ಮನೆ ಆರೋಗ್ಯ ಮೂತ್ರಪಿಂಡಗಳು : ಭಾಗ 5

ಮೂತ್ರಪಿಂಡಗಳು : ಭಾಗ 5

0

ರೋಗನಿರ್ಧಾರ

 ಕಿಡ್ನಿ ಸಮಸ್ಯೆ ಇದೆ ಅನಿಸಿದಾಗ ಡಾಕ್ಟರ್ ಮೊದಲು ಈ ಕೆಳಗಿನ ಸರಳ ಪರೀಕ್ಷೆಗಳನ್ನು ಮಾಡುತ್ತಾರೆ:

Join Our Whatsapp Group

★ಸಾಮಾನ್ಯವಾಗಿ ಮಾಡುವ (ಮೂತ್ರ ಪರೀಕ್ಷೆ, ಮೂತ್ರದಲ್ಲಿ ಆಲ್ಬುಮಿನ್ ಪ್ರಮಾಣ ಹೆಚ್ಚಾಗಿದ್ದರೆ, ಕಿಡ್ನಿಯ ಫಿಲ್ಟರ್ ಗಳಲ್ಲಿ ಏನೋ ಲೋಪವಿದೆಯೆಂದು ಅರ್ಥ )

★ರಕ್ತದಲ್ಲಿ ಯೂರಿಯಾ Creatinine ತರಹದ ಮಲಿನ ವಸ್ತುಗಳ ಪ್ರಮಾಣವನ್ನು ತಿಳಿಯಲು ರಕ್ತ ಪರೀಕ್ಷೆ (ಇವು ಹೆಚ್ಚಾಗಿದ್ದರೆ ಕಿಡ್ನಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂದು ಸೂಚನೆ.)

★ಅಲ್ಟ್ರಾ ಸೋನೋಗ್ರಫಿ (ಈ ಪರೀಕ್ಷೆಯ ಮೂಲಕ ಕಿಡ್ನಿ ಕಲ್ಲುಗಳು ಅಡ್ಡಿಯಾಗುತ್ತಿವೆಯೇನೋ, ಅಲ್ಲದೆ ಕಿಡ್ನಿಗಳು ಬಹಳ ಸಣ್ಣದಾಗಿದ್ದರೆ ಗುಣವಾಗದ ಕಿಡ್ನಿ ವ್ಯಾದಿಯಿದೆಯೆಂದು   ಅರ್ಥವಾಗುತ್ತದೆ.)

ಈ ಮೇಲೆ ಹೇಳಿದ ಟೆಸ್ಟುಗಳ ನಂತರ ಡಾಕ್ಟರ್ ಇನ್ನೂ ಅಗತ್ಯವೆಂದು ಭಾವಿಸಿದರೆ, Intravenous Pyelography ಇಲ್ಲವೇ ಕಿಡ್ನಿ  ಬಾಯಪ್ಸಿ ರೀತಿಯ ಮತ್ತಿತರ  ಪರೀಕ್ಷೆಗಳನ್ನೂ ಮಾಡುತ್ತಾರೆ.

ಚಿಕಿತ್ಸೆ

★ಅಕ್ಯೂಟ್ ಕಿಡ್ನಿ ಫೇಲ್ಯೂರ್ ನಲ್ಲಿ ತೀವ್ರ ರಕ್ತಸ್ರಾವ  ಮೊದಲಾದ ಮೂಲಕಾರಣಗಳಿಗೆ ತುರ್ತು ಚಿಕಿತ್ಸೆ  ಮಾಡಲಾಗುತ್ತದೆ. ರಕ್ತ ಪೂರೈಕೆ 🥰(Blood Transfusion)ಇಲ್ಲವೇ Saline Intravenous Infusion ಮೂಲ ರಕ್ತ ಪ್ರಮಾಣವನ್ನು ರಕ್ತದೊತ್ತಡವನ್ನು ಸಾಮಾನ್ಯ ಸ್ಥಿತಿಗೆ  ತರಲಾಗುತ್ತದೆ.

★ಕಿಡ್ನಿ ಕಲ್ಲುಗಳು, ಟ್ಯೂಮರ್ ಗಳು, ಇಲ್ಲವೇ ಪ್ಲಾಸ್ಟೇಟ್ ಗ್ರಂಥಿ ಹೀಗ್ಗುವಿಕೆಯಂತಹ ಪರಿಸ್ಥಿತಿಗಳಲ್ಲಿ ಶಾಸ್ತ್ರಚಿಕಿತ್ಸೆ ಅಗತ್ಯವಾಗುತ್ತದೆ.

★ ಶರೀರದಲ್ಲಿನ ಹೆಚ್ಚುವರಿ Fluids ಕಡಿಮೆ ಮಾಡಿ,ಮೂತ್ರ ವಿಸರ್ಜನೆಯನ್ನು ಉತ್ತಮಗೊಳಿಸಲು Diuretic ಡ್ರಗ್ಸನ್ನು ಕೊಡಲಾಗುತ್ತದೆ.

★ಆಕ್ಯೂಟ್ ಕಿಡ್ನಿ ಫೇಲ್ಯೂರ್ ಗೆ ಸಂಬಂಧಿಸಿದ  ಬಹಳ ಪ್ರಕರಣಗಳಲ್ಲಿ, ಕಿಡ್ನಿಗಳು ಮತ್ತೆ ಸಾಧಾರಣ ಸ್ಥಿತಿಗೆ ಬರುವವರೆಗೆ, ರಕ್ತದಲ್ಲಿನ ಮಲಿನ ವಸ್ತುಗಳನ್ನು ಕೃತಕವಾಗಿ ಹೊರಹಾಕಲು ತಾತ್ಕಾಲಿಕ ಡಯಾಲಿಸಿಸ್ ಮಾಡುತ್ತಾರೆ.

★ಎಲ್ಲ ಬಗೆಯ ಕಿಡ್ನಿ ಫೇಲ್ಯೂರ್ ಚಿಕಿತ್ಸೆಗಳಲ್ಲಿಯೂ,ಆಹಾರಕ್ಕೆ ಸಂಬಂಧಿಸಿದಂತೆ ಎಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ.

★  ಕಿಡ್ನಿಗಳ ಮೇಲಿನ ಒತ್ತಡವನ್ನು ತಗ್ಗಿಸಲು ಪ್ರೋಟೀನ್ ಗಳು ಕಡಿಮೆಯಾಗಿಯೂ, ಕಾರ್ಬೋಹೈಡ್ರೇಟ್ ಗಳು ಹೆಚ್ಚಾಗಿಯೂ, ಇರುವಂತಹ ಆಹಾರವನ್ನು ತೆಗೆದುಕೊಳ್ಳಬೇಕು.

★ ಉಪ್ಪಿನ ಬಳಕೆ ಬಹಳ ಕಡಿಮೆ ಮಾಡಬೇಕು.

★ಮೂತ್ರ ವಿಸರ್ಜನೆ ಪ್ರಮಾಣವಾಗಿ ನೀರನ್ನು ಕುಡಿಯಬೇಕು

★ ಕಿಡ್ನಿಗಳ ಮೇಲೆ ಹೆಚ್ಚಿನ ಹೊರೆ ಬೀಳದಂತೆ  ಎಚ್ಚರ ವಹಿಸಬೇಕು.

★ಬಿ.ಪಿ. ಪ್ರಾರಂಭವಾದರೆ,ಅದನ್ನು ನಿಯಂತ್ರಣದಲ್ಲಿರುವ ಔಷಧಗಳನ್ನು ಉಪಯೋಗಿಸಬೇಕು.

★ಕಿಡ್ನಿಗಳು ಪೂರ್ತಿ ಹಾನಿಯಾಗುವುದನ್ನು ಎನ್ನುತ್ತಾರೆ ಇದಕ್ಕೆ ಜೀವನ ಪರ್ಯಂತ ಡಯಾಲಿಸಿಸ್ ಮಾಡಿಸುವುದು.ಇಲ್ಲವೇ ಬದಲಿ ಕಿಡ್ನಿ ಜೋಡಣೆ ವ್ಯವಸ್ಥೆ ಮಾಡಿಸುವುದೊಂದೇ ಮಾರ್ಗ. ನಮ್ಮ ದೇಶದಲ್ಲಿ ವರ್ಷಂಪ್ರತಿ ಸುಮಾರು ಲಕ್ಷ ಮಂದಿ  ಇಂತಹ ಕಿಡ್ನಿ ರೋಗಗಳಿಂದ  ನರಳುತ್ತಿದ್ದಾರೆಂದು ಅಂದಾಜು.

 ಕಿಡ್ನಿರೋಗಿಗಳು ಆಂಟಾಸಿಡ್ಸ್ ಆಮ್ಲರೋಧಕಗಳು

 ★ಗ್ಯಾಸ್ಟ್ರಬಲ್ ಇರುವವರಿಗೆ ಹೆಚ್ಚಾಗಿ ಬಳಕೆಯಾಗುವ ಆಂಟಾಸಿಡ್ ಗಳಲ್ಲಿ ಅಲ್ಯೂಮಿನಿಯಮ್ ಮ್ಯಾಗ್ಸೀಷಿಯಮ್  ಮಿಶ್ರಣಗಳಿರುತ್ತವೆ.

★ ಮ್ಯಾಗ್ನಿಷಿಯಮ್ ಲವಣಗಳು ಕಿಡ್ನಿಗಳಿಗೆ ಅಹಿತ ಮಾಡುತ್ತಾ ಮತ್ತಷ್ಟು ಹಾನಿಯುಂಟು ಮಾಡುತ್ತವೆ.

★ಕಿಡ್ನಿ ರೋಗಿಗಳಿಂದ ತೊಂದರೆಪಡುವ ರೋಗಿಗಳು ಮ್ಯಾಗ್ನಿಷಿಯಂ ಇರುವಂತಹ ಆಂಟಾಸಿಡ್ ಗಳನ್ನು ಬಳಸಕೂಡದು.

★ಅದಕ್ಕೆ ಬದಲಾಗಿ ಅವರು ಅಲ್ಯೂಮಿನಿಯಮ್  ಹೈಡ್ರಾಕ್ಸೈಡ್ ಇರುವ ಆಂಟಾಸಿಡ್ ಗಳನ್ನು ಬಳಸಬಹುದು. ಇವುಗಳಲ್ಲಿ ಮ್ಯಾಗ್ನೀಷಿಯಮ್ ಇಲ್ಲದಿರುವುದರಿಂದ ಹೆಚ್ಚು ಸುರಕ್ಷಿತ.