ಕೋಲ್ಕತಾ : ಮೊದಲ ಪಂದ್ಯದಲ್ಲೇ ಐದು ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡವನ್ನು ಬೇಟೆಯಾಡಿ 8 ವಿಕೆಟ್ ಗಳ ಜಯ ದಾಖಲಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ಆತಿಥೇಯ ಕೋಲ್ಕತಾ ನೈಟ್ ರೈಡರ್ಸ್ ಎದುರು ಗೆಲುವನ್ನು ಎದುರು ನೋಡುತ್ತಿದೆ. ಟಾಸ್ ಗೆದ್ದ ಕ್ಯಾಪ್ಟನ್ ಫಾಫ್ ಡು’ಪ್ಲೆಸಿಸ್ ಮೊದಲು ಬೌಲಿಂಗ್ ಮಾಡುವ ನಿರ್ಧಾರ ತೆಗೆದುಕೊಂಡರು.
ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಸಮಯ ಕಳೆದಂತೆ ಹುಲ್ಲುಹಾಸಿನ ಮೇಲೆ ತೇವಾಂಶ ಹೆಚ್ಚಾಗಲಿದೆ. ಹೀಗಾಗಿ ಎರಡನೇ ಇನಿಂಗ್ಸ್ನಲ್ಲಿ ಬೌಲಿಂಗ್ ಮಾಡುವುದು ಕಷ್ಟ. ಪ್ರಮುಖವಾಗಿ ಸ್ಪಿನ್ನರ್ ಗಳು ಚೆಂಡಿನ ಹಿಡಿತ ಕಂಡುಕೊಳ್ಳಲು ಕಷ್ಟ ಪಡಲಿದ್ದಾರೆ. ಹೀಗಾಗಿ ಆರ್ ಸಿಬಿ ಮೊದಲು ಬೌಲಿಂಗ್ ಮಾಡಿ ಎದುರಾಳಿಯನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕುವ ಪ್ರಯತ್ನ ಮಾಡಲಿದೆ.
ಇತ್ತಂಡಗಳ ಪ್ಲೇಯಿಂಗ್ XI ವಿವರ
ಕೆಕೆಆರ್ XI
ಮಂದೀಪ್ ಸಿಂಗ್, ರೆಹಮಾನುಲ್ಲಾ ಗುರ್ಬಝ್ (ವಿಕೆಟ್ ಕೀಪರ್), ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ (ನಾಯಕ), ರಿಂಕು ಸಿಂಗ್, ಆಂಡ್ರೇ ರಸೆಲ್, ಶಾರ್ದುಲ್ ಠಾಕೂರ್, ಸುನೀಲ್ ನರೈನ್, ಟಿಮ್ ಸೌಥೀ, ಉಮೇಶ್ ಯಾದವ್, ವರುಣ್ ಚಕ್ರವರ್ತಿ.
ಆರ್ ಸಿಬಿ XI
ವಿರಾಟ್ ಕೊಹ್ಲಿ, ಫಾಫ್ ಡು’ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್ ವೆಲ್, ಮೈಕೆಲ್ ಬ್ರೇಸ್ ವೆಲ್, ಶಹಬಾಝ್ ಅಹ್ಮದ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಕರಣ್ ಶರ್ಮಾ, ಹರ್ಷಲ್ ಪಟೇಲ್, ಆಕಾಶ್ ದೀಪ್, ಡೇವಿಡ್ ವಿಲ್ಲೀ, ಮೊಹಮ್ಮದ್ ಸಿರಾಜ್.
ರೋಚಕ ಜಯ ದಾಖಲಿಸಿದ್ದ ಆರ್ ಸಿಬಿ
2019ರಲ್ಲಿ ಕೊನೇ ಬಾರಿ ಕೆಕೆಆರ್ ಎದುರು ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಪೈಪೋಟಿ ನಡೆಸಿದ್ದ ಆರ್ ಸಿಬಿ ತಂಡ 10 ರನ್ಗಳ ರೋಚಕ ಜಯ ದಾಖಲಿಸಿತ್ತು. ಆ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮನಮೋಹಕ ಶತಕ ಬಾರಿಸಿ ಅಬ್ಬರಿಸಿದ್ದರು. ಹೀಗಾಗಿ ಈ ಬಾರಿಯೂ ಕೊಹ್ಲಿ ಮೇಲೆ ಸಾಕಷ್ಟು ನಿರೀಕ್ಷೆ ಇರಿಸಲಾಗಿದೆ.
ತಂಡಗಳ ವಿವರ
ಕೋಲ್ಕತಾ ನೈಟ್ ರೈಡರ್ಸ್
ನಿತೀಶ್ ರಾಣಾ (ನಾಯಕ), ಮನದೀಪ್ ಸಿಂಗ್, ರೆಹಮಾನುಲ್ಲಾ ಗುರ್ಬಝ್ (ವಿಕೆಟ್ಕೀಪರ್), ಅನುಕುಲ್ ರಾಯ್, ನಿತೀಶ್ ರಾಣಾ (ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ಶಾರ್ದುಲ್ ಠಾಕೂರ್, ಸುನೀಲ್ ನರೈನ್, ಟಿಮ್ ಸೌಥೀ, ಉಮೇಶ್ ಯಾದವ್, ವರುಣ್ ಚಕ್ರವರ್ತಿ, ವೆಂಕಟೇಶ್ ಅಯ್ಯರ್, ಎನ್. ಜಗದೀಶನ್, ಡೇವಿಡ್ ವೀಸಾ, ವೈಭವ್ ಅರೋರಾ, ಸುಯಶ್ ಶರ್ಮಾ, ಕುಲ್ವಂತ್ ಖೆಜ್ರೋಲಿಯಾ, ಹರ್ಷಿತ್ ರಾಣಾ.
ರಾಯಲ್ ಚಾಲೆಂಜರ್ಸ್ ಬೆಂಗಳೂರು
ಫಾಫ್ ಡು’ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಗ್ಲೆನ್ ಮ್ಯಾಕ್ಸ್ವೆಲ್, ಮೈಕಲ್ ಬ್ರೇಸ್ವೆಲ್, ಶಹಬಾಝ್ ಅಹ್ಮದ್, ಕರಣ್ ಶರ್ಮಾ, ಹರ್ಷಲ್ ಪಟೇಲ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ಡೇವಿಡ್ ವಿಲ್ಲೀ, ಸುಯಶ್ ಪ್ರಭುದೇಸಾಯಿ, ಅನುಜ್ ರಾವತ್, ಮಹಿಪಾಲ್ ಲೊಮ್ರೊರ್, ಸೋನು ಯಾದವ್, ಸಿದ್ದಾರ್ಥ್ ಕೌಲ್, ಫಿನ್ ಆಲೆನ್, ಮನೋಜ್ ಭಾಂಡಗೆ, ರಾಜನ್ ಕುಮಾರ್, ಅವಿನಾಶ್ ಸಿಂಗ್, ಹಿಮಾಂಶು ಶರ್ಮಾ.