ಬೆಂಗಳೂರು : ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೇಯಿಸಿಯನ್ನು ಮೆಚ್ಚಿಸಲು ಆರೋಪಿ ಮಹೇಂದ್ರ ರೆಡ್ಡಿ ಪತ್ನಿಯನ್ನು ಕೊಲೆ ಮಾಡಿದ್ದ ಎಂದು ತನಿಖೆ ವೇಳೆ ತಿಳಿದುಬಂದಿದೆ.
ಪೊಲೀಸರ ಮಾಹಿತಿಗಳ ಪ್ರಕಾರ, ಆರೋಪಿ ಮಹೇಂದ್ರ ರೆಡ್ಡಿ ತನ್ನ ಪ್ರೇಯಸಿಯನ್ನು ಮೆಚ್ಚಿಸಲು ಪತ್ನಿ ಕೃತಿಕಾ ರೆಡ್ಡಿ ಕೊಲೆ ಮಾಡಿದ್ದಾನೆ ಎಂಬ ಸ್ಫೋಟಕ ಮಾಹಿತಿಯನ್ನು ಬಯಲಿಗೆಳೆದಿದ್ದಾರೆ.
ಆರೋಪಿ ಕೊಲೆ ಬಳಿಕ ತನ್ನ ಪ್ರೇಯಸಿಗೆ “I Have Killed” ಎಂದು ಮೆಸೇಜ್ ಮಾಡಿದ್ದ. ಪ್ರೇಯಸಿಯು ಮಹೇಂದ್ರ ರೆಡ್ಡಿಯ ವಾಟ್ಸಪ್ ಹಾಗೂ ಮೊಬೈಲ್ ನಂಬರ್‌ನ್ನು ಬ್ಲಾಕ್ ಮಾಡಿದ್ದಳು. ಹೀಗಾಗಿ ಫೋನ್‌ಪೇನಲ್ಲಿ ಮೆಸೇಜ್ ಮಾಡಿದ್ದ ಎಂದು ತನಿಖೆ ವೇಳೆ ಬಾಯ್ಬಿಟ್ಟಿದ್ದಾನೆ.
ಪ್ರೇಯಸಿ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಇಲ್ಲದಿದ್ದರೂ ಕೂಡ ಆರೋಪಿ ನಿರಂತರವಾಗಿ ಮೆಸೇಜ್ ಮಾಡಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.















