದಿಂದ ಕುಡಿದ ಜ್ವರ, ವಾಂತಿ ಕೂಡಾ ಇರಬಹುದು.

ಮೂತ್ರ ವಿಸರ್ಜನೆ ಮಾಡುವಾಗ ನೋವಿರುತ್ತದೆ.

ಪೃಷ್ಠದ ಹಿಂಭಾಗವನ್ನಾಗಲಿ, ಕಿಬ್ಬೊಟ್ಟೆಯನ್ನಾಗಲಿ ಮುಟ್ಟಿಕೊಂಡರೆ ಸಾಕು ನೋವು ಪ್ರಾರಂಭವಾಗುತ್ತದೆ.

ಎಷ್ಟು ಕಾಲದಲ್ಲಿ ಏರ್ಪಡುತ್ತವೆ?

ದೊಡ್ಡ ಕಲ್ಲುಗಳುಂಟಾಗಲು ವರ್ಷಗಳೇ ಹಿಡಿಯಬಹುದು. ಆದರೆ ಚಿಕ್ಕ ಕಲ್ಲುಗಳು ಮಾತ್ರ ಒಂದೆರಡು ತಿಂಗಳುಗಳಲ್ಲಿಯೇ ಉತ್ಪತ್ತಿಯಾಗುತ್ತವೆ.

ಕಾರಣಗಳು

ಸಾಮಾನ್ಯವಾಗಿ ಮೂತ್ರದಲ್ಲಿ ರಾಸಾಯನಿಕಗಳು ಬಹಳ ಸಾಂದ್ರವಾಗಿ (Concentate)ಹರಳಿನ ರೂಪವನ್ನು ತಳೆಯುವುದರಿಂದ ಈ ಕಲ್ಲುಗಳು ಂಟಾಗುತ್ತವೆ ಹೀಗಾಗಲು ಕಾರಣಗಳೇನೆಂದರೆ :

ಕಲ್ಲುಗಳು ಏರ್ಪಡುವ ಶರೀರತತ್ವ(Genetic Predisposition)ಇರುವುದರಿಂದ ದಿನವೂ ಸೇವಿಸುವ ಆಹಾರದಲ್ಲಿ ಕ್ಯಾಲ್ಸಿಯಂ, ಇತರ ಖನಿಜ ಲವಣಗಳು ಸ್ವಲ್ಪ ಹೆಚ್ಚಾಗಿರುವುದರಿಂದ.(ಒಂದೊಂದು ಸ್ಥಳಗಳಲ್ಲಿ ಅಂತರ್ಜಲದಲ್ಲಿ ಲವಣಗಳು ಹೆಚ್ಚಾಗಿರುತ್ತವೆ )

ಯೂರಿಕ್ ಆಸಿಡ್ ಅಧಿಕವಾಗುವುದರಿಂದ, ಕೆಲವು ಬಗೆಯ ಔಷಧಗಳನ್ನು ವಿಟಮಿನ್ ‘ಸಿ’ಇಲ್ಲವೇ ವಿಟಮಿನ್ ‘ಡಿ’ ಗಳನ್ನು ಹೆಚ್ಚಾಗಿ ತೆಗೆದುಕೊಳ್ಳುವುದರಿಂದ ಮೂತ್ರನಾಳ ಸೋಂಕಿಗೆ ಗುರಿಯಾಗುವುದರಿಂದ ಅತಿಯಾಗಿ ಬೆವರುತ್ತಾ ಶರೀರದಲ್ಲಿನ ನೀರನ್ನು ಹೆಚ್ಚಾಗಿ ಹೊರ ಹಾಕುವ ಉಷ್ಣವಲಯ ಪ್ರದೇಶಗಳಲ್ಲಿ ವಾಸಿಸುವವರಿಗೆ  ಅನ್ನಿಸುತ್ತದೆ.