ಕಿಡ್ನಿಗಳ ನಿರ್ವಹಿಸುವ ಕಾರ್ಯ :-
ಕಿಡ್ನಿಗಳು ರಕ್ತವನ್ನು ಸುದ್ದಿಗೊಳಿಸುತ್ತವೆ. ರಕ್ತದಲ್ಲಿ ಮಲಿನ ವಸ್ತುಗಳನ್ನು ಕಿಡ್ನಿಗಳು ಸೋಸಿ ತೆಗೆದು, ಮೂತ್ರ ದ ರೂಪದಲ್ಲಿ ಹೊರಗೆ ಕಳಿಸುವ ಮೂಲಕ ರಕ್ತವನ್ನು ಮಾಲಿನ್ಯ ರಹಿತಗೊಳಿಸುತ್ತವೆ.
ಮೂತ್ರಪಿಂಡಗಳು ನಿರ್ವಹಿಸು ವಿವಿಧ ಕಾರ್ಯಗಳು ಈ ಕೆಳಗಿನಂತಿವೆ.
★ ಶರೀರದಲ್ಲಿ ಉಪ್ಪು. ನೀರು ತಕ್ಕ ಪ್ರಮಾಣದಲ್ಲಿರುವಂತೆ ನೋಡಿಕೊಳ್ಳುತ್ತವೆ.
★ಸೋಡಿಯಂ, ಪೊಟ್ಯಾಸಿಯಮ್ ಗಳು ಸಮತೋಲನದಲ್ಲಿರುವಂತೆ ನೋಡಿಕೊಳ್ಳುತ್ತವೆ.
★ರಕ್ತದಲಿನ ಆಮ್ಲ ಕ್ಷಾರಗಳ ಅನುಪಾತ ಸರಿಯಾಗಿರುವಂತೆ ನೋಡಿಕೊಳ್ಳುತ್ತವೆ.
★ ಕೆಂಪು ರಕ್ತ ಕಣಗಳನ್ನು ತಯಾರಿಸುವ ಎರಿತ್ರೋಪ್ರೋಟೀನ್ ಹಾರ್ಮೋನಿನ ಉತ್ಪತ್ತಿಯನ್ನು ಕ್ರಮಬದ್ಧಗೊಳಿಸುತ್ತವೆ.
★ರಕ್ತದೊತ್ತಡವನ್ನು ಬಿ.ಪಿ.ಯನ್ನು ನಿಯಂತ್ರಿಸುವ ರೇನಿನ್ ಎಂಬ ಹಾರ್ಮೋನನ್ನು ಉತ್ಪಾದಿಸುತ್ತವೆ
★ವಿಟಮಿನ್ ‘ಡಿ’’ ಶರೀರಕ್ಕೆ ಉಪಯೋಗವಾಗುವಂತೆ ಮಾಡುತ್ತವೆ
ಕಿಡ್ನಿ ಫೇಲ್ಯೂರ್ ಅಂಕಿ ಅಂಶಗಳು
ಪ್ರತಿ ನೂರು ಮೂತ್ರಪಿಂಡಗಳು ರೋಗಿಗಳಲ್ಲಿ ಪ್ರತ್ಯೇಕ ರೋಗ ದವರು ಈ ಕೆಳಗಿನ ಪ್ರಮಾಣದಲ್ಲಿರುತ್ತಾರೆ.
★30 ಮುಂದಿ ಡಯಾಬಿಟಿಕ್ ರೋಗಿಗಳು
★20 ಮಂದಿ ಕಿಡ್ನಿ ಫಿಲ್ಟರ್ ಕೆಟ್ಟು ಹೋದ ರೋಗಿಗಳು
★ಹತ್ತು ಮಂದಿ ಹೈಬೀಪಿಯನ್ನು ನಿಯಂತ್ರಿಸಿಕೊಳ್ಳದವರು
ಐದು ಮಂದಿ ಮೂತ್ರನಾಳ ಸೋಂಕಿರುವ ರೋಗಿಗಳು
★5 ಮಂದಿ Polycystic Kidney Disease ರೀತಿಯ ರೋಗ ಇರುವವರು
★ಐದು ಮಂದಿ ಕಿಡ್ನಿ ಸ್ಟೋನ್ ರೋಗಿಗಳು
★25 ಮಂದಿ ಯಾವ ಕಾರಣವೂ ಇಲ್ಲದೆಯೇ, ಕಿಡ್ನಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂದು ಮೊದಲ ಬಾರಿಗೆ ಡಾಕ್ಟರ್ ಬಳಿ ಬಂದವರು
ಜಟಿಲತೆಗಳು
ಆ ಕ್ಯೂಟ್ ಕಿಡ್ನಿ ಫೇಲ್ಯೂರ್ ಇಂದ ಬರುವ ಜಟಿಲತೆಗಳು
ನ್ಯೂಮೋನಿಯ ಶಾಸಕೋಶಗಳಲ್ಲಿ ಬ್ಯಾಕ್ಟೀರಿಯಗಳ ಪ್ರವೇಶ
ರಕ್ತದ ಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟುವುದು
ಕ್ರಾನಿಕ್ ಕಿಡ್ನಿ ಫೇಲ್ಯೂರ್ ನಿಂದ ಉಂಟಾಗುವ ಜಟಗತೆಗಳು
★ತೀವ್ರ ರಕ್ತದೊತ್ತಡ ಹೈಬಿಪಿ
★ರಕ್ತ ಹೀನತೆ ಅನೀಮಿಯಾ
★ಪ್ಯಾರಾಥೈರಾಯಿಡ್ ಗ್ರಂಥಿ ಅತಿಯಾಗಿ ಕೆಲಸ ಮಾಡುವುದು
★ನರಗಳ ಅಸ್ವಸ್ಥತೆ
★ಸ್ನಾಯುಗಳ ಅಸ್ವಸ್ಥತೆ